Gadar 2 ಹಿಟ್: ದೇಶ ಪ್ರೇಮ ಸಾರಿದ ʼಬಾರ್ಡರ್ʼ ಸೀಕ್ವೆಲ್‌ಗೆ ತೆರೆಮರೆಯಲ್ಲಿ ಸಿದ್ದತೆ?
Team Udayavani, Aug 19, 2023, 5:23 PM IST
ಮುಂಬಯಿ: 22 ವರ್ಷಗಳ ಬಳಿಕ ಸನ್ನಿ ಡಿಯೋಲ್ ಅವರಿಗೆ ʼಗದರ್-2ʼ ಮೂಲಕ ದೊಡ್ಡ ಬ್ರೇಕ್ ಸಿಗುವ ಸಾಧ್ಯತೆಯಿದೆ. 2001 ರಲ್ಲಿ ಬಂದ ʼಗದರ್ʼ ಸಿನಿಮಾದ ಸೀಕ್ವೆಲ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ.
ಸನ್ನಿ ಡಿಯೋಲ್ ತಾರಾ ಸಿಂಗ್ ಆಗಿ ಕಾಣಿಸಿಕೊಂಡಿರುವ ʼಗದರ್-2ʼ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ಸನ್ನಿ ಡಿಯೋಲ್ ಅವರು ಬಹು ಸಮಯದ ನಂತರ ಒಂದು ಹಿಟ್ ಕೊಟ್ಟಿದ್ದಾರೆ. ಅಪಾರ ಪ್ರೇಕ್ಷಕರನ್ನು ಥಿಯೇಟರ್ ಗೆ ʼಗದರ್-2ʼ ಕರೆದುಕೊಂಡು ಬರುತ್ತಿದೆ. ವೀಕೆಂಡ್ ಮಾತ್ರವಲ್ಲದೆ, ವೀಕ್ ಡೇಸ್ ನಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇದೀಗ ಸನ್ನಿ ಡಿಯೋಲ್ ಅವರ ವೃತ್ತಿ ಜೀವನದಲ್ಲಿ ವಿಶೇಷ ಸಿನಿಮಾವಾಗಿರುವ ದೇಶ ಪ್ರೇಮವನ್ನು ಸಾರಿದ ʼಬಾರ್ಡರ್ʼ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿಯೊಂದು ಬಿಟೌನ್ ವಲಯದಲ್ಲಿ ಹಬ್ಬಿದೆ.
1971 ರ ಇಂಡೋ – ಪಾಕ್ ಕದನದ ಕಥೆಯನ್ನು ಆಧಾರಿಸಿ 1997 ರಲ್ಲಿ ತೆರೆಗೆ ಬಂದ ʼಬಾರ್ಡರ್ʼ ಸಿನಮಾ ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಜೆಪಿ ದತ್ತಾ ಮತ್ತು ನಿಧಿ ದತ್ತಾ ಅವರು ನಿರ್ಮಾಣ ಮಾಡಿದ್ದ ʼಬಾರ್ಡರ್ʼ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವುದನ್ನು ಮೂಲಗಳು ತಿಳಿಸಿವೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಇದನ್ನೂ ಓದಿ: Raj B Shetty: ʼಮಾರಿʼ ಅವತಾರದ ʼಟೋಬಿʼಗೆ ಸೆನ್ಸಾರ್ ಬೋರ್ಡ್‌ನಿಂದ ʼಯು/ಎʼ ಸರ್ಟಿಫಿಕೇಟ್
“ʼಬಾರ್ಡರ್-2ʼ ಗಾಗಿ ಪಿ ದತ್ತಾ ಮತ್ತು ನಿಧಿ ದತ್ತಾ ಖ್ಯಾತ ಸ್ಟುಡಿಯೋಸ್ ಚರ್ಚೆಯನ್ನು ಆರಂಭವಾಗಿದೆ. ಸಿನಿಮಾದ 2ನೇ ಭಾಗವನ್ನು ತೆರೆಗೆ ತರುವ ಬಗ್ಗೆ ಮೊದಲ ಹಂತದ ಮಾತುಕತೆಗಳು ನಡೆಯುತ್ತಿವೆ. ಭಾರತೀಯ ಸೇನೆಯ ಇತಿಹಾಸದ ಕಥೆಯೊಂದು ಸಿನಿಮಾದಲ್ಲಿರಲಿದೆ. ಆ ಕಥೆ ಯಾವುದು ಎನ್ನುವುದು ಈಗಾಗಲೇ ಅಧಿಕೃತಗೊಳಿಸಲಾಗಿದೆ. ಬರವಣಿಗೆ ಹಂತ ಶೀಘ್ರದಲ್ಲಿ ಶುರುವಾಗಲಿದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
“ಸನ್ನಿ ಡಿಯೋಲ್ ಸಿನಿಮಾದಲ್ಲಿರಲಿದ್ದಾರೆ. ʼಬಾರ್ಡರ್ʼ ಸಿನಿಮಾದಲ್ಲಿದ್ದ ಹಳೆಯ ನಟರು ಇದರಲ್ಲಿ ಇರುವುದಿಲ್ಲ. ಇದರಲ್ಲಿ ತುಂಬಾ ಆ್ಯಕ್ಷನ್ ಇರಲಿದ್ದು, ಇದಕ್ಕಾಗಿ, ಈಗಿನ ಜನರೇಷನ್ ನ ಯುವ ನಟರನ್ನು ಆಯ್ದುಕೊಳ್ಳಲಾಗುತ್ತದೆ. ಹಳೆಯ ʼಬಾರ್ಡರ್ʼ ನಿಂದ ಸನ್ನಿ ಡಿಯೋಲ್ ಅವರು ಮಾತ್ರ ಇದರಲ್ಲಿ ಇರಲಿದ್ದಾರೆ. ʼಬಾರ್ಡರ್-2ʼ ಮಾತುಕತೆ ಆರಂಭಿಕ ಹಂತದಲ್ಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ” ಎಂದು ಮೂಲಗಳು ʼಪಿಂಕ್ ವಿಲ್ಲಾʼಗೆ ತಿಳಿಸಿದೆ.
ಸದ್ಯ ಸನ್ನಿ ಡಿಯೋಲ್ ʼಗದರ್-2ʼ ಯಶಸ್ಸಿನ ಸಂತಸದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
Emergency; ಪಂಜಾಬ್ ನಲ್ಲಿ ಬ್ಯಾನ್ ಗೆ ಒತ್ತಾಯ: ಸಂಪೂರ್ಣ ದೌರ್ಜನ್ಯ ಎಂದ ಕಂಗನಾ
Bollywood: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕಂಗನಾ ʼಎಮರ್ಜೆನ್ಸಿʼ ಫುಲ್ ಮೂವಿ ಲೀಕ್
Saif Ali Khan: ಬಂಧಿತ ವ್ಯಕ್ತಿಗೂ ಸೈಫ್ ಅಲಿಖಾನ್ ಪ್ರಕರಣಕ್ಕೂ ಸಂಬಂಧವಿಲ್ಲ – ಪೊಲೀಸರು
MUST WATCH
ಹೊಸ ಸೇರ್ಪಡೆ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.