Vishwa Chetana, Vidyaniketana: ವಿದ್ಯಾರ್ಥಿಗಳ ದಾರಿದೀಪ ವಿಶ್ವ ಚೇತನ ವಿದ್ಯಾನಿಕೇತನ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ವಿದ್ಯಾಸಂಸ್ಥೆ
Team Udayavani, Aug 15, 2023, 12:10 PM IST
ಸಮಾಜಕ್ಕೆ ಸದಾ ಕಾಲ ಬೆಳಕಾಗುವ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವಂತಹ ಸಮಾಜದ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಲು ಮನಸ್ಸಿಗೆ ಸೂಕ್ತ ತರಬೇತಿ ನೀಡುವ, ಜ್ಞಾನ, ನೈತಿಕತೆ ಬೆಳೆಸುವ ಮೂಲಕ ಹೊಸ ಚಿಲುಮೆಯ ವಿದ್ಯಾರ್ಥಿ ಸಮೂಹವನ್ನು ನೀಡುವ ಸೇವೆಯಲ್ಲಿ ತೊಡಗಿಸಿಕೊಂಡಿರುವ ದಾವಣಗೆರೆಯ ಚೇತನ ವಿದ್ಯಾಸಂಸ್ಥೆ ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಮೋಘ ಸಾಧನೆಯ ಹಾದಿಯಲ್ಲೇ ಸಾಗುತ್ತಿದೆ.
ಮಧ್ಯ ಕರ್ನಾಟಕದ ದಾವಣಗೆರೆಗೆ ಶಿಕ್ಷಣ ನಗರಿ ಎಂಬ ಅನ್ವರ್ಥ ಹೆಸರಿದೆ. ಹಿಂದಿನಿಂದಲೂ ಶಿಕ್ಷಣ ಕ್ಷೇತ್ರಕ್ಕೆ ಅದ್ವಿತೀಯ ಕಾಣಿಕೆ ನೀಡುತ್ತಿರುವ ಡಾ| ವಿಜಯಲಕೀÒ$¾ ವೀರಮಾಚಿನೇನಿ ಅವರ ಅತ್ಯಂತ ಸಮರ್ಥ ನಾಯಕತ್ವ, ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಈ ವಿದ್ಯಾಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಜೀವನ ಚೇತನ!. ಹೆಸರಿಗೆ ತಕ್ಕಂತೆ ಸಾಮಾನ್ಯ ವಿದ್ಯಾರ್ಥಿಯೂ ಅಸಾಮಾನ್ಯ ವಿದ್ಯಾರ್ಥಿಯಾಗಿ ರೂಪುಗೊಳ್ಳುವಲ್ಲಿ ಚೇತನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಜೊತೆಗೆ ಬೆನ್ನೆಲುಬಾಗಿ ಬೋಧಕ, ಬೋಧಕೇತರ ಸಿಬ್ಬಂದಿ ವಹಿಸುತ್ತಿರುವ ಪಾತ್ರ ನವಚೈತನ್ಯದ ಪ್ರತೀಕ.
ಅದ್ವಿತೀಯ ಸಾಧಕರ ನೆಲೆ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಷ್ಟೇ ಅಲ್ಲ, ಅವರ ಪೋಷಕರು ಶೈಕ್ಷಣಿಕ ಸಾಧನೆಯ ಬಗೆಗಿನ ಕನಸು, ಆಸೆಗಳ ಈಡೇರಿಕೆಯಲ್ಲಿ ವಿದ್ಯಾಸಂಸ್ಥೆ ಅತ್ಯಂತ ಸಮರ್ಥನೀಯ ಪಾತ್ರ ನಿರ್ವಹಿಸುತ್ತಿದೆ ಎಂಬುದು ಬಾಯಿ ಮಾತಲ್ಲ. ಮಕ್ಕಳ ಶೈಕ್ಷಣಿಕ ಸಾಧನೆಯೇ ಜ್ವಲಂತ, ಜೀವಂತ ನಿದರ್ಶನ. ಅಚ್ಚರಿಯಾಗುವಂತಹ ಸಾಧನೆ ಮಾಡಿ, ಸಮಾಜದಲ್ಲಿ ಉನ್ನತ ಹಂತಕ್ಕೇರಿರುವ ಅದ್ವಿತೀಯ ಸಾಧಕರ ದಂಡೇ ಇದೆ. ವಿದ್ಯಾಸಂಸ್ಥೆಯ ಅತೀ ಗಮನಾರ್ಹ ಮತ್ತು ವಿಶೇಷತೆ ಎಂದರೆ ಶಿಕ್ಷಣ ತಜ್ಞರಿಗೂ ಮಿಗಿಲಾದ ಪಠ್ಯಕ್ರಮ ರೂಪಿಸುವ ಜೊತೆಗೆ ಅತ್ಯಂತ ಸರಳ ಮಾದರಿಯಲ್ಲಿ ಸುಲಭವಾಗಿ ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವುದು. ಹಾಗಾಗಿಯೇ ಕಬ್ಬಿಣದ ಕಡಲೆ… ಎನ್ನಲಾಗುವ ಗಣಿತ, ಭೌತಶಾಸ್ತ್ರ, ರಾಸಾಯನಶಾಸ್ತ್ರ ಮುಂತಾದ ವಿಷಯಗಳು ಮಕ್ಕಳಿಗೆ ಬಲು ಸುಲಭ. ಅದರ ಹಿಂದಿರುವ ಕಾರಣ ಬೋಧನೆಯಲ್ಲಿ ನೂತನ ಆವಿಷ್ಕಾರ, ಪ್ರಯೋಗ, ಬೋಧನಾ ಕ್ರಮ, ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಬೆಳೆಸುವಲ್ಲಿನ ಹೊಸತನ.
ಡಾ| ವಿಜಯಲಕ್ಷ್ಮಿ ವೀರಮಾಚಿನೇನಿ ಅವರ ಕನಸಾದ ಚೇತನ ವಿದ್ಯಾಸಂಸ್ಥೆಯಡಿ ದಾವಣಗೆರೆ ಹೊರ ವಲಯದ ಶಿರಮಗೊಂಡನಹಳ್ಳಿ ಬಳಿ ಇರುವ ವಿಶ್ವಚೇತನಾ ವಿದ್ಯಾನಿಕೇತನ ವಸತಿಯುತ ಶಾಲೆ, ಆಂಜನೇಯ ಬಡಾವಣೆಯಲ್ಲಿ ಇರುವ ವಿದ್ಯಾಚೇತನ ಕಾಲೇಜು ಸಾವಿರಾರು ವಿದ್ಯಾರ್ಥಿಗಳ ಚೈತನ್ಯ ಧಾಮ.
ಚೇತನಾ ವಿದ್ಯಾಸಂಸ್ಥೆಯ ಅಸಂಖ್ಯಾತ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಇತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ದೇಶ-ವಿದೇಶಗಳಲ್ಲೂ ಮನೆ ಮಾತಾಗಿದ್ದಾರೆ.
ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಪ್ರಾರಂಭಿಕ ಹಂತದಿಂದಲೇ ಮಕ್ಕಳಲ್ಲಿ ಹೊಸ ಆಲೋಚನೆಯ ಲಹರಿ ಬೆಳೆಸಲಾಗುತ್ತದೆ. ಏನನ್ನಾದರೂ ಸಾಧಿಸಿಯೇ ತೀರಬೇಕು ಎಂಬ ಜೀವನದ ಗುರಿ ಸಾಕಾರಕ್ಕೆ ಅತ್ಯಗತ್ಯವಾದ ಶೈಕ್ಷಣಿಕ ವಾತಾವರಣವನ್ನು ಗುಣಮಟ್ಟದ ಶಿಕ್ಷಣದೊಂದಿಗೆ ನಿರ್ಮಾಣ ಮಾಡಲಾಗುತ್ತದೆ. ಅತ್ಯುತ್ತಮ ತರಬೇತಿ, ಮಕ್ಕಳು ಜೀವನದ ಗುರಿ ತಲುಪಿಯೇ ತೀರುವಂತೆ ಮಾಡುವ ಉತ್ಕೃಷ್ಟ ಬೋಧನೆಯ ಪ್ರತೀಕವಾದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಕನಸಿನ ಸಾಕಾರಮೂರ್ತಿಗಳಾಗಿ ಅಹರ್ನಿಶಿ ತೊಡಗಿಸಿಕೊಂಡಿರುವುದು ವಿಶೇಷ.
ಚೈತನ್ಯಭರಿತ ವಾತಾವರಣ: ಒಬ್ಬ ವಿದ್ಯಾರ್ಥಿಯ ಕನಸು ಎಂದರೆ ರ್‍ಯಾಂಕ್ ಪಡೆಯುವುದು. ಪೋಷಕರು ಬಯಸುವುದು ಸಹ ತಮ್ಮ ಮಕ್ಕಳು ರ್‍ಯಾಂಕ್ ಸ್ಟೂಡೆಂಟ್ ಆಗಿರಬೇಕು ಎಂಬುದಾಗಿದೆ. ರ್‍ಯಾಂಕ್ ಪಡೆಯುವುದು ಮಾತ್ರವಲ್ಲ ಸಾರ್ಥಕ ಜೀವನವನ್ನೂ ರೂಪಿಸಿಕೊಳ್ಳಬೇಕು ಎಂಬ ಮಹಾದಾಸೆಯೂ ಇರುತ್ತದೆ. ಅಂತಹ ಎಲ್ಲ ನಿರೀಕ್ಷೆಯನ್ನು ಸಮರ್ಥವಾಗಿ ಪೂರೈಸುವ ಕಲಿಕಾ ವಾತಾವರಣ ವಿಶ್ವಚೇತನ ವಿದ್ಯಾನಿಕೇತನ ಹಾಗೂ ವಿದ್ಯಾಚೇತನಾ ಕಾಲೇಜಿನಲ್ಲಿದೆ. ಸ್ಪರ್ಧಾತ್ಮಕ ಯುಗದ ಬೇಡಿಕೆಗೆ ಅನುಗುಣವಾದ ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್ ಸೌಲಭ್ಯ ಇಲ್ಲಿವೆ. ಪ್ರತಿ ಮಗುವಿಗೂ ಸಹ ಮನೆಯ ವಾತಾವರಣವನ್ನೇ ಕಲ್ಪಿಸಿಕೊಡಲಾಗುತ್ತಿದೆ. ಮಕ್ಕಳಿಗೆ ಕಲಿಯುವಿಕೆ ಎಂದೆಂದಿಗೂ ಕಬ್ಬಿಣದ ಕಡಲೆ ಅನಿಸಿಯೇ ಇಲ್ಲ.
ಆಡುತ್ತಾ, ಹಾಡುತ್ತಾ, ನಲಿಯುತ್ತಾ ಶಿಕ್ಷಣ ಕಲಿಸುವುದು ಸಂಪ್ರದಾಯ ಎನ್ನುವ ವಾತಾವರಣ ಇರುವ ಕಾರಣಕ್ಕೆ ಚೇತನಾ ವಿದ್ಯಾಸಂಸ್ಥೆಯ ಶಾಲಾ, ಕಾಲೇಜುಗಳಲ್ಲಿ ಪ್ರತಿ ವರ್ಷ ರ್‍ಯಾಂಕ್ ಗಳಿಕೆಯ ವಿದ್ಯಾರ್ಥಿ ಸಮೂಹವೇ ಇದೆ.
ವಿಶ್ವ ಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಪ್ರಾರಂಭದಿಂದಲೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ರಷ್ಟು ಫಲಿತಾಂಶದ ಸಾಧನೆ ಮಾಡುತ್ತಿದೆ. 15 ವರ್ಷಗಳ ಕಾಲ ನಿರಂತರವಾಗಿ ಈ ಸಾಧನೆ ಪುನರಾವರ್ತನೆ ಆಗುತ್ತಿದೆ. ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಶನ್ (ಎನ್‌ಟಿಎಸ್‌ಇ) ನಲ್ಲಿ ನಿರಂತರಾಗಿ ಪ್ರಥಮ ಇಲ್ಲವೇ ದ್ವಿತೀಯ ಹೀಗೆ ಒಂದಿಲ್ಲ ಒಂದು ರ್‍ಯಾಂಕ್ ಗಳಿಸುತ್ತಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ವಿಕ್ಟರ್ ಥಾಮಸ್, ಪಿ. ಆಕಾಶ್ ಎಂಬ ವಿದ್ಯಾರ್ಥಿಗಳು ರಾಜ್ಯಕ್ಕೇ ಪ್ರಥಮ ರ್‍ಯಾಂಕ್ ಪಡೆದಿರುವ ಇತಿಹಾಸ ಚೇತನಾ ವಿದ್ಯಾಸಂಸ್ಥೆಗಿದೆ.
ಕ್ರೀಡೆ, ಸಾಂಸ್ಕೃತಿಕತೆಗೆ ಆದ್ಯತೆ: ಶೈಕ್ಷಣಿಕ ಕ್ಷೇತ್ರದಲ್ಲಿ ಪಠ್ಯದಷ್ಟೇ ಪಠ್ಯೇತರ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ. ಪಠ್ಯಕ್ಕೆ ನೀಡಿರುವಷ್ಟೇ ಮಹತ್ವವನ್ನು ಚೇತನಾ ವಿದ್ಯಾಸಂಸ್ಥೆ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ನೀಡುತ್ತಿದೆ. ಹಾಗಾಗಿಯೇ ಇಲ್ಲಿನ ವಿದ್ಯಾರ್ಥಿಗಳು ರ್‍ಯಾಂಕ್ ಮಾತ್ರವಲ್ಲ ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಅಸಾಧಾರಣ ಸಾಧಕರಾಗಿ ಹೊರ ಹೊಮ್ಮುತ್ತಿದ್ದಾರೆ.
ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯತೆಯಿಂದ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ವಿಶ್ವಚೇತನಾ ವಿದ್ಯಾನಿಕೇತನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಖೊ-ಖೊ ಮುಂತಾದ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಮನಾರ್ಹ ಸಾಧಕರು. ಅನೇಕ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕ್ರೀಡಾ ಕೋಟಾದಲ್ಲಿ ಶೇ. 50 ರಷ್ಟು ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳ ಪ್ರವೇಶ ಪಡೆಯುವಂತಾಗಿರುವುದು ವಿದ್ಯಾಸಂಸ್ಥೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ನೀಡುವ ಆದ್ಯತೆಗೆ ಸಾಕ್ಷಿ.
ಈ ಬಾರಿಯ ವಿದ್ಯಾರ್ಥಿಗಳ ಸಾಧನೆ: ರಾಷ್ಟ್ರ ಮಟ್ಟದ ವೈದ್ಯಕೀಯ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೀಟ್-2023ರ ಪರೀಕ್ಷೆಯಲ್ಲಿ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಕಾಲೇಜಿನ ಎಸ್.ಬಿ. ಮಹಾಂತ ರಕ್ಷಾ 720ಕ್ಕೆ 655 ಅಂಕಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜಾನ್ಹವಿ ಡಿ. ಪಾಟೀಲ್ 720ಕ್ಕೆ 628, ಜಿ. ವೀರೇಶ್ 720 ಕ್ಕೆ 609 ಅಂಕ ಪಡೆದಿದ್ದಾರೆ. 8 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದವರು ಕ್ಲಿಷ್ಟಕರ ಪರೀಕ್ಷೆ ಯಲ್ಲಿ ಸಾಧನೆ ಮಾಡಿರುವುದು ವಿಶೇಷ. 2022-23 ನೇ ಸಾಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಕಾಮೆಡ್-ಕೆ ಯಲ್ಲಿ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಕಾಲೇಜಿನ ಎಸ್.ಎಂ. ತನೀಷಾ ಶೇ.99.57 ಅಂಕಗಳೊಂದಿಗೆ ರಾಜ್ಯದ 349ನೇ ರ್‍ಯಾಂಕ್, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಿಬಿಎಸ್‌ಇ ಮಾಧ್ಯಮದಲ್ಲಿ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಶೇ. 99 ರಷ್ಟು ಫಲಿತಾಂಶ ಪಡೆದಿದೆ. ವಿ. ಚಾಣಕ್ಯ, ಎಸ್.ಎನ್. ಈಶ್ವರ್ ಶೇ. 97 ಅಂಕ ಗಳಿಸಿದ್ದಾರೆ. ಶೇ.60 ರಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿ, ಶೇ. 89 ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಶೇ. 100 ರಷ್ಟು ಫಲಿತಾಂಶ ಪಡೆದಿದೆ. ಕೆ. ತಿರುಮಲ ಶೇ.97 ರಷ್ಟು ಅಂಕ ಪಡೆದಿದ್ದಾನೆ. ಶೇ.25 ರಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿ, ಶೇ.74 ರಷ್ಟು ವಿದ್ಯಾರ್ಥಿಗಳು ಪ್ರಥಮ, ಶೇ. 1 ರಷ್ಟು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮುಂದಿನ ಹಂತಕ್ಕೆ ತೇರ್ಗಡೆ ಆಗಿದ್ದಾರೆ.
ವಿದ್ಯಾವಿಜಯಲಕ್ಷ್ಮಿ
ಸೋಲನ್ನೇ ಸವಾಲಾಗಿ ಸ್ವೀಕರಿಸಿ, ಸಾಧಿಸುವ ಛಲವಿದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ| ವಿಜಯಲಕ್ಷ್ಮಿ ವೀರಮಾಚಿನೇನಿ ಅವರು ಉತ್ತಮ ಉದಾಹರಣೆ. ಆಂಧ್ರಪ್ರದೇಶದ ಘಂಟಸಾಲ ಮೂಲದ ವಿಜಯಲಕ್ಷ್ಮಿ ವೀರಮಾಚಿನೇನಿ 9 ನೇ ತರಗತಿಯಲ್ಲಿ ಓದುತ್ತಿರುವಾಗ ವಿವಾಹವಾಗಿ ದಾವಣಗೆರೆಗೆ ಬಂದವರು. ದಾವಣಗೆರೆಯ ಶಾಲೆಯೊಂದರಲ್ಲಿ ಮಗಳಿಗೆ ಪ್ರವೇಶ ಸಿಗದ ನೋವು ಅನುಭವಿಸಿದವರು. ಮುಂದೆ ತಮ್ಮಂತೆ ಯಾವುದೇ ತಾಯಿ ಮಕ್ಕಳಿಗೆ ಶಾಲೆಗೆ ಸೇರಿಸುವಾಗ ಇನ್ನಿಲ್ಲದ ನೋವು, ಸೋಲು, ಹತಾಶೆ ಅನುಭವಿಸಬಾರದು. ಎಂಬ ಸಾಮಾಜಿಕ ಕಳಕಳಿಯಿಂದ ಪ್ರಾರಂಭಿಸಿದ ಸಂಸ್ಥೆಯೇ ಚೇತನಾ ವಿದ್ಯಾಸಂಸ್ಥೆ. ಅಗಾಧ ಕತೃತ್ವ ಶಕ್ತಿ, ಸಾಧನೆಯ ಹಂಬಲ, ಮಕ್ಕಳು ಮತ್ತು ಶಿಕ್ಷಣದ ಬಗೆಗಿನ ಕಾಳಜಿ, ಪ್ರೀತಿಯ ಶ್ರಮದ ಫಲವಾಗಿ ದಾವಣಗೆರೆಯ ಚೇತನಾ ವಿದ್ಯಾಸಂಸ್ಥೆ ಈಗ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬುದ್ಧಿವಂತ ವಿದ್ಯಾರ್ಥಿಗಳನ್ನು ಬುದ್ದಿವಂತ ರನ್ನಾಗಿ ಮಾಡುವುದು ಅಷ್ಟೇನು ಕಷ್ಟ ಅಲ್ಲ. ಆದರೆ, ಕಲಿಕೆಯಲ್ಲಿ ಸಾಧಾರಣ ಇರುವಂತಹ ವಿದ್ಯಾರ್ಥಿಗಳನ್ನು ಅಸಾಧಾರಣ ವಿದ್ಯಾರ್ಥಿಗಳನ್ನಾಗಿ ರೂಪಿಸುವ ಅತೀ ದೊಡ್ಡ ಸವಾಲುಗಳನ್ನು ಅತಿ ಸುಲಭವಾಗಿ, ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಚೇತನಾ ವಿದ್ಯಾಸಂಸ್ಥೆ.
ಸಂಸ್ಥೆಯ ನೋಟ
1987 ರಲ್ಲಿ ಶಿರಮಗೊಂಡನಹಳ್ಳಿ ಸಮೀಪದಲ್ಲಿ 16 ಎಕರೆ ಜಾಗದಲ್ಲಿ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಪ್ರಾರಂಭವಾಗಿದೆ. 1996 ರಲ್ಲಿ ವೈಷ್ಣವಿ ಚೇತನ ಪಿಯು ಕಾಲೇಜು, 2010 ರಲ್ಲಿ ಸಿಬಿಎಸ್‌ಇ, 2020-21 ರಿಂದ ಹೊಸ ಪಠ್ಯಕ್ರಮ ವಿಧಾನದ ಒಲಂಪಿಯಾಡ್ ಸ್ಕೂಲ್, ಅದೇ ವರ್ಷ ವಿದ್ಯಾಚೇತನ ಪಿಯು ಕಾಲೇಜು ಪ್ರಾರಂಭವಾಗಿದೆ. ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪ್ರಾಥಮಿಕ, ಪ್ರೌಢಶಾಲೆ, ಒಲಂಪಿಯಾಡ್‌ನಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಸಿಬಿಎಸ್‌ಇ ಎರಡು ಪಠ್ಯಕ್ರಮದಲ್ಲಿ ಬೋಧನೆ ಮಾಡಲಾಗುತ್ತದೆ. ಹಾಸ್ಟೆಲ್‌ನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹೊರಗಡೆಯಿಂದ ನೂರಾರು ವಿದ್ಯಾರ್ಥಿಗಳು ಇದ್ದಾರೆ. ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ. ಬಾಲಕಿಯರ ವಸತಿಶಾಲೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ. ಸುರಕ್ಷತಾ ದೃಷ್ಟಿಯಿಂದ ಸಿಸಿ ಟೀವಿ, ಕ್ಯಾಮೆರಾ, ವೈದ್ಯಕೀಯ ಸೌಲಭ್ಯ ಇದೆ. ಮಕ್ಕಳು ಅತ್ಯಂತ ಲವಲವಿಕೆಯಿಂದ ಕಲಿಯುವ ವಾತಾವರಣ ಇಲ್ಲಿದೆ. ಡಾ| ವಿಜಯಲಕ್ಷ್ಮಿ ವೀರಮಾಚಿನೇನಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪ್ರತಿ ವಿದ್ಯಾರ್ಥಿಯ ಕಲಿಕೆಯತ್ತ ಗಮನ ಹರಿಸುವರು. ಅಗತ್ಯ ಸಲಹೆ, ಸೂಚನೆ ನೀಡುವ ಮೂಲಕ ಅವರಲ್ಲಿ ಹೊಸ ಪ್ರೇರಣೆ ಮೂಡಿಸುವ ಮೂಲಕ ಮಕ್ಕಳ ಶೈಕ್ಷಣಿಕ ಸಾಧನೆಯ ಗುರುವಾಗಿದ್ದಾರೆ.
ನೀಟ್, ಜೆಇಇಗೂ ಸೈ
ಚೇತನ ವಿದ್ಯಾಸಂಸ್ಥೆ ಬರೀ ಕಲಿಕೆ, ಅಂಕ ಗಳಿಕೆ ದೃಷ್ಟಿಯಿಂದ ಮಾತ್ರ ಕಾರ್ಯ ನಿರ್ವ ಹಿಸುತ್ತಿಲ್ಲ. ಶಿಕ್ಷಣ ಜೀವನದ ದಾರಿದೀಪ ಎಂಬ ಮಾತನ್ನು ಅಕ್ಷರಶಃ ಕಾರ್ಯ ರೂಪಕ್ಕೆ ತರುತ್ತಿದೆ. ವಿದ್ಯಾರ್ಥಿಗಳು ಪ್ರತಿ ವರ್ಷ ದ್ವಿತೀಯ ಪಿಯುಸಿ, ಸಿಇಟಿ, ನೀಟ್, ಜೆಇಇ ಮುಂತಾದ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡುವುದನ್ನು ಕಾಣಬಹುದು. ಪಿಯುಸಿ, ಸಿಇಟಿ ಯಾವುದೇ ಪರೀಕ್ಷೆ ಯಾದರೂ ಈ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಅಮೋಘ. ಅದರ ಹಿಂದಿನ ಕಾರಣ ಇಲ್ಲಿನ ಕಲಿಕಾ ವಿಧಾನ, ತರಬೇತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ. ಪ್ರತಿ ವಿದ್ಯಾರ್ಥಿಯ ಆಸಕ್ತಿ ಮತ್ತು ದೌರ್ಬಲ್ಯ ಗುರುತಿಸಿ ಇನ್ನೂ ಹೆಚ್ಚಿನ ಆಸಕ್ತಿ ಬೆಳೆಸಲಾಗುತ್ತದೆ. ವಿಷಯಗಳ ಕಲಿಕೆಯಲ್ಲಿನ ತೊಂದರೆ ಗಮನಿಸಿ, ಅದರಿಂದ ಸುಲಭವಾಗಿ ಹೊರ ಬರುವ ಸೂಕ್ತ ಮಾರ್ಗದರ್ಶನ, ಸಹಕಾರ ನೀಡುವುದು ವಿಶೇಷ.ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಕಾಲೇಜು ಪಿಯು ಫಲಿತಾಂಶ ದಲ್ಲಿ ಅಗಣಿತ ದಾಖಲೆಯನ್ನೇ ನಿರ್ಮಾಣ ಮಾಡಿದೆ ಮತ್ತು ಮಾಡುತ್ತಿದೆ. 600 ಅಂಕಗಳಿಗೆ 595, 594, 592, 591, 590 ಅಂಕಗಳ ಪಡೆಯುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು ನೂತನ ದಾಖಲೆಯನ್ನೇ ಮಾಡಿದ್ದಾರೆ.ನೀಟ್‌ನಲ್ಲಿ ಇಲ್ಲಿನ ವಿದ್ಯಾರ್ಥಿಗಳು 705, 695, 677, 657, 645, 635, 633, 626, 626, 626, 619, 618, 617, 617, 616, 615, 610, 609, 604, 603, 610, 600 ಅಂಕ ಪಡೆಯುವ ಮೂಲಕ ದಾಖಲೆಗೆ ಕಾರಣವಾಗಿದ್ದಾರೆ. ಜೆಇಇಯಲ್ಲಿ 99,99,99,97,99,95,99,94,93,99,92,99,91,99,90,99,89,99,85 ಪ್ರತಿಶತ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಮಾದರಿ ಒಲಂಪಿಯಾಡ್
ಶಿಕ್ಷಣ ಕ್ಷೇತ್ರದಲ್ಲೂ ಹೊಸ ಕಲಿಕಾ ಮಾದರಿಯ ಅಗತ್ಯತೆ ಮನಗಂಡ ಡಾ| ವಿಜಯಲಕ್ಷ್ಮಿ ವೀರಮಾಚಿನೇನಿ ಅವರು ಚಟುವಟಿಕೆ ಆಧಾರಿತ ಬೋಧನಾ ಕ್ರಮದ ಸ್ಕೂಲ್ ಪ್ರಾರಂಭಿಸಿದರು. ಅದುವೇ ಚೇತನಾ ಒಲಂಪಿಯಾಡ್ ಸ್ಕೂಲ್. ಒಲಂಪಿಯಾಡ್ ವಿಧಾನದ ಏಕೈಕ ಸಂಸ್ಥೆಯಾಗಿದೆ. ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿ ಸಮೂಹವನ್ನು ಅಣಿಗೊಳಿಸಲಾಗುತ್ತದೆ. ನೀಟ್, ಜೆಇಇ, ನಾಗರಿಕ ಸೇವಾ ಆಯೋಗ, ಕೆವಿಪಿವೈ, ಎನ್‌ಟಿಎಸ್‌ಇ ಮುಂತಾದ ಪರೀಕ್ಷೆಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ನವೀನ ಪಠ್ಯಕ್ರಮದ ಕಲಿಕೆಯ ಪರಿಣಾಮದಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ನಿಬ್ಬೆರಗಾಗುವ ಸಾಧನೆ ತೋರುವಂತಾಗಿದೆ. ಒಲಂಪಿಯಾಡ್ ಸ್ಕೂಲ್‌ನಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮದೊಂದಿಗೆ 5 ರಿಂದ ದ್ವಿತೀಯ ಪಿಯುವರೆಗೆ ಸಂಯೋಜಿತ ಕಾರ್ಯಕ್ರಮವಾಗಿ ಕಲಿಸಲಾಗುತ್ತದೆ. ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಗೆ ಬರುವ ವೇಳೆಗೆ ಪಿಯು ಪಠ್ಯಕ್ರಮ ಅಭ್ಯಾಸ ಮಾಡಿರುತ್ತಾರೆ. ಆಯ್ಕೆಯ ಅವಕಾಶ ವಿದ್ಯಾರ್ಥಿಗಳಿಗೆ ಮುಕ್ತವಾಗಿಡಲಾಗಿದೆ. ಪ್ರತ್ಯೇಕವಾಗಿಯೇ ಫೌಂಡೇಶನ್ ತರಗತಿಗಳಲ್ಲಿ ಅತ್ಯಂತ ನೈಪುಣ್ಯತೆಯ ಬೋಧಕ ವರ್ಗವಿದೆ. ದಿನದ ವೇಳಾಪಟ್ಟಿಯಂತೆ ಅಭ್ಯಾಸ, ಬೋಧನೆ ನಡೆಯುತ್ತದೆ. ಪ್ರತಿ ವಾರ ಫೌಂಡೇಶನ್ ಮತ್ತು ಸಿಡಿಎಫ್ (ಪರಿಕಲ್ಪನೆ, ವ್ಯಾಖ್ಯಾನ ಮತ್ತು ಸೂತ್ರ) ನಡೆಸಲಾಗುತ್ತದೆ. ಪ್ರತಿ ಪರೀಕ್ಷೆಯ ನಂತರ ಪ್ರತಿಯೊಂದು ಅಂಶಗಳ ಬಗ್ಗೆ ಚರ್ಚೆ ನಡೆಸಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಸಿದ್ಧಪಡಿಸಲಾಗುತ್ತದೆ.
ಸಂಪರ್ಕದ ಮಾಹಿತಿ…
ವಿಶ್ವಚೇತನ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಕಾಲೇಜು ಶಿರಮಗೊಂಡನಹಳ್ಳಿ ಸಮೀಪ. ಶಾಲೆ: 99005-59101/05/ 99000 52517 ಶ್ರೀ ವೈಷ್ಣವಿ ಚೇತನಾಸ್ ವಿದ್ಯಾಚೇತನ ಪಿಯುಕಾಲೇಜು (ಆಂಜನೇಯ ಬಡಾವಣೆ) ಚೇತನ ಒಲಂಪಿಯಾಡ್ ಸ್ಕೂಲ್. ಕಾಲೇಜು: 9900559104/9900052370
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.