![City](https://www.udayavani.com/wp-content/uploads/2025/02/City-1-415x249.jpg)
![City](https://www.udayavani.com/wp-content/uploads/2025/02/City-1-415x249.jpg)
Team Udayavani, Aug 16, 2023, 11:14 PM IST
ಲಂಡನ್: ಏಕದಿನ ನಿವೃತ್ತಿಯಿಂದ ಹೊರ ಬಂದಿರುವ ಇಂಗ್ಲೆಂಡಿನ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಮುಂಬರುವ ಏಕದಿನ ವಿಶ್ವಕಪ್‌ಗೆ ಸಂಭಾವ್ಯ ತಂಡದಲ್ಲಿ ಸೇರಿಸಲಾಗಿದೆ. ಇದೇ ವೇಳೆ ಅನುಭವಿ ಬ್ಯಾಟ್ಸ್ ಮನ್ ಹ್ಯಾರಿ ಬ್ರೂಕ್ ಮತ್ತು ವೇಗಿ ಜೋಫ್ರಾ ಆರ್ಚರ್ ಅವರನ್ನು ಕೈಬಿಡಲಾಗಿದೆ.
ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ಕಷ್ಟ ಸಾಧ್ಯವೆಂಬ ಕಾರಣದಿಂದ ಕಳಎದ ವರ್ಷ ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದ ಸ್ಟೋಕ್ಸ್ ಇದೀಗ ತನ್ನ ನಿರ್ಧಾರ ವನ್ನು ಬದಲಿಸಿದ್ದಾರೆ. ಅವರೀಗ ಇಂಗ್ಲೆಂಡ್ ತಂಡದ ಮ್ಯಾಚ್ ವಿನ್ನಿಂಗ್ ಸಾಮರ್ಥ್ಯವಿರುವ ಆಟ ಗಾರರಾಗಿದ್ದು ವಿಶ್ವಕಪ್ ಸಂಭಾವ್ಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಆಯ್ಕೆ ಗಾರ ಲೂಕ್ ರೈಟ್ ಹೇಳಿದ್ದಾರೆ.
32ರ ಹರೆಯದ ಸ್ಟೋಕ್ಸ್ ಮುಂದಿನ ತಿಂಗಳು ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ನಾಲ್ಕು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡಕ್ಕೆ ಮರಳಲಿದ್ದಾರೆ. ನ್ಯೂಜಿ ಲ್ಯಾಂಡ್ ವಿರುದ್ಧ ಆಡಲಿರುವ 15 ಸದಸ್ಯರ ತಂಡವೇ ಸಂಭಾವ್ಯ ವಿಶ್ವಕಪ್ ತಂಡದಲ್ಲಿ ಇರಲಿದ್ದಾರೆ ಎಂದು ರೈಟ್ ಹೇಳಿದ್ದಾರೆ.
ಅಟ್ಕಿನ್ಸನ್ ಚೊಚ್ಚಲ ಬಾರಿ ತಂಡಕ್ಕೆ
25ರ ಹರೆಯದ ವೇಗಿ ಗಸ್ ಅಟ್ಕಿನ್ಸನ್ ಅವರು ಚೊಚ್ಚಲ ಬಾರಿ ತಂಡಕ್ಕೆ ಸೇರಿಸಿಕೊಳ್ಳ ಲಾಗಿದೆ. ಆದರೆ ಎಸೆತಗಳ ಆಧಾರದಲ್ಲಿ ಟೆಸ್ಟ್‌ನಲ್ಲಿ ಅತೀ ವೇಗವಾಗಿ ಒಂದು ಸಾವಿರ ರನ್ ಗಳಿಸಿದ ಸಾಧಕ ಹ್ಯಾರಿ ಬ್ರೂಕ್ ಅವರನ್ನು ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 24ರ ಹರೆಯದ ಬ್ರೂಕ್ ಆ್ಯಶಸ್ ಟೆಸ್ಟ್‌ನ ಮೂರನೇ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿ ಕಾಣಿಸಿ ಕೊಂಡಿದ್ದರು.
ಸಂಭಾವ್ಯರ ಪಟ್ಟಿಯನ್ನು ಸೆ. 5ರ ಮೊದಲು ಐಸಿಸಿಗೆ ಸಲ್ಲಿಸಬೇಕಾಗಿದೆ. ಸೆ. 28ರ ವರೆಗೆ ತಂಡದಲ್ಲಿ ಇನ್ನಷ್ಟು ಬದಲಾವಣೆ ಮಾಡಲು ಅವಕಾಶವಿದೆ.
ಇಂಗ್ಲೆಂಡಿನ ಸಂಭಾವ್ಯ ವಿಶ್ವಕಪ್ ತಂಡ
ಜಾಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೇರ್‌ಸ್ಟೋ, ಸ್ಯಾಮ್ ಕರನ್, ಲಿಯಮ್ ಲಿವಿಂಗ್ ಸ್ಟೋನ್, ಡೇವಿಡ್ ಮಾಲನ್, ಅದಿಲ್ ರಶೀದ್, ಜೋ ರೂಟ್, ಜಾಸನ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೊಪ್ಲೇ, ಡೇವಿಡ್ ವಿಲ್ಲೆ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
You seem to have an Ad Blocker on.
To continue reading, please turn it off or whitelist Udayavani.