India vs West Indies 4TH T20; ಗಿಲ್ -ಜೈಸ್ವಾಲ್ ಕಮಾಲ್: ಸರಣಿ ಸಮಬಲ
Team Udayavani, Aug 12, 2023, 11:25 PM IST
ಲಾಡರ್‌ಹಿಲ್: ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ಶನಿವಾರ ನಡೆದ ವೆಸ್ಟ್‌ಇಂಡೀಸ್ ಎದುರಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಅಮೋಘ ಜಯ ಸಾಧಿಸಿ ಸರಣಿ ಸಮಬಲಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 8 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರ ಅಮೋಘ ಜತೆಯಾಟದಿಂದ ಸುಲಭ ಜಯ ಸಾಧಿಸಲು ಸಾಧ್ಯವಾಯಿತು. 17 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು.
ಜೈಸ್ವಾಲ್ ಅತ್ಯಮೋಘ ಆಟವಾಡಿ ಔಟಾಗದೆ 84 ರನ್ ಗಳಿಸಿದರು. 51 ಎಸೆತದಲ್ಲಿ 11 ಬೌಂಡರಿ ಮತ್ತು 3 ಅಮೋಘ ಸಿಕ್ಸರ್ ಬಾರಿಸಿದರು. ಗಿಲ್ 77 ರನ್ ಗಳಿಸಿ ಔಟಾದರು. 47 ಎಸೆತಗಳಲ್ಲಿ ಅವರು 3 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ತಿಲಕ್ ವರ್ಮ ಔಟಾಗದೆ 7 ರನ್ ಗಳಿಸಿದರು.
ವಿಂಡೀಸ್ ಪರ ಬ್ಯಾಟಿಂಗ್ ನಲ್ಲಿ ಕೆ ಮೇಯರ್ಸ್ ಆರಂಭದಲ್ಲಿ ಅಬ್ಬರಿಸಿದರಾದರೂ 17 ರನ್ ಗಳಿಸಿದ್ದ ವೇಳೆ ಅರ್ಷದೀಪ್ ಸಿಂಗ್ ಅವರನ್ನು ಪೆವಿಲಿಯನ್ ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಬ್ರಾಂಡನ್ ಕಿಂಗ್18, ಶಾಯ್ ಹೋಪ್ 45, ಪೂರನ್ 1, ಹೆಟ್ಮೆಯರ್ 61 ರನ್, ಒಡಿಯನ್ ಸ್ಮಿತ್ ಔಟಾಗದೆ 15 ರನ್ ಬಾರಿಸಿ ಉತ್ತಮ ಮೊತ್ತ ಕಲೆ ಹಾಕಲು ಕಾರಣವಾದರು. ಅರ್ಷದೀಪ್ ಸಿಂಗ್ 3 ವಿಕೆಟ್, ಕುಲದೀಪ್ ಯಾದವ್ 2 ವಿಕೆಟ್, ಅಕ್ಷರ್ ಪಟೇಲ್ಮ, ಚಾಹಲ್ ಮತ್ತು ಮುಕೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.