Shiv Linga: ಕುಸಿದು ಬಿದ್ದ ರಿಜಿಸ್ಟ್ರಾರ್- ಶಿವಲಿಂಗ ತೆರವಿಗೆ ತಡೆ!
Team Udayavani, Aug 10, 2023, 6:34 AM IST
ಕೋಲ್ಕತ: ಜಮೀನು ವಿವಾದದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಲಿಂಗವನ್ನು ತೆರವುಗೊಳಿಸಲು ಕೋಲ್ಕತ ಹೈಕೋರ್ಟ್ ನೀಡಿದ್ದ ಅಧಿಕೃತ ಆದೇಶ ಪ್ರಕಟಿಸುವ ಸಂದರ್ಭದಲ್ಲಿ ರಿಜಿಸ್ಟ್ರಾರ್ ಕುಸಿದುಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಆದೇಶ ಪ್ರಕಟಿಸುವ ನಿರ್ಧಾರದಿಂದಲೇ ಹಿಂದೆ ಸರಿದು, ಕೆಳ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಸೂಚನೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಖಾದಿರ್‌ಪುರ ಗ್ರಾಮದ ಗೋವಿಂದ್ ಮಂಡಲ್ ಎಂಬುವವರ ಜಮೀನಿನಲ್ಲಿ ಶಿವಲಿಂಗವೊಂದಿದ್ದು, ಇದು ತಮ್ಮ ಪೂರ್ವಜರ ಜಮೀನು ಎಂದು ಅವರು ವಾದಿಸಿದ್ದಾರೆ. ಅದೇ ಜಮೀನಿಗೆ ನಾವು ಹಕ್ಕುದಾರರು, ಶಿವಲಿಂಗ ಮೊದಲು ಇರಲಿಲ್ಲ, ಅದನ್ನು ಈಗ ಪ್ರತಿಷ್ಠಾಪಿಸಲಾಗಿದೆ ಎಂದು ಸುದೀಪ್ ಪಾಲ್ ಎಂಬವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧಿಸಿದಂತೆ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಜಾಯ್ ಸೇನ್‌ಗುಪ್ತ, ದಾಖಲೆಗಳು ಸುದೀಪ್ ಪರವಾಗಿದ್ದ ಹಿನ್ನೆಲೆ ಶಿವಲಿಂಗ ತೆರವಿಗೆ ಆದೇಶ ನೀಡಿದ್ದರು. ಆದರೆ ಅದೇ ವೇಳೆ ಈ ವಿಲಕ್ಷಣ ಘಟನೆ ನಡೆದ ಹಿನ್ನೆಲೆ ತೀರ್ಪು ಪ್ರಕಟಿಸದೇ ಹಿಂದೆ ಸರಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.