Yakshagana: ಮಾತಿನ ತೂಕವೇ ಹೊಸ ಕಳೆ
Team Udayavani, Aug 12, 2023, 11:50 PM IST
ಆಟ ಮತ್ತು ಕೂಟಕ್ಕೆ ಹೋಲಿಸಿದರೆ ತಾಳಮದ್ದಳೆ ಕೂಟದಲ್ಲಿ ಮಾತಿನದ್ದೇ ಪಾರಮ್ಯ. ಆಟದಲ್ಲಿ ಮಾತಿನ ಜತೆಗೆ ನಾಟ್ಯ, ಬಣ್ಣಗಾರಿಕೆಯೂ ಸೇರಿ ಹೊಸ ಮನೋರಂಜನೆ ಕೊಡುತ್ತದೆ. ಆದರೆ ಆಟ ದಲ್ಲೂ ಪಾಂಡಿತ್ಯ ಮತ್ತು ಮಾತಿನ ಶೈಲಿ ಯಿಂದಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿ, ನಾಟ್ಯದಿಂದ ಬಹುತೇಕ ದೂರವಿದ್ದ ಘಟಾನುಘಟಿ ಕಲಾವಿದರಿಗೆ ಕೊರತೆ ಯಿಲ್ಲ. ಅವರ ಮಾತಿನ ತೂಕವೇ ಇಡೀ ಆಟಕ್ಕೆ ಹಾಗೂ ಪಾತ್ರಕ್ಕೆ ಹೊಸ ಕಳೆ ನೀಡುತ್ತದೆ.
ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ಕೃಷ್ಣ ಸಂಧಾನ ಪ್ರಸಂಗದಲ್ಲಿ ಕೃಷ್ಣನ ಪಾತ್ರಧಾರಿಯಾಗಿ ನಿರರ್ಗಳವಾಗಿ ಕೆಲವು ನಿಮಿಷಗಳ ಕಾಲ ಆಡಿದ್ದ ಮಾತು ಈಗಲೂ ಎಲ್ಲರಲ್ಲೂ ರೋಮಾಂಚನ ಮೂಡಿಸು ತ್ತದೆ. ಅದರ ಪ್ರತಿಯೊಂದು ಶಬ್ದವೂ ಒಂದೊಂದು ತೂಕ ವನ್ನು ಹೊಂದಿದೆ. ಸಿದ್ದಕಟ್ಟೆ ವಿಶ್ವನಾಥ ಶೆಟ್ಟರುಕೂಡ ಗೋಮಾತೆಯ ಮಹತ್ವದ ಬಗ್ಗೆ ಒಂದು ಪ್ರಸಂಗದಲ್ಲಿ ಆಡಿದ್ದ ಮಾತು ನೂರಾರು ಪುಟಗಳಲ್ಲಿ ವಿವರಿಸಲು ಬೇಕಾದಂಥ ಮಾಹಿತಿಯನ್ನು ಹೊಂದಿತ್ತು. ಶೇಣಿ ಗೋಪಾಲಕೃಷ್ಣ ಭಟ್ಟರು, ಕುಂಬಳೆ ಸುಂದರ ರಾಯರು… ಇಂಥ ಹಿಂದಿನ ಮಹಾನ್ ಕಲಾವಿದರು ಯಕ್ಷಗಾನದಲ್ಲೂ ಮಾತು ಹಾಗೂ ವಿದ್ವತ್‌ನಿಂದಲೇ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾದದ್ದು. ಅಂಥವರ ಮಾತುಗಳನ್ನು ಆಲಿಸುವುದೇ ಕರ್ಣಾನಂದ.
ಆದರೆ ಈಗೀಗ ಅಂಥ ಮಾತುಗಳು ಆಟದ ರಂಗಸ್ಥಳದಲ್ಲಿ ಕಡಿಮೆಯಾಗುತ್ತದೆ. ತರ್ಕಬದ್ಧವಾದ ಮಾತು ಕೂಟಕ್ಕೆ ಹೇಳಿಸಿದ್ದಾದರೂ ಆಕರ್ಷಕ ಮಾತುಗಳು ಆಟದ ಕಳೆಯನ್ನು ಹೆಚ್ಚಿಸುತ್ತದೆ. ಹಾಗೆಂದು ಪಾಂಡಿತ್ಯ ಇದೆ, ವಾದ ಶಕ್ತಿ ಇದೆ ಎಂದು ಪಾತ್ರವನ್ನು ಮೀರಿ ಮಾತನಾಡುವುದು ಕೂಡ ಉಚಿತವಲ್ಲ. ಅದು ಕಥೆ ಸರಾಗವಾಗಿ ಮುಂದುವರಿ ಯುವಲ್ಲಿ ಒಂದಿಷ್ಟು ಅಡಚಣೆಯನ್ನೂ ಉಂಟು ಮಾಡುತ್ತದೆ. ಎಂಥ ವಾಗ್ಮಿಯಾದರೂ ತನ್ನ ಪಾತ್ರದ ವ್ಯಾಪ್ತಿಯನ್ನು ಅರಿತು ಮಾತನಾಡುವುದು ಸೂಕ್ತ. ಎದುರಾಳಿಯನ್ನು ಮಾತಿನಲ್ಲೇ ಸೋಲಿಸಬೇಕು ಎಂದೋ, ಇಕ್ಕಟ್ಟಿಗೆ ಸಿಲುಕಿಸಬೇಕು ಎಂದೋ, ಪಾತ್ರಧಾರಿಯ ವೈಯಕ್ತಿಕ ವಿಷಯವನ್ನು ಕಥೆಗೆ ಹೋಲಿಸಿಕೊಂಡು ಮಾತನಾಡುವುದು ಮುಂತಾ ದವು ಯಕ್ಷಗಾನಕ್ಕೆ ಹೇಳಿಸಿದ್ದಲ್ಲ. ಈಗ ಕೆಲವರು ಅಂಥ ಪ್ರಯತ್ನದಲ್ಲಿ ಇರುವುದು ಈ ಶ್ರೇಷ್ಠ ಕಲೆಯ ಮಹತ್ವಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗುತ್ತದೆ.
ಕೆಲವು ವರ್ಷಗಳ ಹಿಂದೆ ಕೂಟವೊಂದರಲ್ಲಿ ರಾಮ ಮತ್ತು ಲಕ್ಷ್ಮಣರ ಸಂವಾದ. ಮಾಯಾ ಜಿಂಕೆಯನ್ನು ತರಲು ಹೋಗುವ ವಿಷಯದಲ್ಲಿ ಸಹೋದರರು ನಾನೇ ಹೋಗುತ್ತೇನೆ, ನಾನೇ ಹೋಗುತ್ತೇನೆ ಎಂಬ ವಾದ. ನಾನೇನು ಕಡಿಮೆ, ನೀನೇನು ಹೆಚ್ಚು ಎಂಬ ವಾದ ಮುಂದುವರಿಯುತ್ತಾ ಪಾತ್ರಕ್ಕೆ ಹೊಂದಿಕೊಂಡು ಒಬ್ಬರು ಸಂಭಾಷಣೆಗೆ ಇತಿಶ್ರೀ ಹಾಕ ಬೇಕು ಎಂದು ಭಾವಿಸಲೇ ಇಲ್ಲ. ಇಬ್ಬರು ಹಿರಿಯ ಪ್ರಮುಖ ಕಲಾವಿದರು. ತಮ್ಮದೇ ವಾದಸರಣಿಯಲ್ಲಿ ತಮ್ಮ ಪಾತ್ರವನ್ನು ಸಮರ್ಥಿಸಿ ಕೊಳ್ಳುವುದರಲ್ಲಿ ಹಿಂದೆ ಬೀಳಲಿಲ್ಲ. ಪ್ರೇಕ್ಷಕರಲ್ಲಿ ಅಸಹನೆ ಮೂಡಿತು. ಭಾಗ ವತರು ಕೂಡ ಜಾಗಟೆ ಕೆಳಗಿಟ್ಟು ಕೈಕಟ್ಟಿ ಕೂತರು. ಇಲ್ಲಿ ಇಬ್ಬರೂ ಕಥೆಯಿಂದ ಮುಖ್ಯ ವಾಗಿ ತಾವೇ ಮಾತಿನಲ್ಲಿ ಗೆಲ್ಲಬೇಕು ಎಂದು ಪಣಕ್ಕೆ ಬಿದ್ದವರಂತೆ ಸಂಭಾಷಣೆ ಮುಂದುವರಿಸಿದರು. ರಾತ್ರಿ ಆರಂಭವಾಗಿದ್ದ ಈ ಕೂಟ ಸೂರ್ಯನ ಕಿರಣ ಬಿದ್ದರೂ ಮುಗಿಯಲಿಲ್ಲ. ಇದು ಕಲಾವಿದರಿಗೆ ಘನತೆ ತಂದು ಕೊಡುವ ವಿಷಯವಂತು ಅಲ್ಲವೇ ಅಲ್ಲ.
ಹೊಸ ತಲೆಮಾರಿನ ಕೆಲವು ಕಲಾವಿದರು ಆಕರ್ಷಕವಾಗಿ ಮಾತನಾಡುವ ಶಕ್ತಿ ಹೊಂದಿದ್ದರೂ ಪಾತ್ರದ ಬಗ್ಗೆ ಅಗತ್ಯ ಅಧ್ಯಯನವನ್ನೂ ಮಾಡಿ ಕೊಂಡಿರುವುದಿಲ್ಲ ಎಂಬುದು ಅವರ ಮಾತಿ ನಿಂದಲೇ ಸ್ಪಷ್ಟವಾಗುತ್ತದೆ. ಯಕ್ಷಗಾನದ ಪಾತ್ರ ಧಾರಿಯ ತಾನು ನಿರ್ವಹಿಸುವ ಪಾತ್ರದ ಬಗ್ಗೆ ಅಧ್ಯಯನ ಮಾಡಿಕೊಂಡಿರಬೇಕಾದುದು ಅಗತ್ಯ. ಅಂಥ ಅಧ್ಯಯನ ಮಾಡಿದ್ದರೆ ಮಾತು ದಾರಿ ತಪ್ಪುವುದಿಲ್ಲ ಹಾಗೂ ಅಪ್ರಸ್ತುತವೂ ಆಗುವುದಿಲ್ಲ. ಹಿಂದೆಲ್ಲ ಬಹುತೇಕ ಕಲಾವಿದರು ಕಲೆಯನ್ನೇ ಉಸಿರಾಡುತ್ತಿದ್ದರು. ಈಗ ಅದಕ್ಕೊಂದು ರೀತಿಯ ವಾಣಿಜ್ಯಿಕ ಸ್ಪರ್ಶವೂ ಬಿದ್ದ ಪರಿಣಾಮವಾಗಿ ಅಧ್ಯಯನಕ್ಕೆ ಸಮಯದ ಕೊರತೆ ಕಂಡು ಬರುತ್ತಿದೆ.
ಯಕ್ಷಗಾನದಲ್ಲಿ ನಾಟ್ಯ, ವೇಷಕ್ಕೂ ಮಹತ್ವ ಇದೆಯಾದರೂ ಮಾತಿನ ತೂಕವೇ ಬೇರೆ. ಅದ್ಭುತ ನಾಟ್ಯ, ಆಕರ್ಷಕ ವೇಷವಿದ್ದರೂ ಮಾತು ಕಳಪೆಯಾದರೆ ಒಟ್ಟು ಸೊಗಸೇ ಮಂಕಾಗುತ್ತದೆ.
ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.