Sandalwood ಗುಡ್‍ನ್ಯೂಸ್ ಕೊಟ್ಟ ರ‍್ಯಾಪರ್ ಚಂದನ್ ಶೆಟ್ಟಿ
ವರಮಹಾಲಕ್ಷ್ಮೀ ಹಬ್ಬಕ್ಕೆ ಸಿಗಲಿದೆ ಸರ್ ಪ್ರೈಸ್!
Team Udayavani, Aug 18, 2023, 5:48 PM IST
ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. `ಎಲ್ರ ಕಾಲೆಳಿಯುತ್ತೆ ಕಾಲ’ಎನ್ನುತ್ತಲೇ ಹೀರೋ ಪಟ್ಟಕ್ಕೇರಿ ಕುಳಿತ ಚಂದನ್, `ಸೂತ್ರಧಾರಿ’ಯಾಗಿ ಸಂಚಲನ ಮೂಡಿಸುವ ಮುನ್ನವೇ ಮಗದೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಚೊಚ್ಚಲ ಸಿನಿಮಾ ಬಿಡುಗಡೆಗೂ ಮೊದಲೇ ಹ್ಯಾಟ್ರಿಕ್ ಚಿತ್ರದ ಅಪ್‍ಡೇಟ್ ನೀಡುವ ಮೂಲಕ ಸ್ಯಾಂಡಲ್‍ವುಡ್ ಅಂಗಳದಲ್ಲಿ ಶೆಟ್ರು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಟೈಟಲ್ ರಿವೀಲ್‍ಗೆ ಮುಹೂರ್ತ ಫಿಕ್ಸ್ ಮಾಡಿರೋ ಶೆಟ್ರು, ವರಮಹಾಲಕ್ಷ್ಮೀ ಹಬ್ಬಕ್ಕೆ ಶೀರ್ಷಿಕೆ ಸಮೇತ ಸರ್ ಪ್ರೈಸ್ ಕೊಡುವುದಾಗಿ ಹೇಳಿಕೊಂಡಿದ್ದಾರೆ.
ಈಗಾಗಲೇ ಶೆಟ್ರು ಎರಡು ಸಿನಿಮಾಗಳಲ್ಲಿ ನಾಯಕನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ, ಆ ಎರಡು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ಮೊದಲೇ ಶೆಟ್ರಿಗೆ ಮತ್ತೊಂದು ಸಿನಿಮಾದಲ್ಲಿ ನಾಯಕನಟನಾಗಿ ಖದರ್ ತೋರಿಸುವ ಚಾನ್ಸ್ ಸಿಕ್ಕಿದೆ. ಆಗಸ್ಟ್ 25ರಂದು ಅಧಿಕೃತವಾಗಿ ಈ ಚಿತ್ರದ ಟೈಟಲ್ ಘೋಷಣೆಯಾಗಲಿದ್ದು, ಅರುಣ್ ಅಮುಕ್ತ ಎನ್ನುವವರು ಡೈರೆಕ್ಟ್ ಮಾಡಲಿದ್ದಾರೆ. ಈ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರುಳಿ ನಾಯಕರಾಗಿದ್ದ `ಲೂಸ್ ಗಳು’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮೂಲತಃ ಆಡ್ ಫಿಲಂ ಮೇಕರ್ ಆಗಿರುವ ಅರುಣ್, ಕನ್ನಡ ಚಿತ್ರರಂಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಈಗ ರ‍್ಯಾಪರ್ ಚಂದನ್ ಶೆಟ್ಟಿ ಜೊತೆ ಕೈಜೋಡಿಸುವ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ಗೆ ಮರಳಿದ್ದಾರೆ.
ಇದೊಂದು ಟೀನೇಜ್ ಡ್ರಾಮವುಳ್ಳ ಕಥೆಯಾಗಿದ್ದು, ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸುಬ್ರಹ್ಮಣ್ಯ ಕುಕ್ಕೆ, ಎ.ಸಿ. ಶಿವಲಿಂಗೇಗೌಡ ಬಂಡವಾಳ ಹೂಡಲಿದ್ದು, ಆಗಸ್ಟ್ 25ರಂದು ಸಿನಿಮಾ ಶೀರ್ಷಿಕೆ ಜತೆಗೆ ಇನ್ನೊಂದಿಷ್ಟು ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ವಿಶೇಷ ಅಂದರೆ ಶೆಟ್ರ ಸಿನಿಮಾ ಜರ್ನಿ. ಕಳೆದ 10 ವರ್ಷಗಳ ಹಿಂದೆ ಚಂದನ್ ಗೀತೆ ರಚನೆಕಾರನಾಗಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟರು. ಅಲೆಮಾರಿ ಚಿತ್ರದಿಂದ ಅಸಿಸ್ಟೆಂಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ವೃತ್ತಿ ಆರಂಭಿಸಿ, ಇವತ್ತು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ಬರಹಗಾರನಾಗಿ ಗುರ್ತಿಸಿಕೊಂಡಿದ್ದಾರೆ. ಸೂಪರ್ ಹಿಟ್ ಆಲ್ಬಂಗಳ ಮೂಲಕ ಸೈ ಎನಿಸಿಕೊಂಡು ಯಶಸ್ವಿ ರ‍್ಯಾಪರ್ ಆಗಿದ್ದಾರೆ. ಬಿಗ್‍ಬಾಸ್ ಮನೆಗೆ ಹೋಗಿಬಂದ್ಮೇಲೆ ಮತ್ತಷ್ಟು-ಮಗದಷ್ಟು ಖ್ಯಾತಿ ಪಡೆದಿರುವ ಶೆಟ್ರು, ಟೆಲಿವಿಷನ್ ಶೋಗಳಲ್ಲಿ ಜಡ್ಜ್ ಆಗಿ ಕೂತಿದ್ದಾರೆ.ಗಂಧದಗುಡಿಯ ಸೂಪರ್ ಸ್ಟಾರ್ ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡೋದ್ರ ಜತೆಗೆ ಬೆಳ್ಳಿಭೂಮಿ ಮೇಲೆ ತಾವು ನಾಯಕನಟನಾಗಿ ಮೆರವಣಿಗೆ ಹೊರಡಲು ಸಿದ್ದರಾಗಿದ್ದಾರೆ. ಬಿಗ್‍ಸ್ಕ್ರೀನ್ ಮೇಲೆ ತಮ್ಮ ಹೀರೋನ ನೋಡೋದಕ್ಕೆ ಅವರ ಅಭಿಮಾನಿಗಳು ಕಾತುರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.