![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 19, 2023, 6:55 AM IST
ವಿಜಯಪುರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜ್ಯದ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸಿ ಮುಖ್ಯಮಂತ್ರಿಯಾಗುವ ಹುನ್ನಾರ ನಡೆಸಿದ್ದಾರೆ. ಆದರೆ ಶಿವಕುಮಾರ ಎಂದಿಗೂ ಮುಖ್ಯಮಂತ್ರಿ ಆಗಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ತಮ್ಮ ಬೆನ್ನಿಗೆ 15 ಶಾಸಕರಿದ್ದರೂ ಹೆಚ್ಚು ಶಾಸಕರ ಬೆಂಬಲ ಇರುವ ಸಿದ್ದರಾಮಯ್ಯ ಅವರನ್ನು ಅಧಿ ಕಾರದಿಂದ ಕೆಳಗಿಳಿಸಲು ಶಿವಕುಮಾರ ಸಂಚು ರೂಪಿಸುತ್ತಿದ್ದಾರೆ. ಬಿಜೆಪಿಗೆ ಹೋದವರು ಮರಳಿ ಬರುತ್ತಾರೆ ಎನ್ನುವ ಹೇಳಿಕೆ ಹಿಂದೆ ಸಿದ್ದರಾಮಯ್ಯ ಶಕ್ತಿ ಕುಗ್ಗಿಸುವ ಹುನ್ನಾರ ಅಡಗಿದೆ. ಬಾಂಬೆ ಬಾಯ್ಸ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದೆಲ್ಲ ಊಹಾಪೋಹ ಹಾಗೂ ಕಾಂಗ್ರೆಸ್ ನಡೆಸಿರುವ ಅಪಪ್ರಚಾರ.
ಶಾಸಕ ಮುನಿರತ್ನ ಬಿಜೆಪಿಯಲ್ಲೇ ನನ್ನ ರಾಜಕೀಯ ಜೀವನ ಕೊನೆಗೊಳ್ಳಲಿದೆ ಎಂದಿದ್ದಾರೆ. ಇಂಥ ಅಪಪ್ರಚಾರದಿಂದ ಭಯ ಹುಟ್ಟಿಸಿ, ಲೋಕಸಭಾ ಚುನಾವಣೆಗೆ ವಾತಾವರಣ ವಾಮ ಮಾರ್ಗದ ಸಿದ್ಧತೆ ನಡೆಸಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಬಿಜೆಪಿ ಮುಖಂಡ ಎಸ್.ಟಿ.ಸೋಮಶೇಖರ ಭೇಟಿ ಮಾಡಿದ್ದರಲ್ಲಿ ತಪ್ಪೇನಿಲ್ಲ. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಶಾಸಕನಾಗಿದ್ದ ನಾನು ಪಟೇಲರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದಿದ್ದೆ. ಅ ಧಿಕಾರದಲ್ಲಿರುವ ನಾಯಕರನ್ನು ವಿಪಕ್ಷದವರು ಭೇಟಿ ಮಾಡುವುದು ಸಾಮಾನ್ಯ. ರಾಜಕೀಯದ ಹೊರತಾಗಿ ಭೇಟಿ ಮಾಡಿದರೆ ತಪ್ಪೇನಿಲ್ಲ. ಸಿದ್ದರಾಮಯ್ಯ ವಿರುದ್ಧ ಇರುವ ಶಾಸಕರನ್ನು ಒಗ್ಗೂಡಿಸಿ ರಾಜಕೀಯವಾಗಿ ಮುಗಿಸಲು ಡಿಸಿಎಂ ದೊಡ್ಡ
ಯೋಜನೆಯನ್ನೇ ಮಾಡಿದ್ದಾರೆ. ಇದಕ್ಕಾಗಿ ದೆಹಲಿಯಲ್ಲಿ ಯಾರ್ಯಾರ ಮನೆಗೆ ತಿರುಗಿ, ಬ್ಲಾಕ್‌ವೆುಲ್ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ ಎಂದರು.
ಶಿವಕುಮಾರ ಅವರಿಂದ ಏನೆಲ್ಲ ನೋವು ಅನುಭವಿಸಿದರೂ ಸಿದ್ದರಾಮಯ್ಯ ಸುಮ್ಮನಿದ್ದಾರೆ. ಈ ನೋವೇ ಅವರು ಶಿವಕುಮಾರ ಅವರಿಗೆ ಅಧಿ ಕಾರ ಬಿಟ್ಟುಕೊಡದಂತೆ ಮಾಡಲಿದೆ. ನಾನೇ ಕಾಂಗ್ರೆಸ್‌ನ ಕೊನೆ ಮುಖ್ಯಮಂತ್ರಿ ಎನ್ನುವ ಸ್ಥಿತಿ ಇದ್ದು, 5 ತಿಂಗಳಾದರೂ ಸರಿ, 5 ವರ್ಷವಾದರೂ ಸರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಹೀಗಾಗಿ ಸಿಎಂ ಆಗುವ ಭಾಗ್ಯ ಡಿಕೆಶಿಗೆ ಸಿಗುವುದಿಲ್ಲ ಎಂದರು.
ಎಂ.ಬಿ.ಪಾಟೀಲ ಐದು ವರ್ಷ ಸಚಿವನಾಗಿರುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಯತ್ನಾಳ ವಿಡಿಯೋ ನನ್ನ ಬಳಿ ಇವೆ ಬಿಡುಗಡೆ ಮಾಡುತ್ತೇನೆ ಎನ್ನುವ ಅವರಿಗೆ ಅಧಿಕಾರದ ಅರಳು ಮರಳು ಹಿಡಿದಿದೆ. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಳಿ ಪೆನ್‌ಡ್ರೈವ್ ಇದೆ ಎಂದು ಬ್ಲಾಕ್‌ವೆುಲ್ ಮಾಡಿ ಬಾಯಿ ಮುಚ್ಚಿಸುವ ಬೆದರಿಕೆ ತಂತ್ರ ಬೇಡ. ಧೈರ್ಯ ಇದ್ದರೆ ಯಾರ್ಯಾರ ಡ್ರೈವ್, ಯಾರ್ಯಾರ ಪೆನ್ ಇದೆಯೋ ಬಿಡುಗಡೆ ಮಾಡಲಿ. ಯಾರ್ಯಾರದ್ದು ಏನೇನಿದೆ ಎಂಬುದು ನನಗೂ ಗೊತ್ತಿದೆ. ಇಂಥ ಹೇಳಿಕೆ ಕೊಡುವವರದ್ದು ಏನೇನಿದೆ ಎಂಬುದೂ ನನಗೆ ಗೊತ್ತಿದೆ. ಆದರೆ ನಾನು ಬ್ಲಾಕ್‌ವೆುಲ್ ಮಾಡಲಾರೆ ಎಂದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನೂ ತನಿಖೆ ನಡೆಸಿ
ಒಂದೊಮ್ಮೆ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ತನಿಖೆ ನಡೆಸಲು ಈ ಸರ್ಕಾರಕ್ಕೆ ಧೈರ್ಯ ಇದ್ದರೆ 6 ತಿಂಗಳಲ್ಲಿ ತನಿಖೆ ಮುಗಿಸಲಿ. ಬಿ.ಎಸ್.ಯಡಿಯೂರಪ್ಪ ವಿರುದ್ಧ ನಾನು ಮಾಡಿರುವ ಆರೋಪದ ಕುರಿತು ತನಿಖೆ ಮಾಡಿದರೂ ಎದುರಿಸಲು ಸಿದ್ಧನಿದ್ದೇನೆ. ನಮ್ಮಲ್ಲಿಯೂ ಭ್ರಷ್ಟರಿದ್ದರೆ ತನಿಖೆಯಿಂದಾದರೂ ಬಿಜೆಪಿ ಸ್ವತ್ಛಗೊಳ್ಳಲಿದೆ. ಬಿಜೆಪಿ ಸರ್ಕಾರ ಇದ್ದಾಗ 40 ಪರ್ಸೆಂಟೇಸ್ ಕಮಿಷನ್ ಪಡೆದಿತ್ತು ಎಂಬುದಕ್ಕೆ ಸಚಿವ ಎಂ.ಬಿ.ಪಾಟೀಲ ಬಳಿ ಆಡಿಯೋ, ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ. ಕ್ಯಾಸೆಟ್ ಕಾಲ ಹೋಗಿ ಪೆನ್‌ಡ್ರೈವ್ ಕಾಲ ಬಂದಿದೆ ಎಂದು ಯತ್ನಾಳ ಛೇಡಿಸಿದರು.
ಕಾಂಗ್ರೆಸ್ ಏನೇ ತಂತ್ರ ಮಾಡಿದರೂ ಲೋಕಸಭೆ ಚುನಾವಣೆಯಲ್ಲಿ ದೇಶಕ್ಕೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ರಾಜ್ಯದಲ್ಲಿ ಬಿಜೆಪಿ ಮತ್ತೆ 25 ಸ್ಥಾನ ಗೆಲ್ಲುವುದು ಖಚಿತ. ದೇಶಕ್ಕೆ ರಾಹುಲ್ ಗಾಂ ಧಿ, ಮಮತಾ ಬ್ಯಾನರ್ಜಿ ಅಂಥವರ ನಾಯಕತ್ವ ಬೇಕಿಲ್ಲ. ಭಾರತವನ್ನು ವಿಶ್ವದ ಆರ್ಥಿಕ ಬಲಿಷ್ಠ ರಾಷ್ಟ್ರಗಳಲ್ಲಿ 5ನೇ ಸ್ಥಾನಕ್ಕೆ ತಂದಿರುವ ಮೋದಿ ನಾಯಕತ್ವ ಬೇಕಿದ್ದು, ದೇಶದ ಮತದಾರರು ಮತ್ತೂಮ್ಮೆ ಮೋದಿ ಕೈ ಬಲಪಡಿಸಲಿದ್ದಾರೆ ಎಂದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.