Congress: ಆಪರೇಷನ್ ಹಸ್ತಕ್ಕೆ ಸಿದ್ಧತೆ?
Team Udayavani, Aug 17, 2023, 7:39 AM IST
ಬೆಂಗಳೂರು: ತನ್ನ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸದ್ದಿಲ್ಲದೇ ಸಿದ್ಧತೆ ನಡೆಸುತ್ತಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ವರಿಷ್ಠರಿಂದ ಶಹಭಾಸ್ ಪಡೆಯುವ ಉತ್ಸಾಹದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇದ್ದಾರೆ. ಆ ಹಿನ್ನೆಲೆಯಲ್ಲಿ ಜೆಡಿಎಸ್‌ನ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ನಡೆ ಯುತ್ತಿದೆ ಎನ್ನಲಾಗಿದೆ.
ಪಕ್ಷಾಂತರ ನಿಷೇಧ ಕಾಯಿದೆ ಕುಣಿಕೆಯಲ್ಲಿ ಸಿಲುಕದ ರೀತಿ ಜೆಡಿಎಸ್ ಶಾಸಕರನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಜೆಡಿಎಸ್‌ನ
ಕೆಲವು ಶಾಸಕರು ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದು ಕೊಳ್ಳುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಬೆಳವಣಿಗೆ ಹಲವು ಆಯಾಮಗಳನ್ನು ಹೊಂದಿದೆ. ಜೆಡಿಎಸ್ ಜತೆ ಸೇರಿ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಅವಕಾಶ ನೀಡಬಾರದು. ಬಿಜೆಪಿ ಆ ಸಾಹಸಕ್ಕೆ ಕೈ ಹಾಕುವ ಮೊದಲೇ ಕುಮಾರಸ್ವಾಮಿಯವರ ಪಕ್ಷದ ಸಂಖ್ಯಾ ಬಲ ಕಡಿಮೆ ಮಾಡಬೇಕು. ಜತೆಗೆ ಮುಂದಿನ ಐದು ವರ್ಷ ಕ್ಷೇತ್ರದಲ್ಲಿ ಅನುದಾನದ ಕೊರತೆ ಯಾಗದಿರಲು ಜೆಡಿಎಸ್ ಶಾಸಕರಿಗೂ ಕಾಂಗ್ರೆಸ್ ಸಖ್ಯ ಅನಿವಾರ್ಯ ಎನ್ನಲಾಗಿದೆ. ಹೀಗಾಗಿ ಸ್ವಯಂ ಪ್ರೇರಣೆ ಯಿಂದ ಕಾಂಗ್ರೆಸ್ ಆಪರೇಷನ್‌ನ ಪ್ರಯೋಗ ಪಶುವಾ ಗುವುದಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.
ಹೊಸ್ತಿಲ ಮೇಲೆ ನಿಂತವರಿಗೆ ಸಿಡಿ, ಇಡಿ ಭಯ
“ಆಪರೇಷನ್ ಕಮಲ’ ಸಂದರ್ಭದಲ್ಲಿ ಬಿಜೆಪಿಗೆ ಬಂದ ಕಾಂಗ್ರೆಸಿಗರ ಪೈಕಿ ಕೆಲ ಹಾಲಿ ಶಾಸಕರು “ಘರ್ ವಾಪ್ಸಿ’ಗೆ ಸಿದ್ದರಾಗಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಜತೆಗೆ ಚರ್ಚೆಯೂ ನಡೆದಿದೆ. ಆದರೆ ಹೊಸ್ತಿಲಲ್ಲಿ ನಿಂತವರಿಗೆ “ಸಿಡಿ ಹಾಗೂ ಇಡಿ’ ಭಯ ಕಾಡುತ್ತಿದೆ.
ಬಿಜೆಪಿಗೆ ವಲಸೆ ಬಂದು ಮುಂಬಯಿ ಯಲ್ಲಿ ಠಿಕಾಣಿ ಹೂಡಿದ್ದ “ಬಾಂಬೆ ಬಾಯ್ಸ’ ಪೈಕಿ 14 ಜನರು ತಮ್ಮ ವಿರುದ್ಧ ಯಾವುದೇ ಮಾನಹಾನಿಕಾರಕ ಅಥವಾ ಪ್ರಮಾಣೀಕೃತವಲ್ಲದ ವರದಿಗಳನ್ನು ಪ್ರಕಟಿಸಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದಕ್ಕೆ ಪೂರಕವಾಗಿ ಬಾಂಬೆ ಬಾಯ್ಸ ಪಡೆದ ತಡೆಯಾಜ್ಞೆ ಅನುಮಾನಗಳನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು. ಕೆಲವರ ಆಡಿಯೋ ಸಂವಾದದ ತುಣುಕುಗಳು ಲೀಕ್ ಆಗಿದ್ದವು. ಒಂದೊಮ್ಮೆ ಈ ಶಾಸಕರು ಕಾಂಗ್ರೆಸ್‌ಗೆ ವಾಪಸ್ ಆಗಲು ಮುಂದಾದರೆ “ಸಿಡಿ’ ಪ್ರಕರಣ ಬಹಿರಂಗವಾಗಬಹುದು ಎಂಬ ಭಯ ಕಾಡಲಾರಂಭಿಸಿದೆ. ಇನ್ನು ಕೆಲವರು ವ್ಯವಹಾರಿಕವಾಗಿ ಸಾಕಷ್ಟು ತಪ್ಪುಗಳನ್ನು ಮಾಡಿಕೊಂಡಿದ್ದು, ಐಟಿ ಹಾಗೂ ಇಡಿ ಕಣ್ಗಾವಲಿನಲ್ಲಿದ್ದಾರೆ. ಇಡಿ ಹಾಗೂ ಸಿಡಿ ಹೊರೆಯೊಂದಿಗೆ ಪಕ್ಷ ತ್ಯಾಗ ದುಬಾರಿಯಾಗಬಹುದೆಂಬ ಭಯ ಬೇಲಿಯ ಮೇಲೆ ಕುಳಿತ ಹಕ್ಕಿಗಳನ್ನು ಕಾಡುತ್ತಿದೆ.
ಆರೋ, ಹನ್ನೆರಡೋ ?
ಕಾಂಗ್ರೆಸ್ ಮೂಲಗಳ ಪ್ರಕಾರ, ಆರು ಶಾಸಕರು ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಇವರನ್ನು ಕಾಂಗ್ರೆಸ್‌ಗೆ ಕರೆ ತಂದು ಉಪಚುನಾವಣೆ ನಡೆಸುವ ಬದಲು ಜೆಡಿಎಸ್‌ನ 12 ರಿಂದ 13 ಶಾಸಕರನ್ನು ಒಪ್ಪಿಸಿ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗದ ರೀತಿಯಲ್ಲಿ ಹಣಿಯುವುದು ಮೊದಲ ಆದ್ಯತೆ ಎನ್ನಲಾಗುತ್ತಿದೆ. ಆ ಮೂಲಕ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕುಮಾರಸ್ವಾಮಿಯವರನ್ನು ಸಂಪೂರ್ಣವಾಗಿ ಸೋಲಿಸುವುದು ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರ ಲೆಕ್ಕಾಚಾರ. ಲೋಕಸಭಾ ಚುನಾವಣೆಗೆ ಮುನ್ನವೇ ಈ ಚಟುವಟಿಕೆ ನಡೆಸುವುದರಿಂದ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಬಹುದೆಂಬ ತಂತ್ರವನ್ನೂ ಕಾಂಗ್ರೆಸ್ ಹೊಂದಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರಕಾರ ಪತನಗೊಳಿಸಲು ಸಂಚು ರೂಪಿಸಬಹುದೆಂಬ ಅನುಮಾನ ಕಾಂಗ್ರೆಸ್ ನಾಯಕರದ್ದು.
ಘರ್ ವಾಪ್ಸಿ ?: ಬಿಜೆಪಿ ಮೂಲಗಳ ಪ್ರಕಾರ ಆಪರೇಷನ್ ಕಮಲ ಸಂದಭ ಪಕ್ಷಕ್ಕೆ ಬಂದಿದ್ದ ಶಾಸಕರ ಪೈಕಿ ಕೆಲವರು ಕಾಂಗ್ರೆಸ್‌ಗೆ ವಾಪಸ್ ಆಗುವ ಅನುಮಾನವಿದೆ. ಅಧಿವೇಶನ ಸಂದರ್ಭದಲ್ಲೇ ಈ ಬಗ್ಗೆ ಗುಸುಗುಸು ಮಾತುಗಳು ಕೇಳಿ ಬಂದಿದ್ದವು. ಈ “ಶಂಕಿತ’ರು ಅಧಿವೇಶನ ಸಂದರ್ಭ ಕಾಂಗ್ರೆಸ್ ಜತೆ ಫ್ರೆಂಡ್ಲಿ ಮ್ಯಾಚ್ ನಡೆಸಿದ್ದರು. ಬಿಜೆಪಿಯ ಯಾವುದೇ ಹೋರಾಟದಲ್ಲೂ ರಚನಾತ್ಮಕವಾಗಿ ಭಾಗಿಯಾಗಿರಲಿಲ್ಲ.
ನಮ್ಮ ಮುಂದಿನ ಗುರಿ ಲೋಕಸಭೆ ಚುನಾವಣೆ. ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚು ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿ ದ್ದೇನೆ. ದೊಡ್ಡ ನಾಯಕರಿಗಿಂತ ಅನ್ಯ ಪಕ್ಷಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಕ್ಷ ಸೇರಲು ಉತ್ಸುಕತೆ ತೋರಿದ್ದಾರೆ. ಈ ಬಗ್ಗೆ ಸ್ಥಳೀಯ ನಾಯಕರದ್ದೇ ತೀರ್ಮಾನ.
-ಡಿ.ಕೆ. ಶಿವಕುಮಾರ್, ಡಿಸಿಎಂ
ನನಗೆ ಗೊತ್ತಿರುವಂತೆ ಯಾರೂ ಆ ರೀತಿ ಹೋಗುವವರಿಲ್ಲ. ಈ ರೀತಿಯ ಸುದ್ದಿಯನ್ನು ಹರಡಿಸಲಾಗುತ್ತಿದೆ. ಊಹಾಪೋಹಕ್ಕೆ ಇದಕ್ಕಿಂತ ಹೆಚ್ಚು ಉತ್ತರಿಸುವುದಿಲ್ಲ. ಅಪನಂಬಿಕೆ ಇಟ್ಟುಕೊಂಡರೆ ಎಲ್ಲರನ್ನೂ ಅನುಮಾನಿಸ ಬೇಕಾಗುತ್ತದೆ. ಯಾರನ್ನೂ ಹಾಗೆ ನೋಡಲು ಬಯಸುವುದಿಲ್ಲ.
-ಸಿ.ಟಿ. ರವಿ, ಮಾಜಿ ಸಚಿವ
ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಳ್ಳು ತ್ತಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್‌ಗೆ ಬರಬ ಹುದು. ಬೇರೆ ಪಕ್ಷಕ್ಕೆ ಹೋಗಿ ತಪ್ಪು ಮಾಡಿದೆವು ಎಂಬ ಅರಿವು ಅನೇಕರಿಗೆ ಆಗಿದೆ. ಕಾಂಗ್ರೆಸ್‌ನ ಸಿದ್ಧಾಂತ ಹಾಗೂ ನಾಯಕತ್ವದ ಮೇಲೆ ನಂಬಿಕೆ ಇರಿಸಿ ಬಂದರೆ ಸೇರಿಸಿಕೊಳ್ಳುವುದರಲ್ಲಿ ತಪ್ಪೇ ನಿಲ್ಲ. ಆದರೆ ಅವರಿಗೆ ಮೊದಲ ಬೆಂಚ್ ಸಿಗದು.
-ಡಾ.ಜಿ. ಪರಮೇಶ್ವರ್, ಗೃಹ ಸಚಿವ
ಯಾರು ಹೋಗುತ್ತಾರೋ ಗೊತ್ತಿಲ್ಲ. ನಾನಂತೂ ಬಿಜೆಪಿ ಬಿಡಲಾರೆ. ಇಲ್ಲಿ ಈಗ ಫಸ್ಟ್ ಬೆಂಚ್‌ನಲ್ಲೇ ಇದ್ದೇನೆ. ಕಾಂಗ್ರೆ ಸ್‌ಗೆ ಹೋಗಿ ಲಾಸ್ಟ್ ಬೆಂಚ್‌ನಿಂದ ಫಸ್ಟ್ ಬೆಂಚ್‌ಗೆ ಬರಲು 20 ವರ್ಷ ಬೇಕು. ನನಗೆ ತೊಂದರೆ ಕೊಡಲೇ ಬೇಕೆಂದಿದ್ದರೆ ನನ್ನನ್ನು ಜೈಲಲ್ಲಿಟ್ಟು ಕ್ಷೇತ್ರದ ಅಭಿವೃದ್ಧಿಯನ್ನು ಅವರೇ ಮಾಡಲಿ.
-ಮುನಿರತ್ನ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.