Kunigal: ಹಾಡಹಗಲೇ ಲಾಂಗ್ ಬೀಸಿದ್ದ ನಾಲ್ವರು ಆರೋಪಿಗಳ ಬಂಧನ
Team Udayavani, Aug 9, 2023, 8:23 PM IST
ಕುಣಿಗಲ್ : ಪಟ್ಟಣದಲ್ಲಿ ಹಾಡಹಗಲೇ ಗುಂಪೊಂದು ವ್ಯಕ್ತಿಯ ಮೇಲೆ ಲಾಂಗಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ಕು ಮಂದಿ ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೂತರಹಳ್ಳಿ ಗ್ರಾಮದ ಕೆ.ಡಿ.ಆಕಾಶ್, ಬಿಳಿದೇವಾಲಯ ಗ್ರಾಮದ ಸಾಗರ್, ಚಿಕ್ಕಕಲ್ಯಾ ಗ್ರಾಮದ ರಾಜಣ್ಣ ಅಲಿಯಾಸ್ ಮಚ್ಚುರಾಜು, ಕುಣಿಗಲ್ ಮಾವನಕಟ್ಟೆ ಪಾಳ್ಯ ಆಶ್ರಯ ಕಾಲೋನಿ ಎಂ.ಎಸ್.ಪ್ರಸಾದ್ ಬಂಧಿತ ಆರೋಪಿಗಳು.
ಘಟನೆ ವಿವರ
ಕುಣಿಗಲ್ ಪಟ್ಟಣದ ಮಲ್ಲಾಘಟ್ಟ ಎಲ್‌ಐಸಿ ಆಫೀಸ್ ಮುಂಭಾಗ ಆ 3 ರಂದು ತಾಲೂಕಿನ ಮೇಸ್ತ್ರಿಗೌಡನಪಾಳ್ಯ ಗ್ರಾಮದ ಜಗದೀಶ್ ಅಲಿಯಾಸ್ ಜಗ ಹಾಗೂ ಆತನ ಸ್ನೇಹಿತ ರೇಣುಕಾ ಅವರು ಟೀ ಅಂಗಡಿ ಬಳಿ ಟೀ ಕುಡಿದು ಕುಣಿಗಲ್ ಕಡೆ ನಡೆದುಕೊಂಡು ಹೊಗುತ್ತಿರುವಾಗ ಕೂತರಹಳ್ಳಿ ಗ್ರಾಮದ ಆರೋಪಿ ಆಕಾಶ್ ಹಳೆ ದ್ವೇಷ ಇಟ್ಟುಕೊಂಡು ಜಗದೀಶ್ ಅಲಿಯಾಸ್ ಜಗ ಎಂಬುವನಿಗೆ ಲಾಂಗ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಆತನ ಸಹಚರರೊಂದಿಗೆ ಪರಾರಿಯಾಗಿದ್ದರು. ಘಟನೆಯಿಂದ ಪಟ್ಟಣದ ನಾಗರಿಕರು ಭಯಭೀತರಾಗಿದ್ದರು.ವಿಡಿಯೋ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆರೋಪಿಗಳ ಬಂಧನ
ಪ್ರಕರಣ ದಾಖಲಿಸಿಕೊಂಡು ಕುಣಿಗಲ್ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹುಲ್‌ಕುಮಾರ್ ಶಹಪುರ್‌ವಾಡ್, ಎಎಸ್‌ಪಿ ವಿ.ಮರಿಯಪ್ಪ, ಡಿವೈಎಸ್‌ಪಿ ಲಕ್ಷ್ಮಿಕಾಂತ್ ಅವರ ಮಾರ್ಗದರ್ಶಿನದಲ್ಲಿ ಸಿಪಿಐ ನವೀನ್‌ಗೌಡ ಅವರ ನೇತೃತ್ವದ ಪೊಲೀಸ್ ತಂಡ ಬೆಂಗಳೂರು ದಾಬಸ್‌ಪೇಟೆ, ಕುಣಿಗಲ್ ತಾಲೂಕು ಅಂಚೇಪಾಳ್ಯ, ಮಾವಿನಕಟ್ಟೆಪಾಳ್ಯ ಗ್ರಾಮದ ಬಳಿ ಆರೋಪಿಗಳಾದ ಆಕಾಶ್ ಹಾಗೂ ಹಲ್ಲೆಗೆ ಸಹಕರಿಸಿದ ಸಾಗರ್, ರಾಜು ಅಲಿಯಾಸ್ ಮಚ್ಚುರಾಜ, ಪ್ರಸಾದ್‌ನನ್ನು ಬಂಧಿಸಿ ಲಾಂಗು, ಕಾರು, ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಕಾನ್ಸ್ಟೇಬಲ್‌ಗಳಾದ ಮಲ್ಲಿಕಾರ್ಜುನ, ನಟರಾಜು, ಮಂಜು, ನವೀನ, ಯೋಗೀಶ್, ಷಡಾಕ್ಷರಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.