LEO: ಕಾಂತಾರ, ಕೆಜಿಎಫ್‌, ಪುಷ್ಪ.. ಸೀಕ್ವೆಲ್ ಟ್ರೆಂಡ್: 2 ಭಾಗಗಳಲ್ಲಿ ʼಲಿಯೋʼ ರಿಲೀಸ್‌ ?

Team Udayavani, Aug 9, 2023, 2:47 PM IST

tdy-14

ಚೆನ್ನೈ: ದಳಪತಿ ವಿಜಯ್‌ ʼಲಿಯೋʼ ಕಾಲಿವುಡ್‌ ರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ಸಿನಿಮಾದ ನಿರೀಕ್ಷೆಗಳು ಹೆಚ್ಚಾಗಲು ಮತ್ತೊಂದು ಕಾರಣವೆಂದರೆ ನಿರ್ದೇಶಕ ಲೋಕೇಶ್ ಕನಕರಾಜ್. ಕನಕರಾಜ್‌ ಅವರ ಸಿನಿಮಾಗಳಿಗೆ ಪ್ರತ್ಯೇಕ ಪ್ರೇಕ್ಷಕರಿದ್ದಾರೆ. ಲೋಕೇಶ್ ಕನಕರಾಜ್ ಯೂನಿವರ್ಸ್ ನಲ್ಲಿ ಬರುತ್ತಿರುವ ʼಲಿಯೋʼ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಸಿನಿಮಾದ ಬಗ್ಗೆ ಹೈಪ್‌ ಹೆಚ್ಚಾಗುತ್ತಿರುವ ಬೆನ್ನಲ್ಲೇ,ಮತ್ತೊಂದು ಅಪ್ಡೇಟ್‌ ಕುರಿತ ಸುದ್ದಿಯೊಂದು ಸೌಂಡ್ ಮಾಡುತ್ತಿದೆ. ‌

ಇತ್ತೀಚೆಗೆ ಸಿನಿಮಾರಂಗದಲ್ಲಿ ಪ್ಯಾನ್‌ ಇಂಡಿಯಾದೊಂದಿಗೆ ಸೀಕ್ವೆಲ್‌ ಗಳನ್ನು ಮಾಡುವ ಟ್ರೆಂಡ್‌ ಚಾಲ್ತಿಯಲ್ಲಿದೆ. ಒಬ್ಬ ದೊಡ್ಡ‌ ಸ್ಟಾರ್‌ ವುಳ್ಳ ಅಥವಾ ಮಲ್ಟಿ ಸ್ಟಾರ್ಸ್‌ ವುಳ್ಳ ಸಿನಿಮಾಗಳು ಎರಡು ಭಾಗಗಳಾಗಿ ತೆರೆ ಮೇಲೆ ಬರುತ್ತದೆ. ಸಿನಿಮಾದ ಮೊದಲ ಭಾಗದ ಕಥೆಯ ಕೊನೆಯಲ್ಲಿ ಕುತೂಹಲ ಹುಟ್ಟಿಸುವ ಅಂಶವನ್ನು ಇಡಲಾಗುತ್ತದೆ. ಆ ಅಂಶವೇ ಎರಡನೇ ಭಾಗದ ಕಥೆ ಆರಂಭಕ್ಕೆ ಕಾರಣವಾಗುತ್ತದೆ.

ʼಪುಷ್ಪʼ, ʼಕಾಂತಾರ, ʼಕೆಜಿಎಫ್‌ʼ, ʼಸಲಾರ್‌ʼ ಚಿತ್ರಗಳು ಈ ಮಾದರಿಯಲ್ಲಿ ಬಂದಿವೆ. ಈ ಪ್ರಯೋಗದಲ್ಲಿ ಕೆಜಿಎಫ್‌ -2 ಯಶಸ್ವಿಯಾಗಿದೆ. ಇನ್ನುಳಿದ ಚಿತ್ರದ ಸೀಕ್ವೆಲ್‌ ಗಳು ಇನ್ನಷ್ಟೇ ತೆರೆಗೆ ಬರಬೇಕಿದೆ. ವಿಷಯವೇನಂದರೆ ಇದೇ ಮಾದರಿಯನ್ನು ದಳಪತಿ ವಿಜಯ್‌ ಅವರ ʼಲಿಯೋʼ ಚಿತ್ರವೂ ಅನುಸರಿಸಲಿದೆ ಎನ್ನಲಾಗುತ್ತಿದೆ.

ʼಲಿಯೋʼ ಮೊದಲ ಭಾಗದ ಮುಕ್ತಾಯವು ಎರಡನೇ ಭಾಗದ ಕಥೆಯ ಆರಂಭಕ್ಕೆ ಕಾರಣವಾಗುತ್ತದೆ. ಎರಡನೇ ಭಾಗ 2025 ರಲ್ಲಿ ರಿಲೀಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇದನ್ನೂ ಓದಿ: Tamannaah Bhatia: ಓಡೋಡಿ ಬಂದು ನಟಿ ತಮನ್ನಾರನ್ನು ಮುಟ್ಟಿದ ಅಭಿಮಾನಿ; ಮುಂದೆ ಆದದ್ದು..

ಈ ಕುರಿತ ಚರ್ಚೆ ಕಾಲಿವುಡ್‌ ನಲ್ಲಿ ಜೋರಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಕನಕರಾಜ್‌ ಅವರ ಈ ಹಿಂದಿನ ಚಿತ್ರಗಳ ಕ್ಲೈಮ್ಯಾಕ್ಸ್‌. ಈ ಹಿಂದೆ ಬಂದ ಅವರ ʼವಿಕ್ರಮ್‌ʼ ನಲ್ಲಿ ಕ್ಲೈಮ್ಯಾಕ್ಸ್‌ ನಲ್ಲಿ ʼರೋಲೆಕ್ಸ್‌ʼ ಪಾತ್ರ ಬರುತ್ತದೆ. ʼಖೈತಿʼ ಯಲ್ಲೂ ಎಂಡಿಂಗ್‌ ನಲ್ಲಿ 2ನೇ ಭಾಗದ ಕಥೆಯ ಎಳೆಯನ್ನು ಬಿಡಲಾಗಿದೆ. ಇನ್ನು ಕನಕರಾಜ್‌ ಅವರ ಆರಂಭಿಕ ಚಿತ್ರ ʼಮಾನಗರಂʼ 2ನೇ ಭಾಗದ ಕಥೆಯ ಬಗ್ಗೆ ಕ್ಲೈಮ್ಯಾಕ್ಸ್‌ ನಲ್ಲಿ ಸುಳಿವು ನೀಡಲಾಗಿದೆ.

ʼಲಿಯೋʼ ಸಿನಿಮಾದಲ್ಲಿ ನಾಯಕಿಯಾಗಿ ತ್ರಿಷಾ ಕೃಷ್ಣನ್‌, ಖಳ ನಾಯಕನಾಗಿ ಸಂಜಯ್‌ ದತ್‌ ಕಾಣಿಸಿಕೊಳ್ಳಲಿದ್ದಾರೆ. ಗೌತಮ್ ವಾಸುದೇವ್ ಮೆನನ್, ಅರ್ಜುನ್ ಸರ್ಜಾ, ಮಿಸ್ಕಿನ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್, ಮ್ಯಾಥ್ಯೂ ಥಾಮಸ್ ಮುಂತಾದವರು ನಟಿಸಿದ್ದು, ಈ ಸಿನಿಮಾ ಅಕ್ಟೋಬರ್‌ 19 ರಂದು ರಿಲೀಸ್‌ ಆಗಲಿದೆ.

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.