Fighter first look: ಸ್ವಾತಂತ್ರ್ಯ ದಿನಕ್ಕೆ ʼಫೈಟರ್ʼ ನಿಂದ ಸ್ಪೆಷಲ್ ಟೀಸರ್ ಗಿಫ್ಟ್
Team Udayavani, Aug 15, 2023, 12:19 PM IST
ಮುಂಬಯಿ: ಎಲ್ಲೆಡೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ಬಣ್ಣದ ಲೋಕದಲ್ಲಿ ತಾರೆಯರು ಸ್ವಾತಂತ್ರ್ಯ ದಿನದ ಶುಭಾಶಯವನ್ನು ಕೋರುತ್ತಿರುವುದರ ಜೊತೆ ತಮ್ಮ ಹೊಸ ಸಿನಿಮಾದ ವಿಶೇಷ ಪೋಸ್ಟರ್ ಗಳನ್ನು ರಿಲೀಸ್ ಮಾಡಿದ್ದಾರೆ.
ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಫೈಟರ್ʼ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಟೀಸರ್ ರಿಲೀಸ್ ಮಾಡಿದೆ.
ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅಭಿನಯದ ʼಫೈಟರ್ʼ ಸಿನಿಮಾ ಬಾಲಿವುಡ್ ನ ಬಹು ನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ. ಸಿನಿಮಾ ಅನೌನ್ಸ್ ಆದ ದಿನದಿಂದಲೂ ಸಿನಿಮಾದ ಬಗ್ಗೆ ದೊಡ್ಡಮಟ್ಟದ ಹೈಪ್ ಕ್ರಿಯೇಟ್ ಆಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ “ಸ್ಪಿರಿಟ್ಆಫ್ ಫೈಟರ್ “, | ವಂದೇ ಮಾತರಂ! ಎಂದು ಬರೆದುಕೊಂಡಿರುವ ಶಾರ್ಟ್ ಟೀಸರ್ ಕ್ಲಿಪಿಂಗ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಹೃತಿಕ್, ದೀಪಿಕಾ ಮತ್ತು ಅನಿಲ್ ವಾಯುಪಡೆ ಅಧಿಕಾರಿಗಳ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಝಲಕ್ ನ್ನ ಟೀಸರ್ ನಲ್ಲಿ ತೋರಿಸಲಾಗಿದೆ.
ಬಾಲಿವುಡ್ ನಲ್ಲಿ ʼವಾರ್ʼ, ʼಪಠಾಣ್ʼ ನಂತಹ ಚಿತ್ರಗಳನ್ನು ನೀಡಿರುವ ಸಿದ್ದಾರ್ಥ್ ಆನಂದ್ ಅವರು ʼʼಫೈಟರ್ʼʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ʼಫೈಟರ್ʼ 2024 ರ ಜನವರಿ, 25 ರಂದು ಸಿನಿಮಾ ರಿಲೀಸ್ ಆಗಲಿದೆ.
#SpiritOfFighter | Vande Mataram! 🇮🇳
See you in the theaters on the eve of India’s 75th Republic Day. Fighter releases worldwide on 25th January 2024. pic.twitter.com/23fvysWgsV
— Hrithik Roshan (@iHrithik) August 15, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.