Fake Email ಐಡಿಯಿಂದ ಸಂದೇಶ ಕಳುಹಿಸಿ ವಂಚನೆ
Team Udayavani, Aug 7, 2023, 9:30 PM IST
ಮಂಗಳೂರು: ವ್ಯಕ್ತಿಯೋರ್ವರಿಗೆ ಅವರ ಪರಿಚಯದ ವ್ಯಕ್ತಿಯ ನಕಲಿ ಇ-ಮೇಲ್ ಐಡಿಯ ಮೂಲಕ ಸಂದೇಶ ಕಳುಹಿಸಿ ಹಣ ಪಡೆದು ವಂಚಿಸಲಾಗಿದೆ.
ದೂರುದಾರರ ಇ-ಮೇಲ್ ಐಡಿಗೆ ಅವರ ಪರಿಚಯದ ವ್ಯಕ್ತಿಯೋರ್ವರ ಇ-ಮೇಲ್ ಐಡಿಯಿಂದ ಮೆಸೇಜ್ ಬಂದಿತ್ತು. ಅದರಲ್ಲಿ ಪರಿಚಯದ ವ್ಯಕ್ತಿಯ ಮಗಳ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಣೆ ಬಗ್ಗೆ ಸಂದೇಶವಿತ್ತು. ಅದಕ್ಕೆ ದೂರುದಾರರು ರಿಪ್ಲೈ ಮಾಡಿದ್ದರು. ಆ ಬಳಿಕ ವಾರ್ಷಿಕೋತ್ಸವದ ಬಗ್ಗೆ ಗಿಫ್ಟ್ ನೀಡಲು ಹಣದ ಅವಶ್ಯಕತೆ ಇದೆ ಎಂಬುದಾಗಿ ಸಂದೇಶ ಬಂದಿತ್ತು. ಇದನ್ನು ನಂಬಿದ ದೂರುದಾರರು ಪರಿಚಯದ ವ್ಯಕ್ತಿಯೇ ಸಂದೇಶ ಕಳುಹಿಸಿರಬಹುದು ಎಂದು ನಂಬಿ ಆ.4ರಂದು ರಾತ್ರಿ 16,970 ರೂ. ಮತ್ತು 27,000 ರೂ. ಕಳುಹಿಸಿದ್ದರು. ಅನಂತರವೂ ಅದೇ ಇ-ಮೇಲ್ ಐಡಿಯಿಂದ ಇನ್ನಷ್ಟು ಹಣದ ಅವಶ್ಯಕತೆ ಇದೆ ಎಂಬ ಸಂದೇಶ ಬಂದಿತ್ತು.
ದೂರುದಾರರು ಮತ್ತೆ 72,000 ರೂ.ಗಳನ್ನು ಕಳುಹಿಸಿದರು. ಅನಂತರ ಮತ್ತಷ್ಟು ಹಣದ ಅಗತ್ಯವಿರುವುದಾಗಿ ಸಂದೇಶ ಬಂತು. ಈ ಬಗ್ಗೆ ಸಂದೇಹ ಉಂಟಾಗಿ ದೂರುದಾರರು ಪರಿಚಯದ ವ್ಯಕ್ತಿಯನ್ನು ಖುದ್ದಾಗಿ ಭೇಟಿ ಮಾಡಿ ವಿಚಾರಿಸಿದರು. ಆಗ ಯಾರೋ ಅವರ ಪರಿಚಯದ ವ್ಯಕ್ತಿಯ ಇ-ಮೇಲ್ ಐಡಿಯನ್ನು ನಕಲಿ ಮಾಡಿ ಸಂದೇಶ ಕಳುಹಿಸಿ ಒಟ್ಟು 1,15,970 ರೂ. ವರ್ಗಾಯಿಸಿಕೊಂಡು ಮೋಸ ಮಾಡಿರುವುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.