School: ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆಗೆ 279.77 ಕೋ. ರೂ.
Team Udayavani, Aug 10, 2023, 10:05 PM IST
ಬೆಂಗಳೂರು: ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು ವಿತರಿಸಲು ರಾಜ್ಯ ಸರಕಾರ 279.77 ಕೋಟಿ ರೂ.ಗಳ ಅನುದಾನ ಭರಿಸಲು ಅನುಮತಿ ನೀಡಿದೆ.
ಕ್ಷೀರಭಾಗ್ಯ ಯೋಜನೆಗೆ ನಿಗದಿಪಡಿಸಿದ್ದ 1,166.43 ಕೋ. ರೂ. ಪೈಕಿ 235.50 ಕೋ.ರೂ.ಗಳನ್ನು ಭರಿಸಲು ಅನುಮತಿ ನೀಡಿದೆ. ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ 412 ಕೋ. ರೂ. ಕೇಂದ್ರದ ಪಾಲಿನಲ್ಲಿ 26.56 ಕೋ. ರೂ. ಮತ್ತು 271.93 ಕೋ. ರೂ. ರಾಜ್ಯದ ಪಾಲಿನಲ್ಲಿ 17.70 ಕೋ. ರೂ.ಗಳನ್ನು ಭರಿಸಲು ಅನುಮತಿ ಕೊಡಲಾಗಿದೆ.
ಈ ಹಿಂದೆ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ವಿತರಿಸುತ್ತಿದ್ದ ಪೂರಕ ಪೌಷ್ಟಿಕಾಂಶಗಳನ್ನು ವಾರದಲ್ಲಿ ಎರಡು ದಿನಗಳಿಗೆ ವಿಸ್ತರಿಸಿರುವ ಸರಕಾರ, 9 ಮತ್ತು 10ನೇ ವಿದ್ಯಾರ್ಥಿಗಳೂ ಸಹಿತ ಒಟ್ಟು 60 ಲಕ್ಷ ಮಕ್ಕಳಿಗೆ 80 ದಿನಗಳು ಪೂರಕ ಪೌಷ್ಟಿಕಾಂಶವುಳ್ಳ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆಹಣ್ಣನ್ನು ವಿತರಿಸಲು ಈ ಹಣವನ್ನು ವಿನಿಯೋಗಿಸಬೇಕೆಂದು ಆದೇಶಿಸಿದೆ.
ಉತ್ತಮ ಗುಣಮಟ್ಟದ್ದನ್ನೇ ಖರೀದಿಸಬೇಕು
ಪೂರಕ ಪೌಷ್ಟಿಕಾಂಶಗಳ ಖರೀದಿ ಪ್ರಕ್ರಿಯೆಯನ್ನು ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಚಾಲ್ತಿಯಲ್ಲಿರುವ ಸಂಗ್ರಹಣಾ ನಿಯಮಗಳನ್ನು ಪಾಲಿಸಿ ನಿರ್ವಹಿಸಬೇಕು. ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣಿನ ಗುಣಮಟ್ಟ ಪರಿಶೀಲಿಸಿ ಖಾತ್ರಿಪಡಿಸಿಕೊಂಡು ಖರೀದಿಸಬೆಕು. ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಂಗ್ರಹಿಸಿ ವಿತರಿಸಬೇಕು. ಈ ಮಾಹಿತಿಯನ್ನು ಎಸ್‌ಎಟಿಎಸ್ ಎಂಡಿಎಂ ತಂತ್ರಾಂಶದಲ್ಲಿ ಸಂಗ್ರಹಿಸಬೇಕು.
ಸಾರ್ವಜನಿಕರಿಂದ ದೂರು ಬಾರದಂತೆ ನಿರ್ವಹಿಸಲು ಹೊಣೆ
ವಿತರಣೆಗೆ ಸಂಬಂಧಿಸಿದ ಮೇಲ್ವಿಚಾರಣೆಯನ್ನು ಸಿಆರ್‌ಪಿ, ಬಿಆರ್‌ಪಿ ತಾಲೂಕು ಹಂತದ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣಾಧಿಕಾರಿ, ಉಪನಿರ್ದೇಶಕ (ಆಡಳಿತ) ರು ಪರಿಣಾಮಕಾರಿಯಾಗಿ ಸಾರ್ವಜನಿಕರಿಂದ ಯಾವುದೇ ದೂರು ಬಾರದಂತೆ ನಿರ್ವಹಿಸಬೇಕು. ವೆಚ್ಚಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಸೂಕ್ತ ಲೆಕ್ಕಪತ್ರ ಇಡಬೇಕು. ಇದರ ಮೇಲ್ವಿಚಾರಣೆಯನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ನಿರ್ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.