Gruha Jyothi Scheme: 191 ಯುನಿಟ್‌ ವಿದ್ಯುತ್‌ ಬಳಸಿದರೂ ಬಂದಿದೆ “ಬಿಲ್‌’!


Team Udayavani, Aug 9, 2023, 8:39 AM IST

TDY-2

ಉಪ್ಪಿನಂಗಡಿ/ಮಂಗಳೂರು: ಗೃಹ ಜ್ಯೋತಿ ಯೋಜನೆಯಡಿ ವಿದ್ಯುತ್‌ ಬಳಕೆದಾರರಿಗೆ “ಉಚಿತ’ ಎಂದು ಸರಕಾರ ಪ್ರಕಟಿಸಿದರೂ ಹಲವು ಮಂದಿಗೆ ಈ ಬಾರಿಯೂ ಹಿಂದಿನಂತೆಯೇ ಬಿಲ್‌ ಬಂದಿದೆ!

ಚುನಾವಣೆಗೂ ಮುನ್ನ 200 ಯುನಿಟ್‌ ವರೆಗೆ ಎಲ್ಲರಿಗೂ ಉಚಿತ ಎಂದು ತಿಳಿಸಿದ್ದರೂ ಈಗ ಮಾತ್ರ ವಿವಿಧ  ನೆಪವೊಡ್ಡಿ ಹಲವರಿಗೆ ಬಿಲ್‌ ಬರುವಂತಾಗಿದೆ. ಅವರು ಎಂದಿನಂತೆಯೇ ಹಣ ಪಾವತಿಸುವ ಪ್ರಮೇಯ ಎದುರಾಗಿದೆ.

ಉಪ್ಪಿನಂಗಡಿಯ ನಿವಾಸಿಯೊಬ್ಬರು ಕಳೆದ ತಿಂಗಳು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸಿದ್ದರೂ ಅವರಿಗೆ ಹಣ ಕಟ್ಟಲು ಬಿಲ್‌ ಬಂದಿದೆ. ಇದನ್ನು ಪ್ರಶ್ನಿಸಿದರೆ, ಕಳೆದ ವರ್ಷ ಸರಾಸರಿ 200 ಯುನಿಟ್‌ಗಿಂತ ಹೆಚ್ಚು ಬಳಸಿದ್ದೀರಿ ಎಂಬ ಕಾರಣ ನೀಡಲಾಗಿದೆ.

“ಉದಯವಾಣಿ’ ಜತೆಗೆ ಮಾತನಾಡಿದ ಅವರು, “ಈ ಹಿಂದೆ 200 ಯುನಿಟ್‌ ಮೀರುತ್ತಿದ್ದರೂ ಸರಕಾರದ ಗೃಹಜ್ಯೋತಿ ಯೋಜನೆಯ ಫ‌ಲಾನುಭವಿಯಾಗಲು ವಿದ್ಯುತ್‌ ಬಳಕೆಯನ್ನು ಮಿತವ್ಯಯಕ್ಕೆ ಒಳಪಡಿಸಿ ಜುಲೈ ತಿಂಗಳ ಬಳಕೆಯನ್ನು 191

ಯುನಿಟ್‌ಗೆ ಇಳಿಸಿಕೊಂಡಿದ್ದೆವು. ಸರಕಾರದ ಯೋಜನೆಯ ಲಾಭ ದೊರೆಯ ಲಿದೆ ಎಂದು ಭಾವಿಸಲಾಗಿತ್ತು. ಆದರೆ  ಮೆಸ್ಕಾಂ ಬಿಲ್‌ ಕೈ ಸೇರಿದಾಗ ಪೂರ್ಣ ಬಿಲ್‌ ಪಾವತಿಯ ಸೂಚನೆ ಲಭಿಸಿ ನಿರಾಶೆಯಾಗಿದೆ’ ಎನ್ನುತ್ತಾರೆ. 200 ಯುನಿಟ್‌ ದಾಟಿದರೆ ಗೃಹಜ್ಯೋತಿ ಸೌಲಭ್ಯ ಇಲ್ಲ ಎಂಬುದನ್ನು ಒಪ್ಪಬಹುದು. ಆದರೆ 200 ಯುನಿಟ್‌ಗಿಂತ ಕಡಿಮೆ ಬಳಸಿದರೂ ಗತ ವರ್ಷದ ಸರಾಸರಿಯನ್ನು ಮುಂದಿರಿಸಿ ಸೌಲಭ್ಯ ನಿರಾಕರಿಸುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ.

ಈ ಬಗ್ಗೆ “ಉದಯವಾಣಿ’ ಜತೆಗೆ ಪ್ರತಿಕ್ರಿಯಿಸಿದ ಮಂಗಳೂರಿನ ಮೆಸ್ಕಾಂ ಅಧಿಕಾರಿಗಳು, “ಕಳೆದ ವರ್ಷದ 12 ತಿಂಗಳ ಸರಾಸರಿ 200 ಯುನಿಟ್‌ಗಿಂತ ಕಡಿಮೆ ಇದ್ದವರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಕಳೆದ ವರ್ಷದ ಸರಾಸ­ರಿ 200 ಯುನಿಟ್‌ಗಿಂತ ಅಧಿಕ ಬಳಸಿದವರು ಈಗ ಕಡಿಮೆ ಯುನಿಟ್‌ ಬಳಸಿದರೂ ಸದ್ಯ ಗೃಹಜ್ಯೋತಿ ಯೋಜನೆ ಅವರಿಗೆ ಅನ್ವಯವಾಗುವುದಿಲ್ಲ. ಕಳೆದ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ವರೆಗಿನ ಪ್ರತೀ ತಿಂಗಳ ಬಿಲ್‌ನ ಯುನಿಟ್‌ಗಳನ್ನು ಕೂಡಿಸಿ ಅದಕ್ಕೆ 12ರಿಂದ ಭಾಗಿಸಿದಾಗ ಬರುವ ಒಟ್ಟು ಯುನಿಟ್‌ ಮೇಲೆ ಗೃಹಜ್ಯೋತಿ ಯೋಜನೆ ಅನ್ವಯ ನಿರ್ಧಾರವಾಗುತ್ತದೆ. ಇದು 200 ಯುನಿಟ್‌ಗಿಂತ ಕಡಿಮೆ ಇದ್ದರೆ ಮಾತ್ರ ಅಂತಹವರಿಗೆ ಉಚಿತ ಯೋಜನೆ ಈ ಬಾರಿ ಅನ್ವಯವಾಗಿದೆ’ ಎಂದಿದ್ದಾರೆ.

ಟಾಪ್ ನ್ಯೂಸ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.