Toronto ಕನ್ನಡ ಸಂಘ ಸುವರ್ಣ ವರ್ಷದ ಸಂಭ್ರಮದ ಆಚರಣೆ

Team Udayavani, Aug 12, 2023, 3:34 PM IST

Toronto ಕನ್ನಡ ಸಂಘ ಸುವರ್ಣ ವರ್ಷದ ಸಂಭ್ರಮದ ಆಚರಣೆ

ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಕನ್ನಡ ಸಂಘ ಟೊರಂಟೋದ ಸದಸ್ಯರು ಬರ್ಲಿಂಗ್ಟನ್‌ ನಗರದ ಹಿಡನ್‌ ವ್ಯಾಲಿಯ ಉದ್ಯಾನವನದಲ್ಲಿ ವನ ವಿಹಾರದೊಂದಿಗೆ ಸಂಘದ ಸುವರ್ಣ ವರ್ಷದ ಆಚರಣೆಯನ್ನು ಜು.22ರಂದು ಆಚರಿಸಿದರು. 1973ರಲ್ಲಿ ಇದೇ ತಾರೀಕಿನಂದು ಕನ್ನಡ ಸಂಘ ಟೊರಂಟೋ ತನ್ನ ಮೊಟ್ಟ ಮೊದಲ ವಾರ್ಷಿಕ ಸಭೆಯನ್ನು ಪಿಕ್‌ನಿಕ್‌ನೊಂದಿಗೆ ಏರ್ಪಡಿಸಿತ್ತು. ಇದೇ ಸಂದರ್ಭದಲ್ಲಿ ಸಂಘವು ತನ್ನ ಸಂವಿಧಾನವನ್ನು ಅಳವಡಿಸಿಕೊಂಡಿತು.

ಅಂದು 50-60 ಅದಮ್ಯ ಉತ್ಸಾಹಿ ಕನ್ನಡಿಗರು ಸೇರಿ ಸ್ಥಾಪಿಸಿದ ಕನ್ನಡ ಸಂಘ ಇಂದು 600ಕ್ಕೂ ಹೆಚ್ಚು ಕನ್ನಡ ಕುಟುಂಬಗಳಿಂದ ಕೂಡಿ ಕೆನಡಾದ ಬೇರೆ ಬೇರೆ ಪ್ರಾಂತಗಳ ಕನ್ನಡಿಗರಿಗೂ ಸಹ ಹಿರಿಮನೆಯಂತೆ ಇದೆ. ಈ ದಿನ ವಿಶೇಷವಾಗಿ, ಮೊತ್ತ ಮೊದಲ ಪಿಕ್ನಿಕ್‌ ಆಯೋಜಿಸಿದ ಅನೇಕ ಹಿರಿಯರು ಬಹಳ ಸಂಭ್ರಮದಿಂದ ಭಾಗವಹಿಸಿದ್ದರು. ಅವರಲ್ಲಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಸ್‌. ರಾಮ್‌ಮೂರ್ತಿ ಮತ್ತು ಅವರ ಪತ್ನಿ ನಿರ್ಮಲಾ ಮೂರ್ತಿಯವರು ಉಪಸ್ಥಿತರಿದ್ದು, ಈ ಐತಿಹಾಸಿಕ ದಿನಕ್ಕೆ ಇನ್ನೂ ಹೆಚ್ಚಿನ ಮೆರುಗು ತಂದರು.

ಪ್ರತೀ ವರ್ಷದ ಆಚರಣೆಯಂತೆ ಈ ಬಾರಿಯೂ ಗಣೇಶನ ಮೂರ್ತಿಯ ಪೂಜೆಯೊಂದಿಗೆ ಆಚರಿಸಲಾಯಿತು. ಸಂಸ್ಥಾಪಕ ಸದಸ್ಯ ರಾಮಮೂರ್ತಿ ಹಾಗೂ ಈ ಸಾಲಿನ ಅಧ್ಯಕ್ಷರಾದ ಬೃಂದಾ ಮರಳೀಧರ ದೀಪ ಬೆಳಗುವ ಮೂಲಕ ಸುವರ್ಣ ವರ್ಷದ ಶುಭಾರಂಭಕ್ಕೆ ಚಾಲನೆ ನೀಡಿದರು. ಹಿರಿಯ ಸದಸ್ಯರಾದ ಶ್ರೀಕಾಂತ್‌ ಇನಾಂದರ್‌ ಅವರು ಅಥರ್ವ ಶೀರ್ಷ ಹಾಗೂ ವಿನಾಯಕ್‌ ಹೆಗಡೆಯವರು ಗಣಪ ಭಜನೆಯನ್ನು ಹಾಡಿದರು.

ಸಂಘದ ಐದು ದಶಕಗಳ ಸಂಭ್ರಮವನ್ನು ಐದು ಕೇಕ್‌ಗಳನ್ನು ಕತ್ತರಿಸಿ ಆಚರಿಸಲಾಯಿತು. ಸಂಘದ ಐದು ವಿಶೇಷ ಗುಂಪುಗಳಾದ ಹಿರಿಯರು, ಹಿಂದಿನ ಕಾರ್ಯಕಾರಿ ಸಮಿತಿಯ ಮಹಿಳಾ ಸದಸ್ಯರು, ಪುರುಷ ಸದಸ್ಯರು, ಮಕ್ಕಳು ಹಾಗೂ 50ನೇ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸಂಭ್ರಮದಲ್ಲಿ ಭಾಗಿಯಾದರು.

ಇದೇ ವೇಳೆ ಸಂಘದ ಯುವ ಸದಸ್ಯರು ಸುಂದರವಾದ ಕಲಾತ್ಮಕ ಮುಖ ಚಿತ್ತಾರಗಳನ್ನು, ಕನ್ನಡದ ಬಾವುಟ, ಕೆನಡ ಬಾವುಟವನ್ನು ರಚಿಸಿದ್ದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಈ ವೇಳೆ ಆಯೋಜಿಸಲಾಗಿತ್ತು. ಕೆರೆ-ದಡ, ಕುಂಟಾಬಿಲ್ಲೆ, ನಿಂಬೆ-ಚಮಚ ಹೀಗೆ ಬಾಲ್ಯವನ್ನು ಮರೆಕಳಿಸುವ ಅನೇಕ ಆಟಗಳನ್ನು ಚಿಣ್ಣರಿಂದ-ಅಜ್ಜ-ಅಜ್ಜಿಯವರೆಗೆ ಆಡಿ ಬಹುಮಾನ ಪಡೆದುಕೊಂಡರು. ಇದರೊಂದಿಗೆ ಹೂವಿನ ಚಿತ್ತಾರದ ಡ್ರೆಸ್‌ಕೋಡ್‌ ಸ್ಪರ್ಧೆಯಲ್ಲಿ ಗೆದ್ದವರಿಗೆ ” ಪುಷ್ಪರಾಣಿ-ವನರಾಜ ‘ ಎಂಬ ಬಹುಮಾನ ಕೊಡಲಾಯಿತು.

ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ತೊಂಬತ್ತರ ಹರೆಯದ ಸಂಘದ ಮಾಜಿ ಅಧ್ಯಕ್ಷ ಸಿಂಮೂರ್ತಿ ಅವರು ಬಹಳ ಲವಲವಿಕೆಯಿಂದ ಭಾಗವಹಿಸಿ, ಯುವ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಮಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಪೋಷಕರಿಗೆ, ಪ್ರಾಯೋಜಕರಿಗೆ, ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸಲಾಯಿತು.

ವರದಿ: ಬೃಂದಾ ಮುರಳೀಧರ್‌

ಟಾಪ್ ನ್ಯೂಸ್

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.