Sanju Weds Geetha 2 ಸಂಜು ಮತ್ತು ಗೀತಾಗೆ ಮುಹೂರ್ತ ಸಂಭ್ರಮ
Team Udayavani, Aug 18, 2023, 11:51 AM IST
“ಸಂಜು ಮತ್ತು ಗೀತಾ’ ಕನ್ನಡ ಚಿತ್ರರಂಗದ ಹಿಟ್ ಸಿನಿಮಾಗಳ ಸಾಲಿನಲ್ಲಿ ಸಿಗುವ ಚಿತ್ರ. ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ನಾಯಕ-ನಾಯಕಿಯಾಗಿ ನಟಿಸಿದ್ದರು. ಚಿತ್ರದ ಹಾಡುಗಳು ಹಾಗೂ ಚಿತ್ರ ಕೂಡಾ ದೊಡ್ಡಮಟ್ಟದಲ್ಲಿ ಹಿಟ್ ಆಗುವ ಮೂಲಕ ಚಿತ್ರತಂಡ ಖುಷಿಯಾಗಿತ್ತು. ಈಗ ದೊಡ್ಡ ಗ್ಯಾಪ್‌ನ ಬಳಿಕ ಈ ಚಿತ್ರದ ಮುಂದುವರೆದ ಭಾಗ ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕಲರ್‌ಫುಲ್ ಫೋಟೋಶೂಟ್ ಮಾಡಿಸಿದ್ದ ಚಿತ್ರತಂಡ ಇತ್ತೀಚೆಗೆ ಚಿತ್ರದ ಮುಹೂರ್ತ ಆಚರಿಸಿದೆ.
ಚಿತ್ರದ ಮೊದಲ ದೃಶ್ಯಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡಿ ಶುಭ ಕೋರಿ ದರು. ಇದೇ ಸಂದರ್ಭದಲ್ಲಿ ಚಿತ್ರದ ಫಸ್ಟ್‌ಲುಕ್ ಟೀಸರ್ ಅನ್ನು ಪ್ರದರ್ಶಿಸಲಾಯಿತು.
ಅಂದಹಾಗೆ, ಈ ಬಾರಿ ಒಂದು ಸಣ್ಣ ಬದಲಾವಣೆಯಾಗಿದೆ. ಅದು ನಾಯಕಿ. ಹೌದು, ಮೊದಲ ಭಾಗದಲ್ಲಿ ರಮ್ಯಾ ನಾಯಕಿಯಾಗಿ ಮಿಂಚಿದ್ದರು. ಆದರೆ, ಈ ಬಾರಿ ರಮ್ಯಾ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ.
ಮುಹೂರ್ತದ ವೇಳೆ ಮಾತನಾಡಿದ ನಿರ್ದೇಶಕ ನಾಗಶೇಖರ್, ಈ ಸಿನಿಮಾ ಮಾಡಬೇಕೆಂಬ ಆಲೋಚನೆ ಆರು ವರ್ಷ ದಿಂದಲೇ ಇತ್ತು. ಪ್ರತಿ ಸಾರಿ ಕಂಫೋಸಿಂಗ್ ಕುಳಿತಾಗಲೂ ನನಗೆ ಹಾಡುಗಳು ಸಿಗುತ್ತಿರಲಿಲ್ಲ. ಈ ಸಿನಿಮಾವನ್ನು ಪಾರ್ಟ್ ಮಾಡೋದೇ ದೊಡ್ಡ ಚಾಲೆಂಜ್. ಹಾಡುಗಳು ಬಹಳ ಮುಖ್ಯ ಈ ಕಥೆಗೆ. ಈಗ ಕವಿರಾಜ್ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಚಿತ್ರಕ್ಕಿದೆ. ಈ ಬಾರಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ನಾನು ರಮ್ಯಾ ಅವರನ್ನು ಈ ಸಿನಿಮಾ ಬಗ್ಗೆ ಕೇಳಬೇಕು ಮಾಡಬೇಕು ಅಂದುಕೊಂಡೆ. ಆದರೆ, ಆಗ ಅವರು ಫಾರಿನ್‌ನಲ್ಲಿದ್ದರು. ಅವರು ಬರುವವರೆಗೆ ಕಾಯುವಷ್ಟು ಸಮಯ ನನಗಿರಲಿಲ್ಲ’ ಎಂದರು. ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ, “ನನ್ನ ಕೆರಿಯರ್‌ನ ಅದ್ಭುತ ಸಿನಿಮಾಗಳಲ್ಲಿ “ಸಂಜು ವೆಡ್ಸ್ ಗೀತಾ’ ಕೂಡಾ ಒಂದು. ಈಗ ಅದರ ಮುಂದುವರೆದ ಭಾಗ ಮಾಡುತ್ತಿ ರುವ ಬಗ್ಗೆ ನನಗೆ ಖುಷಿ ಇದೆ’ ಎಂದರು.
ನಾಯಕಿ ರಚಿತಾ ರಾಮ್ ಮೊದಲ ಬಾರಿಗೆ ನಾಗಶೇಖರ್ ನಿರ್ದೇಶನದಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ಕವಿರಾಜ್ ಸಾಹಿತ್ಯ, ಸತ್ಯ ಹೆಗಡೆ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.