Toby movie; ಉದಯವಾಣಿಯಲ್ಲಿ ಟೋಬಿ…: ರಾಜ್- ಚೈತ್ರ ಜತೆ ಮಾತುಕತೆ


Team Udayavani, Aug 11, 2023, 10:11 AM IST

ಉದಯವಾಣಿಯಲ್ಲಿ ಟೋಬಿ…: ರಾಜ್- ಚೈತ್ರ ಜತೆ ಮಾತುಕತೆ

ಸದ್ಯ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರವೆಂದರೆ ಅದು ರಾಜ್‌ ಬಿ ಶೆಟ್ಟಿ ನಟನೆಯ “ಟೋಬಿ’. ಈಗಾಗಲೇ ಫ‌ಸ್ಟ್‌ಲುಕ್‌, ಟ್ರೇಲರ್‌ ಮೂಲಕ ಗಮನ ಸೆಳೆದಿರುವ ಈ ಚಿತ್ರ ಆಗಸ್ಟ್‌ 25 ರಂದು ತೆರೆಕಾಣುತ್ತಿದೆ. ಸದ್ಯ ಪ್ರಮೋಶನ್‌ನಲ್ಲಿ ಬಿಝಿಯಾಗಿರುವ ಚಿತ್ರತಂಡ ಗುರುವಾರ “ಉದಯವಾಣಿ’ ಕಚೇರಿಗೆ ಭೇಟಿ ನೀಡಿತು.

ನಟ ರಾಜ್‌ ಬಿ ಶೆಟ್ಟಿ ಹಾಗೂ ನಾಯಕಿ ಚೈತ್ರಾ ಆಚಾರ್‌ “ಟೋಬಿ’ ಸಿನಿಮಾದ ಕುರಿತಾಗಿ ಉದಯವಾಣಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ಮಾತನಾಡಿದ ರಾಜ್‌ ಬಿ ಶೆಟ್ಟಿ, “ಉದಯವಾಣಿ ಆರಂಭದಿಂದಲೂ ನಮಗೆ ಬೆಂಬಲ ಕೊಡುತ್ತಲೇ ಬಂದಿದೆ. ಈಗ ನಮ್ಮ “ಟೋಬಿ’ಗೂ ಪ್ರೋತ್ಸಾಹ ನೀಡುತ್ತಿರುವ ಖುಷಿ ಇದೆ. “ಟೋಬಿ’ ಒಂದು ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಇದೊಂದು ಕಂಟೆಂಟ್‌ ಸಿನಿಮಾ. ಸ್ಟಾರ್‌ ಸಿನಿಮಾಗಳ ಜೊತೆಗೆ ಕಂಟೆಂಟ್‌ ಸಿನಿಮಾಗಳು ಗೆದ್ದಾಗ ಮತ್ತೂಂದಿಷ್ಟು ಹೊಸಬರು ಚಿತ್ರ ರಂಗಕ್ಕೆ ಬರುತ್ತಾರೆ. ನಮ್ಮ ನಿರೀಕ್ಷೆಗೂ ಮೀರಿ ಸಿನಿಮಾದ ಟ್ರೇಲರ್‌ ಹಿಟ್‌ ಆಗಿದೆ. ಜನ ಸಿನಿಮಾವನ್ನು ಕೂಡಾ ಇದೇ ರೀತಿ ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುವುದು ರಾಜ್‌ ಬಿ ಶೆಟ್ಟಿ ಮಾತು.

“ಇದು ಕೌಟುಂಬಿಕ ಸಿನಿಮಾ. ಇದರಲ್ಲಿ ಫ್ಯಾಮಿಲಿ ಎಮೋಶನ್ಸ್‌ಗೆ ತುಂಬಾ ಸ್ಕೋಪ್‌ ಇದೆ. ಒಂದು ಕುಟುಂಬದ ನಡುವಿನ ಸಂಬಂಧ, ಅವರ ನಡುವಿನ ಬಂಧ ಯಾವ ರೀತಿಯದ್ದು ಎಂಬ ವಿಷಯವನ್ನು ನಾವು ಟೋಬಿಯ ಮೂಲಕ ಜನರಿಗೆ ಹೇಳಲಿದ್ದೇವೆ’ ಎನ್ನುತ್ತಾರೆ ರಾಜ್‌ ಶೆಟ್ಟಿ ಮಾತು.

ನಾಯಕಿ ಚೈತ್ರಾ ಆಚಾರ್‌ ಕೂಡಾ ತಮ್ಮ ಪಾತ್ರದ ಬಗ್ಗೆ ಹಾಗೂ ಒಳ್ಳೆಯ ತಂಡದ ಜೊತೆ ೆಲಸ ಮಾಡಿದ ಖುಷಿ ಹಂಚಿಕೊಂಡರು.

“ಟೋಬಿ’ ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್‌ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್‌ ಬಜೆಟ್‌ನ ಚಿತ್ರ. ಲೈಟರ್‌ ಬುದ್ಧ ಫಿಲಂಸ್‌, ಅಗಸ್ತ್ಯ ಫಿಲಂಸ್‌ ಹಾಗೂ ಕಾಫಿ ಗ್ಯಾಂಗ್‌ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್‌ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ರಾಜ್‌ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್‌ ಅವರ ನಿರ್ದೇಶನ ಈ ಚಿತ್ರಕ್ಕಿದೆ.

ರಾಜ್‌ ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ ರಾಜ್‌ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಉದಯವಾಣಿಯಲ್ಲಿ ನಡೆದ “ಟೋಬಿ’ ಸಂವಾದ ಕಾರ್ಯಕ್ರಮದಲ್ಲಿ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಎಂ.ಡಿ ಹಾಗೂ ಸಿಇಓ ವಿನೋದ್‌ ಕುಮಾರ್‌, ಬೆಂಗಳೂರು ಸ್ಥಾನಿಕ ಸಂಪಾದಕ ಬಿ.ಕೆ.ಗಣೇಶ್‌, ಬ್ಯೂರೋ ಚೀಫ್ ಎಂ.ಎನ್‌.ಗುರುಮೂರ್ತಿ, ಸಿನಿಮಾ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಬಿ.ಕೆ.ಕೃಷ್ಣಪ್ಪ ಹಾಗೂ ಸಿನಿಮಾ ವಿಭಾಗ ಮುಖ್ಯಸ್ಥ ರವಿಪ್ರಕಾಶ್‌ ರೈ ಉಪಸ್ಥಿತರಿದ್ದರು

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.