Amazon: ಅಮೆಜಾನ್‌ಗೆ ವಂಚನೆ; ಅಮೆರಿಕಾ ಹ್ಯಾಕರ್‌ ಕೈವಾಡ 


Team Udayavani, Aug 19, 2023, 2:51 PM IST

tdy-6

ಬೆಂಗಳೂರು: ವಿಶ್ವದ ದೈತ್ಯ ಕಂಪನಿಗಳಲ್ಲೊಂದಾದ ಅಮೆ ಜಾನ್‌ಗೆ ಸಿನಿಮಾ ಮಾದರಿಯಲ್ಲಿ ಹ್ಯಾಕರ್ಸ್‌ಗಳು ವಂಚಿಸಿರುವ ಪ್ರಕರಣದಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಕಳ್ಳಾಟದಲ್ಲಿ ಅಮೆರಿಕಾ ಹ್ಯಾಕರ್‌ ಕೈವಾಡ ವಿರುವ ಕುತೂಹಲಕಾರಿ ಅಂಶ ಹೊರಬಿದ್ದಿದೆ.

ಆರೋಪಿಗಳು ಇದೇ ದಂಧೆ ನಡೆಸಿ ಕೋಟ್ಯಂತರ ರೂ. ಸಂಪಾದಿಸಲು ಮುಂದಾಗಿದ್ದ ಸಂಗತಿ ಬಂಧಿತ ಖಾಸಗಿ ಕಾಲೇಜು ವಿದ್ಯಾರ್ಥಿ ಚಿರಾಗ್‌ ಗುಪ್ತ ವಿಚಾರಣೆ ವೇಳೆ ತಿಳಿದು ಬಂದಿದೆ.  ಚಿರಾಗ್‌ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಐಷಾರಾಮಿ ಐಫೋನ್‌, ಲ್ಯಾಪ್‌ಟಾಪ್‌ ಅನ್ನು ಬುಕ್‌ ಮಾಡಿ ದುಡ್ಡು ಪಾವತಿಸಿ ತರಿಸಿಕೊಳ್ಳುತ್ತಿದ್ದ. ಬುಕ್‌ ಮಾಡಿದ ವಸ್ತು ಕೈ ಸೇರುತ್ತಿದ್ದಂತೆ ರಿಟರ್ನ್ ರಿಕ್ವೆಸ್ಟ್‌ ಕಳುಹಿಸುತ್ತಿದ್ದ. ಕೂಡಲೇ ಚಿರಾಗ್‌ ಸಹಚರರು ಅಮೆರಿಕಾದಲ್ಲಿ ಕುಳಿತುಕೊಂಡು ಇವರಿಗೆ ನೆರವು ನೀಡುತ್ತಿದ್ದ ಹ್ಯಾಕರ್‌ಗೆ ಮಾಹಿತಿ ನೀಡುತ್ತಿದ್ದರು.

ಆತ ಅಮೆಜಾನ್‌ ಕಂಪನಿಯ ಸರ್ವರನ್ನೇ ಹ್ಯಾಕ್‌ ಮಾಡಿ ಲಾಗಿನ್‌ ಆಗುತ್ತಿದ್ದ. ಬಳಿಕ ಚಿರಾಗ್‌ ಕಳಿಸಿರುವ ವಸ್ತುಗಳು ವಾಪಾಸ್‌ ಕಂಪನಿಗೆ ಬಂದಿದೆ ಎಂದು ನಮೂದಿಸಿ ಅಪ್‌ಡೇಟ್‌ ಮಾಡುತ್ತಿದ್ದ. ವಸ್ತು ವಾಪಾಸ್‌ ಕಂಪನಿಗೆ ಬಂದಿದೆ ಎಂಬ ಸಂದೇಶ ಕಂಪನಿ ಸಿಬ್ಬಂದಿಗೆ ಬಂದ ಕೆಲವೇ ಸಮಯಗಳಲ್ಲಿ ಚಿರಾಗ್‌ ಬ್ಯಾಂಕ್‌ ಖಾತೆಗೆ ದುಡ್ಡು ಪುನಃ ಜಮೆಯಾಗುತ್ತಿತ್ತು. ಅಮೆಜಾನ್‌ನಿಂದ ತನ್ನ ಕೈ ಸೇರಿದ ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ಚಿರಾಗ್‌ ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.

ಬಂದ ದುಡ್ಡಿನಲ್ಲಿ ಚಿರಾಗ್‌ ಹಾಗೂ ಆತನ ಗ್ಯಾಂಗ್‌ನ ಸಹಚರರು ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ವಸ್ತುಗಳು ವಾಪಾಸಾಗದೇ ದುಡ್ಡು ಮಾತ್ರ ಕಡಿತಗೊಂಡಿರುವ ಸಂಗತಿ ಅಮೆಜಾನ್‌ ಕಂಪನಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಕೂಡಲೇ ಅಮೆಜಾನ್‌ ಕಂಪನಿ ಸಿಬ್ಬಂದಿ ಯಶವಂತಪುರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಕಾರ್ಯಾಚರಣೆಗೆ ಇಳಿದ ಖಾಕಿ ಪಡೆ ಕೆಲ ದಿನಗಳಲ್ಲೇ ಆರೋಪಿಗಳನ್ನು ಹೆಡೆಮುರಿಕಟ್ಟಿ ವಿಚಾರಣೆ ನಡೆಸಿದಾಗ ಈ ಕಳ್ಳಾಟ ಬಹಿರಂಗಗೊಂಡಿದೆ. ಆರೋಪಿಗಳಿಂದ 30 ಲಕ್ಷ ರೂ.ನ 20ಕ್ಕೂ ಹೆಚ್ಚಿನ ವಸ್ತು ಜಪ್ತಿ ಮಾಡಲಾಗಿದೆ. ಅಮೆಜಾನ್‌ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೈವಾಡವಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಅಮೆರಿಕಾದಲ್ಲಿ ಬಚ್ಚಿಕೊಂಡಿರುವ ಹ್ಯಾಕರ್‌ ಭಾರತದಾದ್ಯಂತ ಇಂತಹ ಯುವಕರನ್ನು ಬಳಸಿಕೊಂಡು ವಿವಿಧ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಕೋಟ್ಯಂತರ ರೂ. ದೋಖಾ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿರಾಗ್‌ ಗ್ಯಾಂಗ್‌ಗೆ ಅಮೆರಿಕಾದ ಹ್ಯಾಕರ್‌ ತನ್ನ ಸಣ್ಣ ಸುಳಿವೂ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಆತನ ಮಾಹಿತಿ ಕಲೆ ಹಾಕುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.