Prithvi Shah: ಮೊಣಕಾಲಿನ ಗಾಯ: ಪೃಥ್ವಿ ಶಾ ಹೊರಕ್ಕೆ
Team Udayavani, Aug 16, 2023, 11:20 PM IST
ಲಂಡನ್: ಗಾಯದ ಸಮಸ್ಯೆಯಿಂದಾಗಿ ಪೃಥ್ವಿ ಶಾ ಅವರು ನಾರ್ಥಂಪ್ಟನ್ಶೈರ್ ಪರ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಡರ್ಹಾಮ್ ವಿರುದ್ಧದ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಈ ಪಂದ್ಯದಲ್ಲಿ ಅವರು 76 ಎಸೆತ ಗಳಿಂದ 125 ರನ್ ಗಳಿಸಿದ್ದರು. ಇದರಿಂದಾಗಿ ನಾರ್ಥಂಪ್ಟನ್ಶೈರ್ ಆರು ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು.
ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪೃಥ್ವಿ ಶಾ ಅವರಿಗೆ ಗಾಯ ವಾಗಿತ್ತು. ಗಾಯದ ಸ್ಕ್ಯಾನ್ ವರದಿಯಲ್ಲಿ ಗಾಯವು ನಿರೀಕ್ಷಿಸಿದ ಕ್ಕಿಂತ ಗಂಭೀರವಾಗಿರುವುದು ಕಂಡುಬಂದಿದೆ. ಹೀಗಾಗಿ ಸ್ಪರ್ಧೆಯ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ ಎಂದು ನಾರ್ಥಂಪ್ಟನ್ಶೈರ್ನ ಪ್ರಕಟನೆ ತಿಳಿಸಿದೆ.
23ರ ಹರೆಯದ ಶಾ ಅವರು ವನ್ಡೆ ಕಪ್ಗಾಗಿ ನಡೆಯುತ್ತಿರುವ ಲಿಸ್ಟ್ “ಎ’ ಸ್ಫರ್ಧೆಯ ಕಿರು ಅವಧಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 429 ರನ್ ಪೇರಿಸಿ ಗಮನ ಸೆಳೆದಿದ್ದರು. ಸೋಮರ್ಸೆಟ್ ತಂಡದೆದುರಿನ ಪಂದ್ಯದಲ್ಲಿ ಅವರು 153 ಎಸೆತಗಳಿಂದ 244 ರನ್ ಸಿಡಿಸಿದ್ದರು. ಇದರಿಂದ ನಾರ್ಥಂಪ್ಟನ್ಶೈರ್ 87 ರನ್ನುಗಳಿಂದ ಗೆಲುವು ಸಾಧಿಸಿತ್ತು.
ಶಾ ಅವರಂತಹ ಆಟಗಾರ ನನ್ನು ಸ್ಪರ್ಧೆಯ ನಡುವೆ ಕಳೆದುಕೊಂಡಿರು ವುದು ತೀವ್ರವಾದ ನಿರಾಶೆ ಉಂಟು ಮಾಡಿದೆ. ಶಾ ತನ್ನ ಕಿರು ಅವಧಿಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದರು ಎಂದು ನಾರ್ಥಂಪ್ಟನ್ಶೈರ್ ತಂಡದ ಮುಖ್ಯ ಕೋಚ್ ಜಾನ್ ಸ್ಯಾಡ್ಲೆರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.