IPC: ಭಾರತೀಯ ನ್ಯಾಯ ಸಂಹಿತೆ: ಕೇಂದ್ರದ ಕ್ರಾಂತಿಕಾರಿ ನಡೆ


Team Udayavani, Aug 12, 2023, 5:28 AM IST

lok adalat

ದೇಶದಲ್ಲಿ ಜಾರಿಯಲ್ಲಿರುವ ಅಪರಾಧ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಮೂರು ಮಹತ್ವದ ಮಸೂದೆಗಳನ್ನು ಕೇಂದ್ರ ಸರಕಾರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದೆ. ಹಾಲಿ ಇರುವ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯ ಬದಲಾಗಿ ಹೊಸದಾಗಿ ರೂಪಿಸಲಾಗಿರುವ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌) ಮಸೂದೆ-2023, ಭಾರತೀಯ ನಾಗರಿಕ ಸುರಕ್ಷ ಸಂಹಿತೆ(ಬಿಎಸ್‌ಎಸ್‌ಎಸ್‌) ಮಸೂದೆ-2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ-2023 ಅನ್ನು ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿದೆ.

ಈ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ ಅವರು, ವಸಾಹತು ಕಾಲದ ಹಳೆಯ ಅಪರಾಧ ಕಾನೂನುಗಳು ಗುಲಾಮಗಿರಿಯ ಸಂಕೇತವಾಗಿದ್ದವು. ಇವು ನ್ಯಾಯದಾನಕ್ಕಿಂತ ಶಿಕ್ಷೆಗೇ ಹೆಚ್ಚಿನ ಒತ್ತು ನೀಡಿದ್ದವು ಮಾತ್ರವಲ್ಲದೆ ಬ್ರಿಟಿಷ್‌ ಆಡಳಿತದ ರಕ್ಷಣೆ ಹಾಗೂ ಬಲವರ್ಧನೆಯತ್ತ ಗಮನಹರಿಸಿದ್ದವು.

ಈ ಹಿನ್ನೆಲೆಯಲ್ಲಿ ಸರಕಾರ ಈ ಮೂರು ಅಪರಾಧ ಕಾನೂನುಗಳ ಬದಲಾಗಿ ತ್ವರಿತ ನ್ಯಾಯದಾನ ಹಾಗೂ ಸಮಕಾಲೀನ ಆವಶ್ಯಕತೆಗಳು ಮತ್ತು ಜನರ ಆಕಾಂಕ್ಷೆಗಳಿಗೆ ತಕ್ಕುದಾದ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶದಿಂದ ಈ ಹೊಸ ಕಾನೂನುಗಳನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದಿದ್ದಾರೆ.

ಕೇಂದ್ರ ಜಾರಿಗೆ ತರಲುದ್ದೇಶಿಸಿರುವ ಈ ಮೂರು ಮಸೂದೆಗಳಲ್ಲಿ ಹಲವಾರು ಮಹತ್ವದ ಅಂಶಗಳಿದ್ದು ದೇಶದ್ರೋಹ ಕಾನೂನಿನ ಬದಲಿಗೆ ಸೆಕ್ಷನ್‌ 150 ಅನ್ನು ಪರಿಚಯಿಸಲಾಗಿದೆ. ಇನ್ನು ಗುಂಪು ಹತ್ಯೆಯಂಥ ಗಂಭೀರ ಪ್ರಕರಣದಲ್ಲಿ ಪ್ರತಿಯೋರ್ವ ಅಪರಾಧಿಗೆ ಮರಣದಂಡನೆ, ಅಪ್ರಾಪ್ತ ವಯಸ್ಕರ ಅತ್ಯಾಚಾರ ಪ್ರಕರಣಗಳ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಪ್ರಸ್ತಾವಗಳನ್ನು ಹೊಸ ಕಾನೂನು ಹೊಂದಿದೆ. ಇನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣ ಕ್ರಮವಾಗಿ ಪ್ರಕರಣದ ದಾಖಲಿನಿಂದ ಹಿಡಿದು ನ್ಯಾಯಾಲಯದ ತೀರ್ಪಿನವರೆಗೆ ಇಡೀ ಪ್ರಕ್ರಿಯೆಯ ಡಿಜಟಲೀಕರಣ, ಅಪರಾಧ ಸಾಬೀತು ಪ್ರಮಾಣವನ್ನು ಶೇ.90ಕ್ಕೆ ಹೆಚ್ಚಿಸುವ ಗುರಿ, ಮುಂದಿನ 4 ವರ್ಷಗಳೊಳಗಾಗಿ ದೇಶದ ಎಲ್ಲ ನ್ಯಾಯಾಲಯಗಳ ಕಂಪ್ಯೂಟರೀಕರಣ, ಇ-ಎಫ್ಐಆರ್‌ಗಳ ದಾಖಲು, ಆರೋಪಿಗಳ ಗೈರಿನಲ್ಲಿಯೇ ವಿಚಾರಣೆ ಸಹಿತ ಹಲವಾರು ಪ್ರಮುಖ ಅಂಶಗಳನ್ನು ಹೊಸ ಮಸೂದೆಗಳು ಒಳಗೊಂಡಿವೆ.

ಕೇಂದ್ರ ಸರಕಾರ ಅಪರಾಧ ಕಾನೂನುಗಳ ಪರಿಷ್ಕರಣೆಗಾಗಿ 2020ರಲ್ಲಿ ರಚಿಸಿದ್ದ ತಜ್ಞರ ಸಮಿತಿ ಕಳೆದ ವರ್ಷದ ಫೆಬ್ರವರಿಯಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಸಮಗ್ರ ಪರಿಶೀಲನೆಯ ಬಳಿಕ ಇದೀಗ ಕೇಂದ್ರ ಸರಕಾರ ಈ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಇದರೊಂದಿಗೆ ದೇಶದ ಜನರ ಬಹುದಶಕಗಳ ಬೇಡಿಕೆಗೆ ಕೇಂದ್ರ ಸರಕಾರ ಕೊನೆಗೂ ಓಗೊಟ್ಟಿದ್ದು ಅಪರಾಧ ಕಾನೂನುಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸಜ್ಜಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಲ್ಲಿ ಕಾನೂನಿನ ಭಯ ಮೂಡಿಸುವ ಜತೆಯಲ್ಲಿ ಜನರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲೂ ಈ ಹೊಸ ಮಸೂದೆಗಳಲ್ಲಿ ಹಲವಾರು ಮಹತ್ತರ ಮಾರ್ಪಾಡುಗಳನ್ನು ಮಾಡಲಾಗಿದೆ.

ಈ ಕಾನೂನುಗಳ ಜಾರಿಗೂ ಮುನ್ನ ಈ ಬಗ್ಗೆ ಇನ್ನಷ್ಟು ವಿಸ್ತೃತ ಚರ್ಚೆ, ವಿಚಾರವಿಮರ್ಶೆ ಅತ್ಯಗತ್ಯ. ಈ ಮೂರೂ ಮಸೂದೆಗಳನ್ನು ಪರಾಮರ್ಶೆಗಾಗಿ ಸಂಸದೀಯ ಸಮಿತಿಗೆ ಒಪ್ಪಿಸಲು ಸರಕಾರ ನಿರ್ಧರಿಸಿರುವುದು ಈ ದಿಸೆಯಲ್ಲಿ ಉತ್ತಮ ಬೆಳವಣಿಗೆ. ಈ ಹೊಸ ಕಾನೂನುಗಳು ಸರಕಾರದ ನೈಜ ಆಶಯ ಮತ್ತು ಉದ್ದೇಶಗಳನ್ನು ಸಾಕಾರಗೊಳಿಸಲಿ. ಈ ಮೂಲಕ ನ್ಯಾಯದಾನದ ಮೇಲೆ ರಾಜಕೀಯ, ಆರ್ಥಿಕ ಪ್ರಭಾವ ಬೀರುವುದು ಕೊನೆಗೊಳ್ಳಲಿ ಎಂಬುದೇ ದೇಶವಾಸಿಗಳೆಲ್ಲರ ಮಹದಾಸೆ.

ಟಾಪ್ ನ್ಯೂಸ್

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.