Independence Day 2023: 1947ರಲ್ಲಿ “ಸ್ವರಾಜ್ಯ ವಿಜಯ’, ಈಗ “ಕಾಶ್ಮೀರ ವಿಜಯ’

ಉಡುಪಿ ರಥಬೀದಿಯಲ್ಲಿ ಸ್ಥಳೀಯರು ಮತ್ತು ಆಸುಪಾಸಿನವರು ಜಮಾಯಿಸಿದ್ದರು.

Team Udayavani, Aug 14, 2023, 11:26 AM IST

Independence Day 2023: 1947ರಲ್ಲಿ “ಸ್ವರಾಜ್ಯ ವಿಜಯ’, ಈಗ “ಕಾಶ್ಮೀರ ವಿಜಯ’

ಉಡುಪಿ: ದೇಶದ ಪ್ರಥಮ ಸ್ವಾತಂತ್ರ್ಯದ ಸಂಭ್ರಮದಲ್ಲಿ ಪ್ರತಿಯೊಂದು ಊರಿನ ಜನತೆಯೂ ನಾನಾ ವಿಧದಲ್ಲಿ ಪಾಲ್ಗೊಂಡಿತ್ತು. ಉಡುಪಿಯಲ್ಲಿ ಮಾತ್ರ ಕರಾವಳಿಯ ಕಲೆ ಯಕ್ಷಗಾನದ ಮೂಲಕ ಸ್ವಾತಂತ್ರ್ಯ ಸಂಭ್ರಮ ಆಚರಿಸಲಾಯಿತು.

1947ರ ಆ. 14ರ ರಾತ್ರಿ 9.30ರಿಂದ ಮರುದಿನ ರಾತ್ರಿವರೆಗೆ ನಗರದ ವಿವಿಧೆಡೆ ಪ್ರಥಮ ಸ್ವಾತಂತ್ರ್ಯೋತ್ಸವ ಆಚರಣೆಯಾಗಿತ್ತು. ಎಲ್ಲಾ ದೇವಸ್ಥಾನಗಳು, ಮಠಗಳು, ಮನೆಗಳು, ರಸ್ತೆಗಳು ಅಲಂಕರಣಗೊಂಡಿದ್ದವು. ಆ. 14ರ ರಾತ್ರಿ ಎಂ.ವಿ.ಹೆಗ್ಡೆ ಅವರು ರಚಿಸಿದ “ಸ್ವರಾಜ್ಯ ವಿಜಯ’ ಎಂಬ ಯಕ್ಷಗಾನ ತಾಳಮದ್ದಲೆಯನ್ನು ಯುವಕ ಮಂಡಲದ ಸದಸ್ಯರು ಶ್ರೀಅನಂತೇಶ್ವರ
ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಪ್ರಸ್ತುತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂ. ವಿಟ್ಠಲ ಕಾಮತ್‌ (ಪತ್ರಕರ್ತ ಡಾ| ಎಂ.ವಿ. ಕಾಮತ್‌ ಅವರ ತಂದೆ) ವಹಿಸಿದ್ದರು. 1919ರಿಂದ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ಸ್ಥಾನವಾಗಿದ್ದ ಉಡುಪಿ ರಥಬೀದಿಯಲ್ಲಿ ಸ್ಥಳೀಯರು ಮತ್ತು ಆಸುಪಾಸಿನವರು ಜಮಾಯಿಸಿದ್ದರು.

ಇದೇ ತಾಳಮದ್ದಲೆಯನ್ನು ಸಂಘಟಕ ಸುಧಾಕರ ಆಚಾರ್ಯರ ಮುತುವರ್ಜಿಯಿಂದ 70ನೆಯ ವರ್ಷಾಚರಣೆಯಲ್ಲಿ 2016ರ ಆ. 14ರಂದು ಅನಂತೇಶ್ವರ ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಚಾಲನೆ ನೀಡಿ ರಾಜಾಂಗಣದಲ್ಲಿ ಮರು ಸೃಷ್ಟಿಸಲಾಯಿತು. 1947 ಮತ್ತು 2016 ಎರಡರಲ್ಲೂ ಪಾಲ್ಗೊಂಡವರು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು.

1948ರಲ್ಲಿ ಹೈದರಾಬಾದ್‌ ವಿಜಯದಂತಹ ಐತಿಹಾಸಿಕ ತಾಳಮದ್ದಳೆಯನ್ನು ಶ್ರೀಕೃಷ್ಣ ಮಠದ ಪರಿಸರದಲ್ಲಿಯೇ ನಡೆಸಲಾಗಿತ್ತು. ಇದನ್ನೂ ಬರೆದವರು ಎಂ.ವಿ. ಹೆಗ್ಡೆ. 2017ರಲ್ಲಿ ಇದರ ಮರುಸೃಷ್ಟಿ ಯನ್ನೂ ಸುಧಾಕರ ಆಚಾರ್ಯರು ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿಯೇ ನಡೆಸಿದರು.

ಇವೆರಡು ಐತಿಹಾಸಿಕ ತಾಳಮದ್ದಳೆಗಳ ಬಳಿಕ ಮೂಡಿದ ಚಿಂತನೆ ದೇಶದ ಮುಕುಟಮಣಿಯಾದ ಕಾಶ್ಮೀರದಲ್ಲಿ 370ನೆಯ ವಿಧಿ ರದ್ದಾಗಿ ಅಲ್ಲೊಂದು ಗತಕಾಲದ ವೈಭವ ಕಾಣುವ ಆಶಾವಾದ ಮೂಡಿ ದಾಗ. ಇದಕ್ಕೆ “ಕಾಶ್ಮೀರ ವಿಜಯ’ ಎಂದು ನಾಮಕರಣಗೊಳಿಸಲಾಯಿತು. “ಕಾಶ್ಮೀರ ವಿಜಯ’ ಪ್ರಸಂಗವು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರ ಗೌರವಾಧ್ಯಕ್ಷತೆ, ಪ್ರಮುಖರನ್ನೊಳಗೊಂಡ “ಸುಶಾಸನ ಸಮಿತಿ’ಯ ಸಂಯೋಜನೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿಯವರ ಗಾನ ಸಾರಥ್ಯದಲ್ಲಿ ಉಡುಪಿ, ಮಂಗಳೂರು, ಮಣಿಪಾಲ ಶಿವಪಾಡಿಯಲ್ಲಿ ಪ್ರಯೋಗಗೊಂಡಿತು. ಭಾರತದ ಸಾಹಿತ್ಯ, ಸಂಸ್ಕೃತಿ ಹಾಗೂ ತತ್ವಜ್ಞಾನಗಳಿಗೆ ಅಪಾರ ಕೊಡುಗೆಯನ್ನು ನೀಡಿ ಶಾರದಾ ದೇಶವೆಂದೇ ಪ್ರಸಿದ್ಧವಾಗಿದ್ದ ಕಾಶ್ಮೀರದ ಇತಿಹಾಸವನ್ನು ಕಲಾತ್ಮಕವಾಗಿ ಪರಿಚಯಿಸುವ ಕೆಲಸ ಇದಾಗಿದೆ.

ಯಕ್ಷಗಾನೀಯ ಪದ್ಯಸಿರಿಯಿಂದ ಶ್ರೀಮಂತವಾದ ಕಾಶ್ಮೀರ ವಿಜಯ ಪ್ರಸಂಗವು ಹಿರಿಯ ಕಲಾವಿದರ ಸಮ್ಮುಖದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 33ನೆಯ ವರ್ಷದ ಸ್ವಾತಂತ್ರೊéàತ್ಸವ ತಾಳಮದ್ದಳೆ ಆಚರಣೆಯಾಗಿ ಆ. 15 ರಂದು ಕಿದಿಯೂರು ಹೊಟೇಲ್‌ ಶೇಷಶಯನ ಹಾಲ್‌ನಲ್ಲಿ ನಡೆಯಲಿದೆ. ಮಧ್ಯಾಹ್ನ 1.30ರಿಂದ ಪಾರ್ತಿಸುಬ್ಬ ವಿರಚಿತ, ಪ್ರೊ|ಪವನ್‌ ಕಿರಣಕೆರೆ ಪರಿಕಲ್ಪಿತ “ಸುಂದರ ಭ್ರಾತೃತ್ವ’, ಸಂಜೆ 4.30ರಿಂದ “ಕಾಶ್ಮೀರ ವಿಜಯ’ ತಾಳಮದ್ದಳೆ ನಡೆಯಲಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.