ಕೆಆರ್ ಎಸ್ ಪಕ್ಷ ತಾ.ಪಂ ಮತ್ತು ಜಿ.ಪಂ.ಚುನಾವಣೆಗೆ ಸ್ಪರ್ಧಿಸಲಿದೆ : ನೀಲಕಂಠ ಕೆ.ಎನ್
Team Udayavani, Aug 17, 2023, 4:33 PM IST
ಕಾರವಾರ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬರಲಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕುಗಳಲ್ಲಿ ಕೆಆರ್ ಎಸ್ ಪಕ್ಷ ಸಂಘಟನೆ ಮಾಡಲಿದೆ ಎಂದು ಕೆಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ನೀಲಕಂಠ ಕೆ.ಎನ್.ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೆಆರ್ ಎಸ್ ಸ್ಥಾಪನೆಯಾಗಿ 4 ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ನಾವು ಪಕ್ಷ ಬಲಪಡಿಸಲು ಸಜ್ಜಾಗಿದ್ದೇವೆ. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಜಾರಿಗೆ ಮಾಡಿರುವುದನ್ನು ಕೆಆರ್ ಎಸ್ ಪಕ್ಷ ಸ್ವಾಗತಿಸುತ್ತದೆ ಎಂದರು.
ಆದರೆ ಅಭಿವೃದ್ಧಿ ಕೆಲಸಗಳನ್ನು ಮೊಟಕು ಗೊಳಿಸಬಾರದು. ಹಾಗೂ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಇದನ್ನು ನಿಯಂತ್ರಣ ಮಾಡಬೇಕು. ಸರಕಾರದಲ್ಲಿ ಖಾಲಿ ಇರುವ 3.5 ಲಕ್ಷ ಹುದ್ದೆ ಖಾಲಿಯಿದ್ದು, ಅವುಗಳನ್ನು ಭರ್ತಿ ಮಾಡಲು ನಾವು ಆಗ್ರಹಿಸುತ್ತಿದ್ದೇವೆ ಎಂದರು.
ಸೌಜನ್ಯ ಅತ್ಯಾಚಾರ ಪ್ರಕರಣದ ಮರು ತನಿಖೆ ಮಾಡಿ, ನಿಜವಾದ ಆರೋಪಿಗಳನ್ನು ಹಿಡಿಯಬೇಕು ಎಂದು ಕೆಆರ್ ಎಸ್ ಆಗ್ರಹಿಸುತ್ತದೆ. ಕುಡಿಯುವ ನೀರು ಕಲುಷಿರಲತವಾಗಿ ರಾಜ್ಯದ ಎರಡು ಕಡೆ ಸಾವು ನೋವು ಸಂಭವಿಸಿವೆ , ಮುಂದೆ ನೀರಿಗಾಗಿ ಯುದ್ಧ ನಡೆಯಬಹುದು ಅದನ್ನು ಸರ್ಕಾರ ತಪ್ಪಿಸಬೇಕು ಎಂದು ನೀಲಕಂಠ ಹೇಳಿದರು. ಪ್ರಜಾಪ್ರಭುತ್ವದ ಅಡಿ ಚುನಾಯಿತ ಜನಪ್ರತಿನಿಧಿಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಮಣಿಪುರದಂಥ ಘಟನೆ ನಡೆಯುತ್ತಿವೆ. ಇದು ನಿಲ್ಲಬೇಕು.ಹಾಗೂ ರಾಜ್ಯ ಸರ್ಕಾರ ಲೋಕಾಯುಕ್ತ ಬಲಪಡಿಸಬೇಕು ಎಂದರು.
ಹೊನ್ನಾವರದ ಚಿತ್ತಾರ ಪಂಚಾಯತ್ ಕಟ್ಟಡ ನಿರ್ಮಾಣದ ವಿವರದ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಿದ್ದಕ್ಕೆ ಪಿಡಿಒ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಈ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಹಿಂದಿ ಹೇರಿಕೆ ಬೇಡ: ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಹಿಂದಿ ಹೇರುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ. ರಾಜ್ಯಗಳ ಜೊತೆ ಕೇಂದ್ರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಕೆಆರ್ ಎಸ್ ಜಿಲ್ಲಾ ಉಪಾಧ್ಯಕ್ಷ ವಿನಾಯಕ ಎಂ.ನಾಯ್ಕ ಆರೋಪಿಸಿದರು. ಕೇಂದ್ರ ಸರ್ಕಾರ ಜನ ವಿರೋಧಿಯಾಗಿದೆ ಎಂದು ಅವರು ಅಪಾದಿಸಿದರು.
ಇತ್ತಿಚಿನ ದಿನಗಳಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಕೇಂದ್ರದ ಬಿಜೆಪಿ ಮೊಟಕು ಗೊಳಿಸುತ್ತಿದೆ. ರಾಜ್ಯಗಳ ಅಧಿಕಾರವನ್ನು ಕಿಕಿತ್ತುಕೊಳ್ಳಲಾಗುತ್ತಿದೆ. ಚುನಾವಣಾ ಆಯೋಗವನ್ನು ದುರ್ಬಲಗೊಳಿಸಲಾಗುತ್ತಿದೆ. ಹಣ, ತೋಳ್ಬಲ ಇದ್ದವರು ಚುನಾವಣೆಗೆ ನಿಂತು ಗೆಲ್ಲುತ್ತಿದ್ದಾರೆ. ನ್ಯಾಯ ಸಮ್ಮತ ಚುನಾವಣೆ ನಡೆಯುವಂತೆ ಚುನಾವಣಾ ಆಯೋಗ ನೋಡಿಕೊಳ್ಳಬೇಕು ಎಂದು ವಿನಾಯಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಫಕೀರ್ ಸಾಳುಂಕೆ, ಸಂದೀಪ ನಾಯ್ಕ, ಗಣಪತಿ ನಾಯ್ಕ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.