Himachal: ಹಿಮಾಚಲದಲ್ಲಿ ನಿಲ್ಲದ ಪ್ರಕೋಪ
ಹಲವೆಡೆ ಮುಂದುವರಿದ ಮಳೆ, ಪ್ರವಾಹ ಶಿವ ದೇವಸ್ಥಾನದಡಿ ಮತ್ತೆರಡು ಶವ ಪತ್ತೆ
Team Udayavani, Aug 16, 2023, 12:53 AM IST
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ, ಮೇಘ ಸ್ಫೋಟ, ಭೂಕುಸಿತ ನಿಂತಿಲ್ಲ. ಆ ರಾಜ್ಯದ ಅಲ್ಲಲ್ಲಿ ಮನೆಗಳು ಕುಸಿದು ಬೀಳುವುದು ಮುಂದುವರಿದಿದೆ. ಇದೇ ವೇಳೆ ಶಿಮ್ಲಾದಲ್ಲಿ ಶಿವ ದೇವಸ್ಥಾನದ ಮೇಲೆ ಗುಡ್ಡ ಕುಸಿದಲ್ಲಿ ಇನ್ನೆರಡು ಶವಗಳು ಸಿಕ್ಕಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಸಾವಿನ ಒಟ್ಟು ಸಂಖ್ಯೆ 56ಕ್ಕೆ ಏರಿದೆ.
ಶಿಮ್ಲಾದ ಸಮ್ಮರ್‌ಹಿಲ್‌ನ ಶಿವದೇಗುಲ ದಲ್ಲಿ ಮತ್ತು ಫಾಗ್ಲಿಯಲ್ಲಿನ ಭೂಕುಸಿತದ ಅವಶೇಷಗಳಡಿ ಇನ್ನೂ 10 ಮಂದಿ ಸಿಲುಕಿ ದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣ ದಳ, ರಾಜ್ಯ ವಿಪತ್ತು ನಿರ್ವಹಣ ದಳಗಳು ಈ ಎರಡೂ ಸ್ಥಳಗಳಲ್ಲಿ ಮಂಗಳವಾರ ಬಿರುಸಿನ ಕಾರ್ಯಾಚರಣೆ ನಡೆಸಿವೆ. ಸೋಮ ವಾರ ರಾತ್ರಿ ಭಾರೀ ಮಳೆ ಸುರಿದಿದ್ದ ರಿಂದ ತಾತ್ಕಾಲಿಕವಾಗಿ ರಕ್ಷಣ ಕಾರ್ಯಾ ಚರಣೆಯನ್ನು ನಿಲ್ಲಿಸಲಾಗಿತ್ತು. ಶಿಮ್ಲಾ ದಲ್ಲಿ ಗುಡ್ಡ ಕುಸಿದು ಕನಿಷ್ಠ ಏಳು ಮನೆ ಗಳ ಮೇಲೆ ಬಿದ್ದಿದ್ದು, ಅಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ಆರಂಭಿಸಲಾಗಿದೆ.
ಮಂಡಿ ಜಿಲ್ಲೆಯಲ್ಲಿ 19 ಸಾವು
ಮಳೆ ಕಾರಣದಿಂದ ಸಂಭವಿಸಿದ ದುರಂತ ಗಳಿಂದ ಹಿಮಾಚಲದ ಮಂಡಿ ಜಿಲ್ಲೆಯಲ್ಲಿ 19 ಸಾವುಗಳು ಸಂಭವಿಸಿವೆ. ಸೆನ್ ಪಂಚಾಯತ್‌ನಲ್ಲಿ ಒಂದೇ ಕುಟುಂಬದ 7 ಮಂದಿ ದುರಂತ ಸಾವನ್ನು ಕಂಡಿ ದ್ದಾರೆ. ಸಂಬಲ್‌ನಲ್ಲಿ 6 ಶವಗಳನ್ನು ಹೊರ ತೆಗೆಯಲಾಗಿದೆ. ಸೋಲನ್ ಜಿಲ್ಲೆ ಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ದಲ್ಲಿ 857 ರಸ್ತೆಗಳಲ್ಲಿ ಸಂಚಾರ ಸ್ಥಗಿತ ವಾಗಿದೆ. 4,285 ಟ್ರಾನ್ಸ್‌ಫಾರ್ಮರ್‌ಗಳು, 889 ನೀರು ಪೂರೈಕೆ ಘಟಕಗಳಿಗೆ ಹಾನಿಯಾಗಿದೆ.
ಎಂಟಕ್ಕೆ ಏರಿಕೆ
ಉತ್ತರಾಖಂಡದಲ್ಲಿ ಮಳೆ ಪ್ರಕೋಪ ದಿಂದ ಸಾವಿಗೀಡಾದವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಗೌರಿಕುಂಡ ದಲ್ಲಿ ಆ. 4ರಂದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಮಂಗಳ ವಾರ ಪತ್ತೆ ಯಾಗಿದೆ. ಆ. 19ರ ವರೆಗೆ ಉತ್ತರಾಖಂಡ ದಲ್ಲಿ ಬಿರುಸಿನ ಮಳೆ ಯಾಗುವ ಬಗ್ಗೆ ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.