Lok Sabha ಕರಾವಳಿ ಜಲಕೃಷಿ ಪ್ರಾಧಿಕಾರ ಮಸೂದೆ ಅಂಗೀಕಾರ
Team Udayavani, Aug 8, 2023, 1:17 AM IST
ಹೊಸದಿಲ್ಲಿ: ಲೋಕಸಭೆಯಲ್ಲಿ ಸೋಮವಾರ ಕರಾವಳಿ ಜಲಕೃಷಿ ಪ್ರಾಧಿಕಾರ (ತಿದ್ದು ಪಡಿ) ಮಸೂದೆ-2023ನ್ನು ಧ್ವನಿ ಮತದ ಮೂಲಕ ಅಂಗೀ ಕರಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಮೀನುಗಾರಿಕೆ ಸಚಿವ ಪರಷೋತ್ತಮ್ ಕೆ. ರೂಪಾಲ, “ಈ ಮಸೂದೆಯನ್ನು ದೇಶಾದ್ಯಂತ ಇರುವ ಮೀನುಗಾರರು ಸ್ವಾಗತಿಸಲಿದ್ದಾರೆ.
ಇದರಿಂದ ಅವರ ಪರವಾಗಿ ದೇಶವಿದೆ ಎಂಬ ಸಂದೇಶ ರವಾನೆ ಯಾಗಲಿದೆ’ ಎಂದು ಹೇಳಿದರು. ಈ ಮಸೂದೆಯನ್ನು ಎ. 5ರಂದು ಲೋಕಸಭೆ ಯಲ್ಲಿ ಮಂಡಿಸಲಾಗಿತ್ತು.
ಮಸೂದೆಯ ಪ್ರಮುಖ ಅಂಶಗಳು
-ಕರಾವಳಿ ಜಲಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಪರಿಸರಕ್ಕೆ ಸಂಬಂಧಿಸಿ ಎಸಗುವ ಅಪರಾಧಗಳನ್ನು ಮಾಫಿ ಮಾಡಲಿದೆ.
-ಇದರಿಂದ ಮೀನುಗಾರಿಕೆ ಸೇರಿದಂತೆ ಜಲಕೃಷಿ ಉದ್ಯಮವು ಯಾವುದೇ ತೊಡಕಿಲ್ಲದಂತೆ ನಡೆಯಲು ಅನುವು ಮಾಡಿಕೊಡಲಿದೆ.
– ಈ ಹಿಂದೆ ಕರಾವಳಿ ಪ್ರದೇಶಗಳಲ್ಲಿ ಪರಿಸರಕ್ಕೆ ಸಂಬಂಧಿಸಿ ಕಾನೂನು ಉಲ್ಲಂಘಿ ಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿತ್ತು. ಇನ್ನು ಮುಂದೆ ಈ ಶಿಕ್ಷೆಯನ್ನು ರದ್ದುಪಡಿಸಲಾಗುತ್ತದೆ.
– ಈ ಮಸೂದೆಯು ಕರಾವಳಿ ಜಲಕೃಷಿ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳನ್ನು ಸರಾಗಗೊಳಿಸಲಿದೆ. ಜತೆಗೆ ಕರಾವಳಿ ಜಲಕೃಷಿಯ ಹೊಸ ರೂಪಗಳನ್ನು ಉತ್ತೇಜಿಸಲಿದೆ.
– ಮಸೂದೆಯ ಅಡಿಯಲ್ಲಿ ಹಳೆಯ ಕಾನೂನಿಗೆ ತಿದ್ದುಪಡಿ ತರಲು ಸ್ಥಾಯಿ ಸಮಿತಿ ಸೂಚಿಸಿದ್ದ 56 ತಿದ್ದುಪಡಿಗಳ ಪೈಕಿ 45 ತಿದ್ದುಪಡಿಗಳನ್ನು ಮೀನುಗಾರಿಕೆ ಸಚಿವಾಲಯ ಅಂಗೀಕರಿಸಿದೆ.
– ಈ ಮಸೂದೆಯಿಂದ ಮೀನುಗಾರಿಕೆ ಸಮುದಾಯಕ್ಕೆ ಉಪಯೋಗವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.