Mumbai ನಾವು ರಾಜಕೀಯದ ಬಗ್ಗೆ ಚರ್ಚಿಸಿಲ್ಲ : ಶರದ್ ಪವಾರ್
Team Udayavani, Aug 16, 2023, 6:01 PM IST
ಮುಂಬಯಿ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಎನ್‌ಸಿಪಿ ಬಂಡಾಯ ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಭೇಟಿಯಾದ ನಂತರ ರಾಜಕೀಯ ಚರ್ಚೆಗಳು ಮೂಡಿವೆ. ಅಜಿತ್ ಪವಾರ್ ಈ ಸಭೆಯಲ್ಲಿ ಶರದ್ ಪವಾರ್ ಅವರಿಗೆ ಬಿಜೆಪಿಯೊಂದಿಗೆ ಬರಲು ಅಥವಾ ತಟಸ್ಥವಾಗಿರಲು ಪ್ರಸ್ತಾಪಿಸಿದ್ದಾರೆ ಎಂದು ಚರ್ಚಿಸಲಾಗಿದೆ. ಈ ಬಗ್ಗೆ ಪತ್ರಕರ್ತರು ಶರದ್ ಪವಾರ್ ಅವರನ್ನು ಕೇಳಿದಾಗ ಈ ಬಗ್ಗೆ ಶರದ್ ಪವಾರ್ ತಮ್ಮ ನಿಲುವನ್ನು ವಿವರಿಸಿದರು.
ಬುಧವಾರ ಛತ್ರಪತಿ ಸಂಭಾಜಿನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶರದ್ ಪವಾರ್, ಅಜಿತ್ ಪವಾರ್ ಅವರೊಂದಿಗಿನ ಸಭೆಯಲ್ಲಿ ನಾವು ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ. ನನ್ನೊಂದಿಗೆ ಎಲ್ಲರೂ ಚರ್ಚಿಸುತ್ತಾರೆ? ಈ ಎಲ್ಲಾ ನಾಯಕರು ಇದ್ದ ಪಕ್ಷದ ಸ್ಥಾಪಕರು ಯಾರು?, ಆ ಪಕ್ಷದ ಹಿರಿಯ ವ್ಯಕ್ತಿ ಯಾರು? ಬೇರೆಯವರು ಈ ಬಗ್ಗೆ ಯಾಕೆ ಚರ್ಚೆಗೆ ಬರುತ್ತಾರೆ ಎಂದು ಹೇಳಲು ಬಯಸುವುದಿಲ್ಲ ಎಂದು ಹೇಳಿದರು.
ಶರದ್ ಪವಾರ್ ಅವರು ಮೋದಿ ವಿರುದ್ಧ ಹೋರಾಟದ ಪಾತ್ರವನ್ನು ಸ್ಪಷ್ಟಪಡಿಸಿ ಗೊಂದಲವನ್ನು ನಿವಾರಿಸಬೇಕು ಎಂದು ಪೃಥ್ವಿರಾಜ್ ಚವಾಣ್ ಆಗ್ರಹಿಸಿದ್ದರು. ಅದರ ಬಗ್ಗೆ ಕೇಳಿದಾಗ, ನಾನು ಆರಂಭದಲ್ಲಿ ನನ್ನ ಪತ್ರಿಕಾಗೋಷ್ಠಿಯಲ್ಲಿ ಮೋದಿಯವರನ್ನು ಹಾಡಿ ಹೊಗಳಿದ್ದೆನೇ? ಎಂದು ಶರದ್ ಪವಾರ್ ಉತ್ತರಿಸಿದರು. ಎಲ್ಲರೂ ನನ್ನ ಮಾತು ಕೇಳಿದ್ದಾರೆ ಎಂದು ಪವಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.