Foreigners ವಾಸ್ತವ್ಯ ಆನ್ಲೈನ್ ನಮೂದು ಕಡ್ಡಾಯ
Team Udayavani, Aug 18, 2023, 11:10 PM IST
ಮಂಗಳೂರು: ಮಂಗಳೂರು ನಗರಕ್ಕೆ ಶಿಕ್ಷಣ, ಆರೋಗ್ಯ ಮೊದಲಾದ ಕಾರಣ ಗಳಿಂದ ಆಗಮಿಸುವ ವಿದೇಶಿಯರ ಮಾಹಿತಿಯನ್ನು ಆನ್ಲೈನ್ ಮುಖಾಂತರ ಸಿ-ಫಾರ್ಮ್ ಮತ್ತು ಎಸ್-ಫಾರ್ಮ್ ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಯಿಂದ ವಿದೇಶಿಯರ ಚಲನಲನಗಳ ಸ್ಪಷ್ಟ ಮಾಹಿತಿ ಅಗತ್ಯವಾಗಿದ್ದು ನಗರದಲ್ಲಿ ಅವರು ತಂಗುವ ವಾಸಸ್ಥಳ, ಆಗಮನ ಮತ್ತು ನಿರ್ಗಮನದ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ಅವರು ವಾಸ್ತವ್ಯ ಹೂಡಿದ 24 ಗಂಟೆಗಳ ಒಳಗಾಗಿ ಆನ್ಲೈನ್ನಲ್ಲಿ ಹೊಟೇಲ್, ಲಾಡ್ಜ್, ಅತಿಥಿಗೃಹ, ಸರ್ವೀಸ್ ಅಪಾರ್ಟ್ಮೆಂಟ್, ಆಸ್ಪತ್ರೆ, ಹಾಸ್ಟೆಲ್, ಬಾಡಿಗೆಮನೆ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯದವರು ಕಡ್ಡಾಯವಾಗಿ ನಮೂದಿಸಬೇಕು ಎಂದು ಮಂಗಳೂರು ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಅಂಶು ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.