Old taluk office: ಶಿಥಿಲಾವಸ್ಥೆಗೆ ತಲುಪಿದ ಹಳೇ ತಾಲೂಕು ಕಚೇರಿ
Team Udayavani, Aug 14, 2023, 10:31 AM IST
ದೇವನಹಳ್ಳಿ: 1880ರಲ್ಲಿ ಬ್ರಿಟೀಷರ ಆಡಳಿತಾ ವಧಿಯಲ್ಲಿ ನಿರ್ಮಾಣವಾದ ಹಳೆ ತಾಲೂಕು ಕಚೇರಿ ಬಳಕೆಯಾಗದೆ ಗಿಡಗೆಂಟಿ ಬೆಳೆದು ಶಿಥಿಲಾವಸ್ಥೆಗೆ ತಲುಪುತ್ತಿದ್ದು ಇದೊ ಂದು ಪಾರಂಪರಿಕ ಸ್ಮಾರಕ ವಾಗಿದ್ದು, ಇದು ತಾಲೂಕಿನ ಇತಿಹಾಸ, ಪರಂಪರೆ, ಸಂಸ್ಕೃತಿ, ಹಾಗೂ ಹಿರಿಮೆಯನ್ನು ಪ್ರತಿ ಬಿಂಬಿಸುವ ಸಂಗ್ರಹಾಲಯವನ್ನಾಗಿ ಮಾಡುವಂತೆ ಅನೇಕರ ಅಭಿಪ್ರಾಯವಾಗಿದೆ.
ಪತ್ರ ವ್ಯವಹಾರ: ಹಳೆ ತಾಲೂಕು ಕಚೇರಿ ಕಟ್ಟಡವನ್ನು ವಸ್ತು ಸಂಗ್ರಾಹಲಯವನ್ನಾಗಿ ಮಾರ್ಪಡಿಸಲು ಬಿಟ್ಟಸಂದ್ರ ಗುರುಸಿದ್ದಯ್ಯ 14-07-2022ರಂದು 2 ಸಾವಿರ ಸಾರ್ವಜನಿಕರ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಹಾಗೂ ಪ್ರವಾಸೋದ್ಯಮ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ಪುರಾತತ್ವ ಇಲಾಖೆಗೆ ಸಲ್ಲಿಸಿದ್ದು 15-09-2022 ರಂದು ಮೈಸೂರಿನ ಪುರಾ ತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನೀಲಿನಕ್ಷೆ ಸಿದ್ಧಪಡಿಸಿ ವರದಿ ನೀಡಿ ದ್ದಾರೆ. 23-11-2022ರಂದು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ವಸ್ತು ಸಂಗ್ರಹಾಲ ಯವನ್ನಾಗಿ ಮಾರ್ಪಡಿಸಲು 1 ಕೋಟಿ 61 ಲಕ್ಷ ಪ್ರಸ್ತಾವನೆ ಹಾಗೂ ಕಟ್ಟಡವನ್ನು ಹಸ್ತಾಂತರಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಆದರೆ ಇದುವರೆಗೆ ಕಟ್ಟಡ ಹಸ್ತಾಂತರವಾಗಿಲ್ಲ. ದಿನೆ ದಿನೇ ಕಟ್ಟಡ ಮಾತ್ರ ಮಳೆಯಿಂದಾಗಿ ಹಾಳಾಗುತ್ತಿದೆ.
ಸಾರ್ವಜನಿಕರಿಂದ ಸಹಿ ಸಂಗ್ರಹ: ಬಿಟ್ಟಸಂದ್ರ ಗುರುಸಿದ್ದಯ್ಯ ತಾಲೂಕಿನ 2 ಸಾವಿರಕ್ಕೂ ಹೆಚ್ಚು ಸಾರ್ವ ಜನಿಕರ ಸಹಿ ಸಂಗ್ರಹಿಸಿ ಹಳೆ ತಾಲೂಕು ಕಚೇರಿಯನ್ನು ಪ್ರಾಚ್ಯವಸ್ತು ಇಲಾಖೆಗೆ ಕಟ್ಟಡವನ್ನು ಹಸ್ತಾಂತರಿಸಿ ಕಟ್ಟಡ ದುರಸ್ತಿ ಮಾಡಿ ಯತಾಸ್ಥಿತಿ ಕಾಪಾಡಿ ವಸ್ತು ಸಂಗ್ರಹಾ ಲಯವನ್ನಾಗಿ ಮಾರ್ಪ ಡಿಸುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್, ಸಚಿವರು, ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ ಅದರೆ ಅದು ಇದುವರೆಗೂ ಕಾರ್ಯಗತವಾಗಿಲ್ಲ.
ಶಿಥಿಲಗೊಂಡಿರುವ ಕಟ್ಟಡ: 150 ವರ್ಷ ಇತಿಹಾಸ ವಿರುವ ಪಾರಂಪರಿಕ ಕಟ್ಟಡ ಇದಾಗಿದ್ದು. ದೇವನ ಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ಮೊದಲಿಗೆ ಕಾಣುವುದೇ ಹಳೆ ತಾಲೂಕು ಕಚೇರಿ ಕಟ್ಟಡ ಹಿಂದೆ ಇದೇ ಕಟ್ಟಡಲ್ಲಿ ತಾಲೂ ಕಿನ ಸಾರ್ವಜನಿಕರ ಕೆಲಸಗಳು ನಡೆಯುತ್ತಿದ್ದವು, ನೂತನವಾಗಿ ಮಿನಿ ವಿಧಾನ ಸೌಧ ನಿರ್ಮಾಣವಾದ ಮೇಲೆ ಆ ಕಟ್ಟಡಕ್ಕೆ ತಾಲೂಕು ಆಡಳಿತ ಸ್ಥಳಾಂತರ ಗೊಂಡ ಮೇಲೆ ಹಳೆ ಕಟ್ಟಡ ಬಳಕೆಯಾಗದೆ ನಿರ್ವಹಣೆ ಇಲ್ಲದೆ, ಕಟ್ಟಡದ ಗೋಡೆಗಳ ಮೇಲೆ ಗಿಡಗೆಂಟಿಗಳು ಬೆಳೆದು ನಿಂತಿದ್ದು ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಹಳೆ ಪಾರಂಪರಿಕ ಕಟ್ಟಡವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಒತ್ತಾಯ:
ಹಳೆಯ ತಾಲೂಕು ಕಚೇರಿ ಇದೊಂದು ಪಾರಂಪರಿಕ ಕಟ್ಟಡವಾಗಿದ್ದು, ಇದು ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದು. ಅಂತಹ ಕಟ್ಟಡ ಬಳಕೆಯಾಗದೆ ನಿರ್ವಹಣೆಯಿಲ್ಲದೆ, ಗಿಡಗೆಂಟಿ ಬೆಳೆದು ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತಿದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಯಥಾಸ್ಥಿತಿ ಉಳಿಸಿ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಲು ತಾಲೂಕಿನಾದ್ಯಂತ 2 ಸಾವಿರಕ್ಕೂ ಹೆಚ್ಚು ಜನರ ಸಹಿಸಂಗ್ರಹಿಸಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಪತ್ರ ಬರೆದ ನಂತರ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಟ್ಟಡ ಹಸ್ತಾಂತರಿಸುವ ಹಂತದಲ್ಲಿದೆ. ಈ ವಿಚಾರವಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಮಾಡಿದ್ದೇನೆ. ಸಚಿವರು ಜಿಲ್ಲಾಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಿದ್ದಾರೆ. ಆದಷ್ಟು ಬೇಗ ಕಟ್ಟಡ ಪುರಾತತ್ವ ಇಲಾಖೆಗೆ ಹಸ್ತಾಂತರಿಸಿ ಹಳೆ ಪಾರಂಪರಿಕ ಕಟ್ಟಡವನ್ನು ವಸ್ತು ಸಂಗ್ರಾಹಲವನ್ನಾಗಿ ಪರಿವರ್ತಿಸಬೇಕಾಗಿದೆ ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ತಿಳಿಸಿದರು.
ದೇವನಹಳ್ಳಿ ಹಳೆ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿ ಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಇದುವರೆಗೂ ಹಸ್ತಾಂತರವಾಗಿಲ್ಲ. ಮತ್ತೂಂದು ಪತ್ರ ಬರೆಯುತ್ತೇವೆ. ಹಳೆ ತಾಲೂಕು ಕಚೇರಿ ಇತಿಹಾಸ ಪ್ರಸಿದ್ಧವಾಗಿರುವ ಕಟ್ಟಡವಾಗಿದೆ. ದೇವನಹಳ್ಳಿಗೆ ವಸ್ತುಸಂಗ್ರಹಾಲಯದ ಅವಶ್ಯಕತೆ ಇದೆ. ಕಟ್ಟಡ ಹಸ್ತಾಂತರಿಸಿದರೆ ಇಲಾಖೆಯ ಅನುದಾನದಿಂದ ವಸ್ತು ಸಂಗ್ರಹಾಲಯನ್ನಾಗಿ ಮಾಡುತ್ತೇವೆ. -ದೇವರಾಜು.ಎ, ಆಯುಕ್ತರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.