ದ್ವಿತೀಯ PUC ವಿಶೇಷ ಪೂರಕ ಪರೀಕ್ಷೆ: ಕರಾವಳಿಯ 2,984 ಮಂದಿ ನೋಂದಣಿ
ಈ ಬಾರಿಯೇ ಇನ್ನೊಂದು ಮರುಪರೀಕ್ಷೆ!
Team Udayavani, Aug 16, 2023, 7:01 AM IST
ಮಂಗಳೂರು: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿಶೇಷ ಅಂದರೆ ಎರಡನೇ ಪೂರಕ ಪರೀಕ್ಷೆ ನಡೆಯಲಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಎರಡು ಪೂರಕ ಪರೀಕ್ಷೆಗಳನ್ನು ನಡೆ ಸುವ ಬಗ್ಗೆ ಶಿಕ್ಷಣ ಸಚಿವರ ನಿರ್ದೇಶನ ದಂತೆ ಇಲಾಖೆ ಸಿದ್ಧತೆ ನಡೆ ಸಿತ್ತು. ಆದರೆ ಈಗ ಅದಕ್ಕೂ ಮೊದಲೇ ಕಳೆದ ಬಾರಿಯ ವಿದ್ಯಾರ್ಥಿ ಗಳಿಗಾಗಿ ಪ್ರಾಯೋ ಗಿಕವಾಗಿ ದ್ವಿತೀಯ ಪಿಯುಸಿಯ ಎರಡನೇ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ.
ಎಪ್ರಿಲ್ನಲ್ಲಿ ಮೊದಲ ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾಗಿ, ಅನುತ್ತೀರ್ಣ ರಾದವರು ಎರಡನೇ ಪೂರಕ ಪರೀಕ್ಷೆ ಬರೆದು, ಫಲಿತಾಂಶ ಪ್ರಕಟ ವಾಗಿದೆ. ಈಗ ವಿಶೇಷ ಪೂರಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆ ಯಲು ಇದರಿಂದ ಅನು ಕೂಲವಾಗಲಿದೆ. ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಪರೀಕ್ಷೆ ತಪ್ಪಿಸಿಕೊಂಡವರಿಗೂ ವಿಶೇಷ ಅವಕಾಶ ಇದೆ ಎನ್ನುತ್ತಾರೆ ಅಧಿಕಾರಿಗಳು.
ಅತ್ಯುತ್ಸಾಹ
ದ.ಕ. ಜಿಲ್ಲೆಯಲ್ಲಿ 1,680, ಉಡುಪಿಯಲ್ಲಿ 1,304 ವಿದ್ಯಾರ್ಥಿಗಳು ಸೇರಿ ಒಟ್ಟು 2,984 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2022-23 ಮತ್ತು ಅದಕ್ಕೂ ಹಿಂದಿನ ವರ್ಷ ಗಳಲ್ಲಿ ವ್ಯಾಸಂಗ ಮಾಡಿ ದ್ವಿ. ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.