I.N.D.I.A ಮೈತ್ರಿ ಕೂಟದಲ್ಲಿ ಬಿರುಕು?; ಅಲ್ಕಾ ಲಂಬಾ ಹೇಳಿಕೆ ಬಳಿಕ ಹೊಸ ಲೆಕ್ಕಾಚಾರ
ಸೀಟು ಹಂಚಿಕೆಯನ್ನು ವಕ್ತಾರರು ನಿರ್ಧರಿಸಲು ಸಾಧ್ಯವಿಲ್ಲ ಎಂದ ಆಪ್
Team Udayavani, Aug 17, 2023, 3:46 PM IST
ಹೊಸದಿಲ್ಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ವಿರುದ್ಧ ಸಮರ ಸಾರಲು ರಚಿಸಲಾದ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಕುರಿತು ಹಲವು ಪ್ರಶ್ನೆಗಳು ಮೂಡಿದ್ದು ಆಮ್ ಆದ್ಮಿ ಪಕ್ಷದ ಆಡಳಿತವಿರುವ ದೆಹಲಿಯ ಎಲ್ಲಾ7 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.
ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಅವರು ನೀಡಿದ ಹೇಳಿಕೆ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು, ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲು ಕಾಂಗ್ರೆಸ್ ಬುಧವಾರ ಸಭೆ ನಡೆಸಿತ್ತು, ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಸಭೆಯ ಬಳಿಕ ಅಲ್ಕಾ “ಮೈತ್ರಿಯ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಹಾಗಾಗಿ ನಾವು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆಯೇ ಅಥವಾ ಎರಡರಿಂದ ನಾಲ್ಕು ಸ್ಥಾನಗಳಿಂದ ಸ್ಪರ್ಧಿಸುತ್ತೇವೆಯೇ ಎಂದು ನಾನು ಹೇಳಲಾರೆ. ಚುನಾವಣೆಗೆ ಏಳು ತಿಂಗಳು ಬಾಕಿ ಇರುವ ಕಾರಣ ಎಲ್ಲ ಏಳು ಸೀಟುಗಳಲ್ಲೂ ಸಿದ್ಧರಾಗಿರಲು ತಿಳಿಸಲಾಗಿದೆ. ನಾವು ಇಂದಿನಿಂದ ಕೆಲಸ ಮಾಡಲು ಪ್ರಾರಂಭಿಸುತ್ತೇವೆ ಏಕೆಂದರೆ ದೆಹಲಿಯನ್ನು ಹೊಂದಿರುವವರ ಕೈಯಲ್ಲಿ ದೇಶವಿರುತ್ತದೆ.” ಎಂದು ಹೇಳಿದ್ದರು.
ದೆಹಲಿಯ ಸಚಿವ ಆಪ್ ನಾಯಕ ಸಚಿವ ಸೌರಭ್ ಭಾರದ್ವಾಜ್ ಪ್ರತಿಕ್ರಿಯಿಸಿ “ಕಾಂಗ್ರೆಸ್ ತಮ್ಮ ವಕ್ತಾರರ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ.ಯಾವುದೇ ಪಕ್ಷದ ವಕ್ತಾರರು ಯಾವುದೇ ರಾಜ್ಯದಲ್ಲಿ ಸೀಟು ಹಂಚಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಇದು ಒಂದು ಪ್ರಮುಖ ವಿಷಯವಾಗಿದೆ ಮತ್ತು ಅಂತಹ ವಿಷಯಗಳನ್ನು ಎಲ್ಲಾ ಪಕ್ಷಗಳ ಉಪಸ್ಥಿತಿಯಲ್ಲಿ ಚರ್ಚಿಸಲಾಗಿದೆ. ಯಾವುದೇ ವಕ್ತಾರರು ಇದನ್ನು ನಿರ್ಧರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
. @ANI के सवाल और मेरे ज़वाब… सुनिए और बताइए मैंने कहाँ किसी के साथ गठबंधन होने या ना होने की बात कही? विवाद किस बात का है???
जुड़ेगा #Bharat – जीतेगा #INDIA 🇮🇳✋@RahulGandhi @kharge @kcvenugopalmp @INCIndia @BabariaDeepak pic.twitter.com/UCnQuzEYYu— Alka Lamba 🇮🇳 (@LambaAlka) August 16, 2023
ದೆಹಲಿಯಲ್ಲಿ ಮೈತ್ರಿಯನ್ನು ಬಯಸದಿದ್ದರೆ, ಇಂಡಿಯಾ ಸಭೆಗೆ ಹೋಗುವುದು ಅರ್ಥಹೀನ ಮತ್ತು ಸಮಯ ವ್ಯರ್ಥ. ನಾವು ಮುಂದಿನ ಇಂಡಿಯಾ ಸಭೆಗೆ ಹಾಜರಾಗಬೇಕೇ ಎಂದು ನಮ್ಮ ಉನ್ನತ ನಾಯಕತ್ವ ನಿರ್ಧರಿಸುತ್ತದೆ ಎಂದು ಆಪ್ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ಅಲ್ಕಾ ಲಂಬಾ ಅವರು ಆಪ್‌ಗೆ ತೆರಳಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು.ಈ ವಿಚಾರವನ್ನು ಮುಂದಿಟ್ಟುಕೊಂಡು ಹಲವರು ಟೀಕಾ ಪ್ರಹಾರ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಕೂಡ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆ ವ್ಯಂಗ್ಯವಾಡಿದೆ. ವಿಶೇಷವೆಂದರೆ 2019 ರಲ್ಲಿ ಆಮ್ ಆದ್ಮಿ ಪಕ್ಷದ ಪ್ರಬಲ ಹೋರಾಟದ ನಡುವೆಯೂ ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
Kerala:ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್ ರಚನೆ ಆರೋಪ; ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.