Missing Case: ನಾಪತ್ತೆ ಆದ 1,578 ಮಕ್ಕಳು ಇನ್ನೂ ನಿಗೂಢ!


Team Udayavani, Aug 15, 2023, 3:50 PM IST

Missing Case: ನಾಪತ್ತೆ ಆದ 1,578 ಮಕ್ಕಳು ಇನ್ನೂ ನಿಗೂಢ!

ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ನಾಪತ್ತೆಯಾಗಿರುವ 1,578 ಮಕ್ಕಳು ನಿಗೂಢ ವಾಗಿದ್ದು, ಇವರ ಸಣ್ಣ ಸುಳಿವೂ ಸಿಗದ ಕಾರಣ ಪತ್ತೆ ಕಾರ್ಯ ಸವಾಲಾಗಿದೆ. ಆದಕ್ಕಾಗಿ ಇದೀಗ ರಾಜ್ಯ ಪೊಲೀ ಸರು ಅಪರಿಚಿತ ಶವಗಳೊಂದಿಗೆ ತಾಳೆ ಮಾಡಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿ ಪ್ರತಿ ವರ್ಷ ನಾಪತ್ತೆ ಆಗುವ ಮಕ್ಕಳ ಸಂಖ್ಯೆ ದುಪ್ಪಟ್ಟಾಗುತ್ತಿರುವುದು ಪಾಲಕರನ್ನು ಆತಂಕ ಕ್ಕೀಡು ಮಾಡಿದೆ. 2018ರಿಂದ 2023ರ(ಜುಲೈ)ವರೆಗೆ ಕಾಣೆಯಾಗಿರುವ 10,687 ಅಪ್ರಾಪ್ತರ ಪೈಕಿ 9,109 ಮಕ್ಕಳು ಪತ್ತೆಯಾಗಿದ್ದಾರೆ. ಬಾಕಿ ಉಳಿದ 1,578 ಮಕ್ಕಳು ಏನಾಗಿದ್ದಾರೆ ಎಂಬುದು ಪ್ರಶ್ನೆ ಯಾಗಿಯೇ ಉಳಿದಿದೆ. ಇದನ್ನು ಗಂಭೀರವಾಗಿ ಪರಿ ಗಣಿಸಿರುವ ರಾಜ್ಯ ಪೊಲೀಸ್‌ ಇಲಾಖೆಯು ಅಪರಿ ಚಿತ ಶವಗಳೊಂದಿಗೆ ನಾಪತ್ತೆಯಾದ ಮಕ್ಕಳನ್ನು ತಾಳೆ ಮಾಡಿ ಆ್ಯಂಟಿ ಹ್ಯೂಮನ್‌ ಟ್ರಾಫಿಕಿಂಗ್‌ ಯೂನಿಟ್‌ (ಎಎಚ್‌ಟಿಯು) ಮೂಲಕ ವಿಶೇಷ ಕಾರ್ಯಾಚರಣೆ ಕೈಗೊಂಡು ಪತ್ತೆ ಕಾರ್ಯ ಚುರುಕುಗೊಳಿಸಿದೆ.

ಮಕ್ಕಳು ನಾಪತ್ತೆಯಾಗುವುದು ಏಕೆ?: ನಿಗೂಢ ವಾಗಿ ರುವ 1,578 ಮಕ್ಕಳಲ್ಲಿ 1,195 ಹೆಣ್ಣು ಮಕ್ಕಳಿದ್ದರೆ, 383 ಬಾಲಕರಿದ್ದಾರೆ. ಪಾಲಕರು ಪೊಲೀಸ್‌ ಠಾಣೆಗೆ ಅಲೆದು ಬಳಲಿ ಮತ್ತೆ ಮಕ್ಕಳು ಮಡಿಲು ಸೇರುವ ನಿರೀಕ್ಷೆ ಕಳೆದುಕೊಂಡಿದ್ದಾರೆ. ಮಾನವ ಕಳ್ಳ ಸಾಗಾಣಿಕೆ, ಪ್ರೀತಿ-ಪ್ರೇಮ, ಮಕ್ಕಳ ಅಪಹರಣ, ವೇಶ್ಯಾವಾಟಿಕೆ, ಆಮೀಷ ವೊಡ್ಡಿ ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳುವುದು, ಶಾಲೆ-ಮನೆಯಲ್ಲಿ ಜಗಳದಿಂದಾಗಿ ಶೇ.80 ಪ್ರಕರಣಗಳಲ್ಲಿ ಮಕ್ಕಳು ನಾಪತ್ತೆಯಾಗುತ್ತಿದ್ದಾರೆ ಎಂಬ ಸಂಗತಿ ಪತ್ತೆಯಾದ ಮಕ್ಕಳ ವಿಚಾರಣೆ ವೇಳೆ ಬಹಿರಂಗಗೊಂಡಿದೆ.

ಇತ್ತೀಚೆಗೆ ಪಾಲಕರ ಅತೀಯಾದ ಒತ್ತಡದಿಂದ ಮನೆ ಬಿಟ್ಟು ತೆರಳುವ ಮಕ್ಕಳ ಪ್ರಮಾಣ ಹೆಚ್ಚಾಗಿದೆ ಎಂಬ ಆಘಾತಕಾರಿ ಅಂಶವನ್ನು ಪೊಲೀಸ್‌ ಮೂಲಗಳು ತಿಳಿಸಿವೆ.

ನಾಪತ್ತೆಯಾದವರ ಪತ್ತೆಗೆ ತೀವ್ರ ಶೋಧ: ಮಕ್ಕಳು ನಾಪತ್ತೆಯಾಗಿರುವ ಪ್ರದೇಶದ ಆಸು-ಪಾಸಿನ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಅಪರಿಚಿತ ಶವ ಪ್ರಕರಣ (ಯೂಡಿಆರ್‌) ಪತ್ತೆ ಹಚ್ಚಿ ನಾಪತ್ತೆಯಾದ ಮಕ್ಕಳಿಗೆ ಸಾಮ್ಯತೆ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಲುಕ್‌ಔಟ್‌ ನೋಟಿಸ್‌ ನೀಡಿ ಅಕ್ಕ-ಪಕ್ಕದ ಜಿಲ್ಲೆ, ರಾಜ್ಯಗಳಲ್ಲೂ ಹುಡುಕಾಟ ನಡೆದಿದೆ. ಅನಾಥಾಶ್ರಮ, ಆಶ್ರಮ, ಆಧ್ಯಾತ್ಮಿಕ ಸ್ಥಳಗಳಲ್ಲಿ ಮತ್ತು ಬಾಲಮಂದಿರಗಳಲ್ಲಿ ಶೋಧ ನಡೆಸಲಾಗುತ್ತಿದೆ. ತನಿಖಾಧಿಕಾರಿಗಳಿಗೆ ನಿರ್ದಿಷ್ಟ ಕಾರ್ಯವಿಧಾನ ಸಿದ್ಧಪಡಿಸಲಾಗಿದೆ.

ನಾಪತ್ತೆಯಾದ ಬಹುತೇಕ ಕೇಸ್‌ಗಳನ್ನು ಹೆಚ್ಚಿನ ತನಿಖೆಗಾಗಿ ಎಎಚ್‌ಟಿಯು ಘಟಕಗಳಿಗೆ ವರ್ಗಾಯಿಸಲಾಗಿದೆ. ಆದರೆ, 1,578 ಮಕ್ಕಳ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಇನ್ನು ಮಕ್ಕಳ ರಕ್ಷಣೆಗಾಗಿ ವಿಶೇಷ ಘಟಕ ರಚಿಸಲಾಗಿದ್ದು, ಈ ಘಟಕದ ಸಿಬ್ಬಂದಿ ಶಾಲಾ-ಕಾಲೇಜು, ಹಾಸ್ಟೆಲ್‌ಗ‌ಳು, ಪಿಜಿ, ಬಸ್‌ ನಿಲ್ದಾಣ, ಹಾಸ್ಟೆಲ್‌ಗ‌ಳಲ್ಲಿ ಗಸ್ತು ತಿರುಗುತ್ತಿವೆ. ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಅಳವಡಿಸಿದರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ಅಪ್ರಾಪ್ತರ ಕಳ್ಳ ಸಾಗಾಣಿಕೆ ಮೇಲೆ ನಿಗಾ ಇರಿಸುತ್ತಾರೆ.

ಪಾಲಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು:

ನಾಪತ್ತೆಯಾದ ವಿಚಾರ ಗೊತ್ತಾದ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ.

ಅಪರಿಚಿತರ ಜೊತೆ ಮಕ್ಕಳು ಹೆಚ್ಚು ಸಂಪರ್ಕ ಇಟ್ಟುಕೊಳ್ಳದಂತೆ ಎಚ್ಚರವಹಿಸಿ.

ಆಸೆ, ಆಮೀಷವೊಡ್ಡುವ ವ್ಯಕ್ತಿಗಳ ಮಾತಿಗೆ ಮಕ್ಕಳು ಮರುಳಾಗದಂತೆ ನೋಡಿಕೊಳ್ಳಿ.

ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕದೇ ಅವರ ಸಮಸ್ಯೆ ಪರಿಶೀಲಿಸಿ ಪರಿಹರಿಸಿ.

ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿಲ್ಲ. ಮಕ್ಕಳು ನಾಪತ್ತೆಯಾದ ಕೂಡಲೇ ಪಾಲಕರು ಪೊಲೀಸರಿಗೆ ದೂರು ನೀಡಿ.-ಬಿ.ದಯಾನಂದ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ. 

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

complaint

Kundapura: ಹಲ್ಲೆ, ಗಾಯ; ದೂರು ದಾಖಲು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.