Kerala: ಮದ್ಯ ಜಾಹೀರಾತು ಪ್ರಸಾರಕ್ಕೆ ಕೇರಳ ಅನುಮತಿ?
-ಸಿನಿಮಾ ವೇಳೆ ಮದ್ಯ ಜಾಹೀರಾತು ಪ್ರಸಾರ, ಶುಲ್ಕ ಕೊಟ್ಟರೆ ಎಚ್ಚರಿಕೆ ಸಂದೇಶಕ್ಕೂ ಕೊಕ್!
Team Udayavani, Aug 10, 2023, 10:31 PM IST
ತಿರುನಂತಪುರ: ಕೇರಳದಲ್ಲಿ ಇನ್ನೂ ಮುಂದೆ ಸಿನಿಮಾ ಪ್ರಸಾರದ ವೇಳೆ ಮದ್ಯ ಜಾಹೀರಾತುಗಳನ್ನು ಪ್ರಸಾರ ಮಾಡಬಹುದು. ಮಾತ್ರವಲ್ಲ ಮದ್ಯ, ತಂಬಾಕಿನ ದೃಶ್ಯ ಪ್ರಸಾರವಾಗುವ ಸಮಯದಲ್ಲಿ ಜಾಗೃತಿ ಸಂದೇಶ ಪ್ರಸಾರ ಮಾಡುವುದು ಕಡ್ಡಾಯವಲ್ಲ ಎಂಬ ನಿಯಮವೂ ಜಾರಿಯಾಗಬಹುದು! ಕೇರಳ ವಿಧಾನಸಭೆಯಲ್ಲಿ ಅಬಕಾರಿ (ತಿದ್ದುಪಡಿ) ವಿಧೇಯಕ, 2023 ಅನ್ನು ಧ್ವನಿಮತದ ಮೂಲಕ ಆಯ್ಕೆಸಮಿತಿಗೆ ಕಳುಹಿಸಲಾಗಿದೆ. ರಾಜ್ಯದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಮುಂಗಡವಾಗಿ ಜಾಹೀರಾತುದಾರ 50,000 ರೂ. ಠೇವಣಿ ಇಟ್ಟರೆ, ಮದ್ಯ ಜಾಹೀರಾತಿಗೆ ಸರ್ಕಾರ ಅನುಮತಿ ನೀಡಲಿದೆ. ಇನ್ನೊಂದೆಡೆ, ಸಿನಿಮಾದ ನಿರ್ಮಾಪಕ ಮೊದಲೇ 50,000 ರೂ. ಠೇವಣಿ ಇಟ್ಟರೆ, ಆರೋಗ್ಯದ ಎಚ್ಚರಿಕೆಯ ಸಂದೇಶ ಇಲ್ಲದೇ ದೃಶ್ಯಗಳ ಪ್ರಸಾರಕ್ಕೆ ಅವಕಾಶ ನೀಡಲಿದೆ.
ಪ್ರಸ್ತುತ, ಸಿನಿಮಾದಲ್ಲಿ ಮದ್ಯ ಮತ್ತು ತಂಬಾಕಿನ ದೃಶ್ಯ ಪ್ರಸಾರ ಸಮಯದಲ್ಲಿ ಆರೋಗ್ಯದ ಎಚ್ಚರಿಕೆಯ ಸಂದೇಶ ಪ್ರಸಾರ ಮಾಡದಿದ್ದರೆ, ಕಾನೂನು ಉಲ್ಲಂಘನೆ ಅಡಿಯಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಬಹುದಾಗಿದೆ. ಕೇರಳ ಸರ್ಕಾರ ತಿದ್ದುಪಡಿ ಮೂಲಕ ಈ ಶಿಕ್ಷೆಯನ್ನು ರದ್ದು ಮಾಡಲು ಮುಂದಾಗಿದೆ. ಕೇರಳ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ಶಾಸಕ ಮಾಥ್ಯೂ ಕುಜಲನಾಡನ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.