Mahindra: XUV 700 ಎಂಜಿನ್‌ಗಳಲ್ಲಿ ದೋಷ
Team Udayavani, Aug 19, 2023, 10:32 PM IST
ನವದೆಹಲಿ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ನ್ಪೋರ್ಟ್ಸ್ ಯುಟಿಲಿಟಿ ವಾಹನ ಎಕ್ಸ್‌ಯುವಿ 700 ಕಾರಿನ ಎಂಜಿನ್‌ನಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಇವುಗಳ ಪರಿಶೀಲನೆಗೆ ಕಂಪನಿ ಮುಂದಾಗಿದೆ. 2021ರ ಜೂ.8ರಿಂದ 2023ರ ಜೂ.28ರವರೆಗೆ ತಯಾರಾದ 1,08,306 ಎಕ್ಸ್‌ಯುವಿ 700 ಕಾರುಗಳಲ್ಲಿ ತಾಂತ್ರಿಕ ದೋಷದ ಸಾಧ್ಯತೆ ಇದೆ. ಹೀಗಾಗಿ ಈ ಕಾರುಗಳನ್ನು ಗ್ರಾಹಕರಿಂದ ಪಡೆದು, ಅವುಗಳನ್ನು ಪರಿಶೀಲಿಸಿ, ದೋಷ ಇದ್ದರೆ ಸರಿಪಡಿಸಿ, ಕಾರುಗಳನ್ನು ಮರಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಮತ್ತೂಂದೆಡೆ, 2023ರ ಫೆ.16ರಿಂದ ಜೂ.5ರವರೆಗೆ ತಯಾರಾದ 3,560 ಎಕ್ಸ್‌ಯುವಿ 400 ಕಾರುಗಳ ಬ್ರೇಕ್ ಪೊಟೆನ್‌ಶಿಯೋಮೀಟರ್‌ನಲ್ಲಿ ದೋಷ ಕಂಡುಬಂದಿದೆ. ಈ ಎರಡೂ ಮಾದರಿಯ ಕಾರುಗಳನ್ನು ಉಚಿತವಾಗಿ ತಪಾಸಣೆಗೆ ಒಳಪಡಿಸಿ, ದೋಷ ಸರಿಪಡಿಸಲಾಗುವುದು. ಕಾರುಗಳ ಮಾಲೀಕರನ್ನು ಕಂಪನಿಯೇ ಸಂಪರ್ಕಿಸಲಿದೆ ಎಂದು ಮಹೀಂದ್ರಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.