53 ಕುಟುಂಬ ಹಕ್ಕುಪತ್ರ ವಂಚಿತ
Team Udayavani, Aug 10, 2023, 4:04 PM IST
ಸಕಲೇಶಪುರ: ಕಳೆದ 5 ದಶಕ ಗಳಿಗೂ ಹೆಚ್ಚು ಕಾಲ ಒಂದೆ ಕಡೆ ವಾಸ ವಿದ್ದರೂ ಸಹ ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರನೀಡದ್ದ ರಿಂದ ತಾಲೂ ಕಿನ ಹೆತ್ತೂರಿನ ಅಂಬೇಡ್ಕರ್ ಬಡಾವಣೆಯಲ್ಲಿ ನೆಲೆಸಿರುವ ನಿವಾಸಿ ಗಳು ಕಂಗಾಲಾಗಿದ್ದಾರೆ.
ಹೆತ್ತೂರಲ್ಲಿರುವ ಸುಮಾರು 53 ದಲಿತ ಕುಟುಂ ಬಗಳ 400ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ನೀಡಬೇಕೆಂದು 50 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸು ತ್ತಿರುವ ಕುಟುಂಬ ಗಳು ಸರ್ಕಾರವನ್ನು ಆಗ್ರಹಿ ಸುತ್ತ ಬಂದಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ.
ಏನಿದು ಪ್ರಕರಣ?: 1964ನೇ ಇಸವಿ ಯಿಂದ ಹೆತ್ತೂರು ಗ್ರಾಮದ ಐಗೂರು ರಸ್ತೆಯಲ್ಲಿರುವ ಸರ್ವೆನಂ ಬರ್ 302 ರಲ್ಲಿ ಒಟ್ಟು 6 ಎಕರೆ 20 ಗುಂಟೆ ಜಮಿ àನು ಇದ್ದು, ಅದರಲ್ಲಿ ಎರಡು ಎಕರೆ 20 ಗುಂಟೆ ಗ್ರಾಮದ ಪ್ರಾಥಮಿಕ ಶಾಲೆಯ ಹೆಸರಿಗೆ ಹಾಗೂ 2 ಎಕರೆ ಸರ್ಕಾರಿ ಆಸ್ಪತ್ರೆಗೆ ಮೀಸ ಲಿಟ್ಟಿದ್ದು, ಉಳಿದ ಎರಡು ಎಕರೆಯಲ್ಲಿ ಸುಮಾರು 53 ದಲಿತ ಕುಟುಂಬಗಳು ವಾಸವಿರುತ್ತದೆ.
ಅಧಿಕೃತ ಸಾಗುವಳಿ ಚೀಟಿ ನೀಡಿಲ್ಲ: ದಲಿತ ಕುಟುಂಬಗಳಿಗೆ ಸರ್ಕಾರದ ಪರಿಶಿಷ್ಟ ಜಾತಿಗೆ ಸಿಗುವ ಸಿಮೆಂಟ್ ರಸ್ತೆ ಇತರೆ ಸರ್ಕಾರಿ ಸೌಲಭ್ಯಗಳು ಸಿಕ್ಕಿದ್ದು, 1979ರಲ್ಲಿ ಆಗಿನ ತಾಲೂಕು ಕಂದಾಯ ಇಲಾಖೆ ತಾತ್ಕಾಲಿಕ ಸಾಗುವಳಿ ಚೀಟಿ ನೀಡಿದ್ದು, ನಂತರ ಇಲ್ಲಿಯವರೆಗೆ ಬಡ ಕುಟುಂಬಗಳಿಗೆ ಯಾವುದೇ ಅಧಿಕೃತ ಸಾಗುವಳಿ ಚೀಟಿ ನೀಡಿಲ್ಲ.ಬಹುತೇಕ 53 ಕುಟುಂಬಗಳಲ್ಲಿ 400ಕ್ಕೂ ಹೆಚ್ಚು ಜನರು ವಾಸವಿದ್ದು, ಬಹುತೇಕ ಎಲ್ಲಾ ಕುಟುಂಬಗಳು ಕೂಲಿ ಕೆಲಸವನ್ನು ಅವ ಲಂಬಿಸಿದ್ದು, ಇದೀಗ ವಾಸವಿರುವ ಮನೆಯನ್ನು ಉಳಿಸಿಕೊಳ್ಳುವ ಆತಂಕ ಎದು ರಾಗಿದೆ. ಆದರೆ, ಇತ್ತೀಚಿನ ದಾಖ ಲಾತಿ ಪಹಣಿಯಲ್ಲಿ ದಲಿತ ಕುಟುಂ ಬಗಳ ಹೆಸರು ಮಾಯವಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕು ಕಂದಾಯ ಇಲಾಖೆ ಐವತ್ತು ವರ್ಷಕ್ಕಿಂತಲೂ ಹೆಚ್ಚು ಇಲ್ಲಿ ವಾಸವಾಗಿರುವ ದಲಿತ ಕುಟುಂಬಗಳಿಗೆ ಕೂಡಲೇ ವಾಸದ ಮನೆಯ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿವೆ.
50 ವರ್ಷಗಳಿಂದ ಹೆಚ್ಚು ದಲಿತ ಕುಟುಂಬಗಳು ವಾಸ ಇರುವುದು ನಿಜವಾದರೂ ಸಹ ಕಂದಾಯ ಇಲಾಖೆಯಿಂದ ಸರ್ವೆ ನಡೆಸಲಾಗುವುದು. ಸರ್ವೆ ನಂತರ ಜಮೀನಿನ ಮಾಹಿತಿ ಸರ್ಕಾರಕ್ಕೆ ಸಿಗಲಿದ್ದು, ಆ ನಂತರವೇ ಮುಂದಿನ ಕ್ರಮ. -ಮೇಘನಾ, ತಹಶೀಲ್ದಾರ್
ಹೆತ್ತೂರು ಗ್ರಾಮದಲ್ಲಿರುವ 53 ಕುಟುಂಬಗಳು 1964 ರಿಂದಲೂ ವಾಸವಿದ್ದು, ಎಲ್ಲಾ ಕುಟುಂಬಗಳಿಗೂ ಸರ್ಕಾರ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕಿದೆ. -ಕುಮಾರ್ ಹೆತ್ತೂರು, ದಲಿತ ಮುಖಂಡರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.