Udupi: ಜಾಗಕ್ಕೆ ಅಕ್ರಮ ಪ್ರವೇಶಿಸಿ ಹಲ್ಲೆ: ಆರೋಪಿಗೆ ಶಿಕ್ಷೆ
Team Udayavani, Aug 9, 2023, 8:38 PM IST
ಉಡುಪಿ: ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ತೀವ್ರವಾಗಿ ಹಲ್ಲೆ ಮಾಡಿದ ಆರೋಪಿಗೆ ಬ್ರಹ್ಮಾವರ ಸಂಚಾರಿ ಪೀಠದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು 3 ವರ್ಷದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಹಾರಾಡಿ ಗ್ರಾಮದ ಕುಕ್ಕುಡೆ ಕೀರ್ತಿ ನಗರ್ ಎಂಬಲ್ಲಿ ವಾಸವಾಗಿರುವ ಬಸವ ಅವರ ಮಗನಾದ ಸುಕೇಶ್ (32) ಅದೇ ಗ್ರಾಮದ ಬಸಪ್ಪ ಮತ್ತು ಅವರ ಮಗಳಾದ ಲಲಿತಾ ಅವರ ಮನೆಯ ಸಮೀಪ ಬಸಳೆ ಬಳ್ಳಿ ನೆಟ್ಟಿದ್ದ ಜಾಕ್ಕೆ ಸೌದೆಯನ್ನು ತಂದು ಎಸೆಯುತ್ತಿದ್ದಾಗ ಪ್ರಶ್ನಿಸಿದ್ದಕ್ಕೆ ಆತ ಮರದ ರೀಪಿನ ತುಂಡಿನಿಂದ ಲಲಿತಾ ಅವರಿಗೆ ಹಲ್ಲೆ ಮಾಡಿದ್ದು, ಇದನ್ನು ತಡೆಯಲು ಬಂದ ಬಸಪ್ಪ ಅವರನ್ನೂ ದೂಡಿ ಹಾಕಿ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಈ ಹಿಂದೆಯೂ ಇದೇ ರೀತಿ ಜಗಳವಾಡಿಕೊಂಡಿದ್ದಾನೆ ಎಂದು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಬ್ರಹ್ಮಾವರ ಠಾಣೆಯ ಪಿ.ಎಸ್.ಐ. ಗುರುನಾಥ್ ಬಿ. ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ರಾಜ್ಯ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದರು.c
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.