ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ


Team Udayavani, Aug 15, 2023, 9:57 AM IST

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ

ಜೀವ ವೈವಿಧ್ಯತಾಣ, ಮಲೆನಾಡ ಮಡಿಲಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿತ್ರದುರ್ಗ ಏಳು ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುತ್ತದೆ. ಕರ್ನಾಟಕದಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಜ್ಞಾನ ವಿಷಯಗಳನ್ನು ಒಳಗೊಂಡ ರಾಜ್ಯದ ಮೊಟ್ಟ ಮೊದಲ, ಏಕೈಕ ಸಮಗ್ರ ವಿಶ್ವವಿದ್ಯಾಲಯವಾಗಿದ್ದು, ಇದು ಸೆಪ್ಟೆಂಬರ್‌ 21, 2013ರಿಂದ ಅಧಿಕೃತವಾಗಿ ಪ್ರಾರಂಭಗೊಂಡು ಕಾರ್ಯನಿರ್ವಹಿಸುತ್ತಿದೆ.

ವಿಶ್ವವಿದ್ಯಾಲಯದ ಸಾಂಸ್ಥಿಕ ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನೆ ಹಾಗೂ ವಿಸ್ತರಣಾ ಘಟಕಗಳು
ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ ಮತ್ತು ಹಿರಿಯೂರು, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಮತ್ತು ಇರುವಕ್ಕಿ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ, ಡಿಪೊÉಮಾ ಕೃಷಿ ವಿದ್ಯಾಲಯ ಕತ್ತಲಗೆರೆ ಮತ್ತು ಬ್ರಹ್ಮಾವರ ಸೇರಿದಂತೆ ಒಟ್ಟು 7 ಶಿಕ್ಷಣ ಕೇಂದ್ರಗಳು-ಇರುವಕ್ಕಿಯಲ್ಲಿ ಒಂದು ಮುಖ್ಯ ಸಂಶೋಧನಾ ಕೇಂದ್ರ-ಶಿವಮೊಗ್ಗ, ಬ್ರಹ್ಮಾವರ, ಹಿರಿಯೂರು ಮತ್ತು ಮೂಡಿಗೆರೆ ಸೇರಿದಂತೆ 4 ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳು-ಹೊನ್ನವಿಲೆ, ಬಾವಿಕೆರೆ, ಕತ್ತಲಗೆರೆ, ಪೊನ್ನಂಪೇಟೆ, ಮಡಿಕೇರಿ, ಶೃಂಗೇರಿ, ಉಲ್ಲಾಳ, ತೀರ್ಥಹಳ್ಳಿ, ಕಡೆಮಡ್ಕಲ್‌ 9 ಸಂಶೋಧನಾ ಕೇಂದ್ರಗಳು- ಶಿವಮೊಗ್ಗ, ಮೂಡಿಗೆರೆ, ಹಿರಿಯೂರು, ಬ್ರಹ್ಮಾವರ ಸೇರಿದಂತೆ 4 ಕೃಷಿ ವಿಜ್ಞಾನ ಕೇಂದ್ರಗಳು-ಕತ್ತಲಗೆರೆ ಮತ್ತು ಪೊನ್ನಂಪೇಟೆ 2 ವಿಸ್ತರಣಾ ಶಿಕ್ಷಣ ಘಟಕಗಳು-ತೀರ್ಥಹಳ್ಳಿ ಮತ್ತು ಶೃಂಗೇರಿ ವಿಸ್ತರಣಾ ಘಟಕಗಳು ಒಳಗೊಂಡಂತೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತವೆ.

ಶೈಕ್ಷಣಿಕ ಸಾಧನೆಗಳು
ನಮ್ಮ ವಿಶ್ವವಿದ್ಯಾಲಯ ಆರಂಭವಾದಾಗಿನಿಂದಲೂ ಕೃಷಿ, ತೋಟಗಾರಿಕೆ ಮತ್ತುಅರಣ್ಯದ ವಿವಿಧ ವಿಭಾಗಗಳಲ್ಲಿ ಒಟ್ಟು 3189 ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. ಅದರಲ್ಲಿ 2344 ಪದವೀಧರರು, 751 ಸ್ನಾತಕೋತ್ತರ ಪದವಿ ಮತ್ತು 87 ಪಿಎಚ್‌.ಡಿ.ಪದವಿ ಪಡೆದುಕೊಂಡಿರುತ್ತಾರೆ. ಇದುವರೆಗೆ 111 ಚಿನ್ನದ ಪದಕಗಳನ್ನು 58 ಸ್ನಾತಕ ವಿದ್ಯಾರ್ಥಿಗಳಿಗೆ ಮತ್ತು 108 ಚಿನ್ನದ ಪದಕಗಳನ್ನು 104 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು 34 ಚಿನ್ನದ ಪದಕಗಳನ್ನು 29 ಪಿ.ಹೆಚ್‌.ಡಿ. ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗಿದೆ. 123 ವಿದ್ಯಾರ್ಥಿಗಳು ಐಸಿಎಆರ್‌-ಜೆಆರ್‌ಎಫ್‌ಗಳನ್ನು ಮತ್ತು 15 ವಿದ್ಯಾರ್ಥಿಗಳು ಐಸಿಎಆರ್‌-ಎಸ್‌ಆರ್‌ಎಫ್‌ಗಳನ್ನು ಒಟ್ಟಾರೆಯಾಗಿ ಪಡೆದುಕೊಂಡಿದ್ದಾರೆ. ಇದುವರೆಗೆ 583 ವಿದ್ಯಾರ್ಥಿಗಳು ಡಿಪೊÉಮಾ (ಕೃಷಿ) ಪಡೆದಿದ್ದಾರೆ. ವಿಶ್ವವಿದ್ಯಾಲಯವು ಕೃಷಿ ವಿಸ್ತರಣಾ ಸೇವೆ ಹಾಗೂ ಕೃಷಿ ಪರಿಕರ ಡೀಲರ್‌ಗಳಿಗಾಗಿ (ದೇಸಿ) ಒಂದು ವರ್ಷದ ಡಿಪೊÉಮಾವನ್ನು ಸಹ ನೀಡುತ್ತಿದ್ದು, ಒಟ್ಟಾರೆಯಾಗಿ, 1014 ವಿದ್ಯಾರ್ಥಿಗಳು ಈ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರುತ್ತಾರೆ.

ರಾಷ್ಟ್ರಮಟ್ಟದ ಮಾನ್ಯತೆ ಮತ್ತು ಪ್ರಶಸ್ತಿಗಳು
ನಮ್ಮ ವಿಶ್ವವಿದ್ಯಾಲಯ ಹಾಗೂ ನಾಲ್ಕು ಸಾಂಸ್ಥಿಕ ಮಹಾವಿದ್ಯಾಲಯಗಳು 2021 ರಿಂದ 2026 ರವರೆಗೆ ಐದು ವರ್ಷಗಳ ಅವಧಿಗೆ ಐಸಿಎಆರ್‌ನಿಂದ ಮಾನ್ಯತೆ ಪಡೆದಿರುತ್ತವೆ. ಅಖೀಲ ಭಾರತ ಮಟ್ಟದಲ್ಲಿ ತೋಟಗಾರಿಕೆ ಮತ್ತು ಅರಣ್ಯಶಾಸ್ತ್ರದಲ್ಲಿ ಐಸಿಎಆರ್‌-ಜೆಆರ್‌ಎಫ್‌ ವಿದ್ಯಾರ್ಥಿವೇತನದಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಕ್ಕಾಗಿ ನಾವು ಐಸಿಎಆರ್‌- ರಾಷ್ಟ್ರೀಯ ಪ್ರಶಸ್ತಿಯನ್ನು ಎರಡು ಬಾರಿ ಸ್ವೀಕರಿಸಲಾಗಿದೆ. ಭಾರತೀಯ ಅರಣ್ಯ ಮತ್ತು ಶಿಕ್ಷಣ ಸಂಶೋಧನಾ ಪರಿಷತ್ತು (ಐಸಿಎಫ್‌ಆರ್‌ಇ)ವತಿಯಿಂದ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯಕ್ಕೆ ‘ಎ**’ ಎರಡು ಸ್ಟಾರ್‌ ಶ್ರೇಯಾಂಕದೊಂದಿಗೆ ಮಾನ್ಯತೆ ಪಡೆದಿರುತ್ತದೆ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಐದು ಅರಣ್ಯ ಮಹಾವಿದ್ಯಾಲಯಗಳಲ್ಲಿ ಈ ಅರಣ್ಯ ಮಹಾವಿದ್ಯಾಲಯವು ಒಂದಾಗಿರುತ್ತದೆ. 2020 ಮತ್ತು 2021 ನೇ ಸಾಲಿನಲ್ಲಿ ಕೊಚ್ಚಿನ್‌ನ ಗೋಡಂಬಿ ಮತ್ತು ಕೋಕೊ ನಿರ್ದೇಶನಾಲಯದ ವತಿಯಿಂದ ಬಾವಿಕೆರೆಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಉಲ್ಲಾಳದ ಗೋಡಂಬಿ ಸಂಶೋಧನಾ ಕೇಂದ್ರ ನಾಲ್ಕು ಸ್ಟಾರ್‌ ಪ್ರಶಸ್ತಿಯನ್ನು ಪಡೆದಿರುತ್ತವೆ. 2019ನೇ ಸಾಲಿನಲ್ಲಿ ಕ್ಯಾಲಿಕಟ್‌ನ ಅಡಿಕೆ ಮತ್ತು ಸಂಬಾರು ಬೆಳೆಗಳ ನಿರ್ದೇಶನಾಲಯದ ವತಿಯಿಂದ ಕರಿಮೆಣಸು ನರ್ಸರಿಗಾಗಿ ಮೂಡಿಗೆರೆಯ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವು ನಾಲ್ಕುಸ್ಟಾರ್‌ ನರ್ಸರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಐಸಿಎಆರ್‌ವತಿಯಿಂದ ದೇಶದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಈ ವಿಶ್ವವಿದ್ಯಾಲಯವು 51 ರಿಂದ 21 ನೇ ಸ್ಥಾನ ಹಾಗೂ 32ನೇ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಸಂಶೋಧನಾ ಯೋಜನೆಗಳು
ವಿಶ್ವವಿದ್ಯಾಲಯವು ಒಟ್ಟು 246 ಬಾಹ್ಯ ಸಂಶೋಧನೆ ಯೋಜನೆಗಳು, 46 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, 43 ಸಾಂಸ್ಥಿಕ ಹಣಕಾಸು ನಿಧಿ, 497 ಸಿಬ್ಬಂದಿ ಸಂಶೋಧನಾ ಯೋಜನೆ, 180 ರಾಜ್ಯ ಸರ್ಕಾರದ ಯೋಜನೆಗಳು, 190 ಅಭಿವೃದ್ಧಿ ಅನುದಾನ ಯೋಜನೆ, 188 ರಾಸಾಯನಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಕೈಗೊಂಡಿರುತ್ತದೆ.

ಯಂತ್ರೋಪಕರಣಗಳ ಅಭಿವೃದ್ಧಿ
ವಿಶ್ವವಿದ್ಯಾಲಯವು 22 ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳಲ್ಲಿ ಮಾರ್ಪಡಿಸಿದ ಕೈ-ಚಾಲಿತ ಸೈಕಲ್‌ ವೀಡರ್‌, ಬ್ರಹ್ಮಾವರ ಮಾದರಿ ಭತ್ತದ ಕಳೆ ತೆಗೆಯುವ ಯಂತ್ರ, ಒಂದೇ ಸಾಲಿನ ಕರಾವಳಿ ಕಳೆ ತೆಗೆಯುವ ಯಂತ್ರ, ಎರಡು ಸಾಲಿನ ಕರಾವಳಿ ವೀಡರ್‌, ವಿದ್ಯುತ್‌ ಚಾಲಿತ ತ್ರಿ ಇನ್‌ ಒನ್‌ (ಜಟ್ರೋಪಾ, ಕ್ಯಾಸ್ಟರ್‌, ನೆಲಗಡಲೆ) ಕಾಳು ಬಿಡಿಸುವ ಯಂತ್ರ, ಸುಧಾರಿತ ಕೈ-ಚಾಲಿತ ಮೆಕ್ಕೆ ಜೋಳದ ಶೆಲ್ಲರ್‌ಯಂತ್ರ, ಮೋಟಾರು ಶೆಲ್ಲರ್‌ ಯಂತ್ರ, ಮೋಟಾರ್‌ ಚಾಲಿತ ಮೆಕ್ಕೆ ಜೋಳದ ಶೆಲ್ಲರ್‌, ಪವರ್‌ಟಿಲ್ಲರ್‌ ಚಾಲಿತ ಡೋಜರ್‌, ಸ್ಪಾಟ್‌ಅಪ್ಲಿಕೇಟರ್‌, ಸುಧಾರಿತ ಕೋನೋವೀಡರ್‌, ಹೆ„ಡ್ರಾಲಿಕ್‌ ಗೋಡಂಬಿ ಜ್ಯೂಸ್‌ಎಕ್ಸ್‌ಟ್ರಾಕ್ಟರ್‌, ಪವರ್‌ಟಿಲ್ಲರ್‌ ಚಾಲಿತ ಬೇಸಾಯ ಸಾಧನ, ಕಾಫಿ ಹೀಪರ್‌ ಯಂತ್ರ, ಫಾರ್ಮ್ ವಿಜಿಲೆನ್ಸ್‌ ಸಾಧನ, ಮೋಟಾರ್‌ ಆಧಾರಿತ ಮಿನಿ ಮೆಕ್ಕೆ ಜೋಳದ ಶೆಲ್ಲರ್‌, ಮೋಟಾರ್‌ ಆಧಾರಿತ ವೀಲ್‌ ವೀಡರ್‌, ಟ್ರೇ ವಿಧಾನದ ಭತ್ತ ಸಸಿಗಳ ನಾಟಿ ಮಾಡುವ ಯಂತ್ರಗಳನ್ನು ಅಭಿವೃದ್ಧಿಪಡಿಸಿರುತ್ತದೆ.

ವಿಶ್ವವಿದ್ಯಾಲಯದ ಪೇಟೆಂಟ್‌
ವಿಶ್ವವಿದ್ಯಾಲಯವು ಮಿನಿ ಕೈ ಚಾಲಿತ ನೆಲಗಡಲೆ ಸಿಪ್ಪೆ ಸುಲಿಯುವ ಯಂತ್ರಕ್ಕೆ ಪೇಟೆಂಟ್‌ ಪಡೆದುಕೊಂಡಿರುತ್ತದೆ. ಮೆಣಸಿನಕಾಯಿಯಲ್ಲಿನ ಪ್ರೊಟೋಕಾಲ್‌ಗೆ ಏಕಗುಣಿತಗಳು (ಹ್ಯಾಪ್ಲಾಯ್ಡಗಳು) ಮತ್ತು ಡಬಲ್‌ ಏಕಗುಣಿತಗಳ (ಹ್ಯಾಪ್ಲಾಯ್ಡಗಳ) ಇನ್‌-ವಿಟ್ರೊ ಉತ್ಪಾದನೆಗೆ ಹಾಗೂ ವೀಲ್‌ ವೀಡರ್‌ಗೆ ಪೇಟೆಂಟ್‌ ಪಡೆಯಲು ಸಲ್ಲಿಸಲಾಗಿದೆ.
ವಿಶ್ವವಿದ್ಯಾಲಯವು ಸಹ್ಯಾದ್ರಿ ನೋನಿ ಹರ್ಬಲ್‌ ಡಿಪ್‌ ಟೀ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್‌. ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಶಿವಮೊಗ್ಗದ ವ್ಯಾಲ್ಯೂ ಪ್ರಾಡಕ್ಟ್ ಪ್ರŒ„.ಲಿ.ಗೆ ವರ್ಗಾಯಿಸಲಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಹಾಗೂ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ (ಪಿಎಂಎಫ್‌ಎಂಇ)ಅಡಿಯಲ್ಲಿ ಇರುವಕ್ಕಿಯಲ್ಲಿ ಅನಾನಸ್‌ ಮತ್ತು ಶುಂಠಿ, ಮೂಡಿಗೆರೆಯಲ್ಲಿ ಸಂಬಾರು ಮತ್ತು ಹಿರಿಯೂರಿನಲ್ಲಿ ನೆಲಗಡಲೆ ಬೆಳೆಗಳ ಸಂಸ್ಕರಣೆಗೆ ಸಾಮಾನ್ಯ ಇನ್‌ನ್ಕ್ಯೂಬೇಷನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕೃಷಿಕರಿಗೆ ತಂತ್ರಜ್ಞಾನಗಳ ವರ್ಗಾವಣೆ
ವಿಶ್ವವಿದ್ಯಾಲಯದ ಪ್ರಾರಂಭವಾದಾಗಿನಿಂದಲೂ, ವಿಸ್ತರಣಾ ವಿಭಾಗವು 771 ಮುಂಚೂಣಿ ಪ್ರಾತ್ಯಕ್ಷಿಕೆಗಳು, 219 ಕೃಷಿ ಕ್ಷೇತ್ರ ಪರೀಕ್ಷಾ ಪ್ರಯೋಗಗಳು, 1142 ಒಳ ಆವರಣ ತರಬೇತಿಗಳು, 1053 ಹೊರ ಆವರಣ ತರಬೇತಿಗಳು, 456 ವೃತ್ತಿಪರ, ಪ್ರಾಯೋಜಿತ ಮತ್ತು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಣಾ ಕಾರ್ಯಕರ್ತರಿಗಾಗಿ ನಡೆಸಲಾಗಿರುತ್ತದೆ. ಇದರ ಜೊತೆಗೆ 30992 ಮಣ್ಣು ಮತ್ತು 14793 ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿರುತ್ತದೆ. ಆಕಾಶವಾಣಿ ಭದ್ರಾವತಿ ಮತ್ತು ಚಿತ್ರದುರ್ಗದಿಂದ ಕ್ರಮವಾಗಿ ವಿಶ್ವವಿದ್ಯಾಲಯ ಪ್ರಾಯೋಜಿತ ‘ನೇಗಿಲ ಮಿಡಿತ’ ಹಾಗೂ ‘ಕೃಷಿ ಸಂಪದ’ ಆಕಾಶವಾಣಿ ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆ ವಿವರ ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ತಾಂತ್ರಿಕ ಮಾಹಿತಿಗಳನ್ನು ರೈತರ ಅನುಕೂಲಕ್ಕಾಗಿ ಪ್ರತಿ ದಿನ ಪ್ರಸಾರ ಮಾಡಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ
ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಯೋಜನೆ (ಎನ್‌ಎಎಚ್‌ಇಪಿ)ಯ ಐಡಿಪಿ ಯೋಜನೆಯನ್ನು ವಿಶ್ವವಿದ್ಯಾಲಯದಲ್ಲಿ 6.10 ಕೋಟಿ ರೂ. ಅನುದಾನದೊಂದಿಗೆ ಜಾರಿಯಲ್ಲಿದ್ದು, ಈ ಯೋಜನೆಯಡಿ ಹಲವಾರು ವಿನೂತನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲೇ ಮೊದಲ ಬಾರಿಗೆ ಐಓಟಿ-ಸ್ಮಾರ್ಟ್‌ ಕೃಷಿ ತೋಟಗಾರಿಕೆ, ಅರಣ್ಯ ವಿಷಯಗಳನ್ನು ಪ್ರಾರಂಭಿಸಲಾಗಿದ್ದು, 20 ವಿದ್ಯಾರ್ಥಿಗಳ ಮೊದಲ ತಂಡ ಇದನ್ನು ಪೂರ್ಣಗೊಳಿಸಿದ್ದಾರೆ. ಪ್ರೊಗ್ರಾಂ ಇನ್‌ ಪ್ರೊಗ್ರಾಮಿಂಗ್‌ ಫಾರ್‌ ಕೃಷಿ, ತೋಟಗಾರಿಕೆ, ಅರಣ್ಯ ಎಂಬ ವಿಷಯವನ್ನು ಅಳವಡಿಸಲಾಗಿದೆ. ಅಂತಾರಾಷ್ಟ್ರೀಯ ಕೃಷಿ ತರಬೇತಿಗಾಗಿ ಮೊದಲ ಬಾರಿಗೆ ಸ್ನಾತಕ ವಿದ್ಯಾರ್ಥಿಗಳಿಗಾಗಿ ವಿಶೇಷ ವಿಷಯವೊಂದನ್ನು ಪ್ರಾರಂಭಿಸಿ, 4 ಕೃಷಿ ವಿದ್ಯಾರ್ಥಿಗಳನ್ನು ಅಮೆರಿಕಾದ ಕನ್ಸಾಸ್‌ ಸ್ಟೇಟ್‌ ವಿಶ್ವವಿದ್ಯಾಲಯಕ್ಕೆ 2 ಅರಣ್ಯ ವಿದ್ಯಾರ್ಥಿಗಳು ಹಾಗೂ 4 ತೋಟಗಾರಿಕೆ ವಿದ್ಯಾರ್ಥಿಗಳನ್ನು, ಜರ್ಮನಿಯ ಎಬರ್‌ಹಾರ್ಡ್‌ ಕಾರ್ಲ್ ವಿಶ್ವವಿದ್ಯಾಲಯಕ್ಕೆ, ಕಲಿಕಾ ತರಬೇತಿಗಾಗಿ ಕಳುಹಿಸಿಕೊಡಲಾಗಿತ್ತು. ಮುಂಬರುವ ದಿನಗಳಲ್ಲಿ ಇದನ್ನು ಮುಂದುವರೆಸುವ ಚಿಂತನೆ ವಿಶ್ವವಿದ್ಯಾಲಯದ್ದಾಗಿದೆ.

ವಿಶ್ವವಿದ್ಯಾಲಯದವತಿಯಿಂದ ಎರಡು ಗೌರವ ಡಾಕ್ಟರೇಟ್‌ ನೀಡಿಕೆ
ವಿಶ್ವವಿದ್ಯಾಲಯದ ವತಿಯಿಂದ ಮೊದಲ ಗೌರವ ಡಾಕ್ಟರೇಟ್‌ ಪದವಿಯನ್ನು ಕೋವಿಡ್‌ ಲಸಿಕೆಯನ್ನು ಜಗತ್ತಿಗೆ ಕೊಟ್ಟಂತಹ ಹೈದರಾಬಾದ್‌ನ ಭಾರತ್‌ ಬಯೋಟೆಕ್‌ನ ಸಂಸ್ಥಾಪಕ ಹಾಗೂ ಕೃಷಿ ಪದವಿಧರರಾದ ಡಾ. ಕೃಷ್ಣಮೂರ್ತಿ ಎಲ್ಲಾ ಅವರಿಗೆ ನೀಡಲಾಗಿದೆ. ನಾಡು ಕಂಡ ಒಬ್ಬ ಧೀಮಂತ ರಾಜಕಾರಣಿ, ರೈತನಾಯಕರಾದ ಶ್ರೀಯುತ ಬಿ.ಎಸ್‌. ಯಡಿಯೂರಪ್ಪನವರು ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿ ದೇಶಕ್ಕೆ ಮಾದರಿಯಾಗಿದ್ದವರು. ಮಲೆನಾಡಿನಲ್ಲಿ ಕೃಷಿ ಶಿಕ್ಷಣ, ಸಂಶೋಧನೆ, ವಿಸ್ತರಣೆಯ ಅಗತ್ಯತೆ ಮನಗಂಡು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆರಂಭಕ್ಕೆ ಮುನ್ನುಡಿ ಬರೆದವರು. ಅವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದಿಂದ ಎಂಟನೇ ಘಟಿಕೋತ್ಸವದಲ್ಲಿ (21-07-2023)ಎರಡನೇ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನೂತನ ತಳಿಗಳ ಅಭಿವೃದ್ಧಿ
ವಿಶ್ವವಿದ್ಯಾಲಯವು ಒಟ್ಟು 13 ಉತ್ತಮ ಇಳುವರಿ ಕೊಡುವ ತಳಿಗಳನ್ನು ಅಭಿವೃದ್ಧಿಪಡಿಸಿರುತ್ತದೆ. ಅವುಗಳಲ್ಲಿ ಭತ್ತದ ತಳಿಗಳಾದ ಸಹ್ಯಾದ್ರಿ ಮಧು, ಸಹ್ಯಾದ್ರಿ ಪ್ರಗತಿ, ಸಹ್ಯಾದ್ರಿ ಭಾರತ, ಸಹ್ಯಾದ್ರಿ ಪಂಚಮುಖೀ, ಸಹ್ಯಾದ್ರಿ ಮೇಘ, ಸಹ್ಯಾದ್ರಿ ಕಾವೇರಿ, ಸಹ್ಯಾದ್ರಿ ಕೆಂಪು ಮುಕ್ತಿ, ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಪುಷ್ಟಿ, ಸಹ್ಯಾದ್ರಿ ಸಿರಿ, ಸಹ್ಯಾದ್ರಿ ಜಲಮುಕ್ತಿ, ಸಹ್ಯಾದ್ರಿ ಸಪ್ತಮಿ ಎಂಬ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಇದರ ಜೊತೆಗೆ ತಲಾ ಅಡಿಕೆ ಮತ್ತು ಗೋವಿನಜೋಳವನ್ನು ಅಭಿವೃದ್ಧಿಸಿರುತ್ತದೆ.

ಟಾಪ್ ನ್ಯೂಸ್

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ

MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Eshwara Khandre: ಪಶ್ಚಿಮಘಟ್ಟ ನದಿ ನೀರು ಪೂರೈಕೆ ನಗರಗಳಿಗೆ ಸೆಸ್‌

Eshwara Khandre: ಪಶ್ಚಿಮಘಟ್ಟ ನದಿ ನೀರು ಪೂರೈಕೆ ನಗರಗಳಿಗೆ ಸೆಸ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.