Pakistan: ಪಾಕ್ ಸರ್ಕಾರಕ್ಕೆ ಸೇನೆ ಸಹಕಾರ ಅನಿವಾರ್ಯ!
Team Udayavani, Aug 12, 2023, 6:27 AM IST
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೈಬ್ರಿಡ್ ಆಡಳಿತ ನಡೆಸಿದ್ದರು, ಸರ್ಕಾರದಲ್ಲಿ ಸೇನಾ ಹಸ್ತಕ್ಷೇಪವಾಗುವ ಮೂಲಕ ಪ್ರಜಾಪ್ರಭುತ್ವದ ಮಾನ್ಯತೆ ಕುಂದಿತ್ತು ಎಂಬ ಆರೋಪಗಳಿದ್ದವು. ಆದರೀಗ ಇದನ್ನು ಸ್ವತಃ ಪಾಕಿಸ್ತಾನದ ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಒಪ್ಪಿಕೊಂಡಿದ್ದು, ಖಾನ್ ಮಾತ್ರವಲ್ಲ ತಮ್ಮ ಸರ್ಕಾರಕ್ಕೂ ಮಿಲಿಟರಿ ಸಹಾಯವಿಲ್ಲದೇ ಸರ್ಕಾರ ನಡೆಸುವುದು ಅಸಾಧ್ಯ ಎಂದಿದ್ದಾರೆ.
ಖಾಸಗಿ ಮಾಧ್ಯಮ ಸಂಸ್ಥೆಯೊಂದಕ್ಕೆ ಇತ್ತೀಚೆಗಷ್ಟೇ ಷರೀಫ್ ಸಂದರ್ಶನ ನೀಡಿದ್ದರು. ಈ ವೇಳೆ ವಿಶ್ವದಲ್ಲಿ ಹೈಬ್ರಿಡ್ ಆಡಳಿತವಿರುವ ರಾಷ್ಟ್ರಗಳು ಎಂದಾಗ ಅದಕ್ಕೆ ಪಾಕಿಸ್ತಾನ ಪ್ರಮುಖ ಉದಾಹರಣೆಯಲ್ಲಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಅವರನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಷರೀಫ್, ಖಾನ್ ಕೂಡ ಈ ಹಿಂದೆ ಸೇನಾ ಸಹಾಯ ಪಡೆದಿದ್ದರು. ಅವರು ಮಾತ್ರವಲ್ಲ, ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ಪ್ರಬಲವಾದ ಸೇನಾ ಸಹಾಯವಿಲ್ಲದೇ ಆಡಳಿತ ನಡೆಸಲು ಸಾಧ್ಯವಿಲ್ಲ. ರಾಷ್ಟ್ರದ ಕೆಲ ಪರಿಸ್ಥಿತಿಗಳನ್ನು ನಿಭಾಯಿಸಲು, ಆಡಳಿತವನ್ನು ಸುಗಮವಾಗಿ ನಡೆಸಲು ಮಿಲಿಟರಿ ಅಗತ್ಯವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.