D. Devaraja Arasu State Award: ಜನತೆಯ ಆಶೀರ್ವಾದ ಈಗ ಫಲ ಕೊಟ್ಟಿದೆ: ಕಾಗೋಡು ತಿಮ್ಮಪ್ಪ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನ
Team Udayavani, Aug 19, 2023, 11:20 PM IST
ಶಿವಮೊಗ್ಗ ಜಿಲ್ಲೆಯ ಸಾಗರದ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ರವಿವಾರ (ಆ. 20) ಪ್ರಶಸ್ತಿ ಪ್ರದಾನ ನಡೆಯಲಿದೆ.
ಅರಸು ಪ್ರಶಸ್ತಿಗೆ ಭಾಜನರಾಗಿದ್ದೀರಿ. ಏನನ್ನಿಸುತ್ತಿದೆ?
ನನ್ನ ಹೋರಾಟದ ಜೀವನಕ್ಕೆ ಜನ ಮಾಡಿರುವ ಆಶೀರ್ವಾದ ಇವತ್ತು ಫಲ ಕೊಟ್ಟಿದೆ. ಇದ ರಿಂದ ಖುಷಿ ಆಗಿದೆ. ನಾನು ಬದುಕಿ ರುವವರೆಗೆ ಜನರ ಉಸಿರಾಗಿ ರುತ್ತೇನೆ. ಜನರ ಆಲೋಚನೆ, ವಿಚಾರಗಳನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ಜೀವನದಲ್ಲಿ ಇಂತಹ ಅವಕಾಶ ದೊರಕಿರುವುದು ಸಾಗರ ತಾಲೂಕಿನ ಬಡ ಜನರ ಆಶೀರ್ವಾದ ಎಂದು ಭಾವಿಸಿದ್ದೇನೆ. ಇಷ್ಟು ದೊಡ್ಡ ಹೋರಾಟದಲ್ಲಿ ನನ್ನ ಶ್ರಮಕ್ಕಿಂತ ಜನರ ತ್ಯಾಗ, ಪರಿಶ್ರಮವೇ ದೊಡ್ಡದು. ಒಬ್ಬ ಗೇಣಿ ರೈತ ನನಗೆ ಭೂಮಿ ತಪ್ಪಿಹೋಯಿತು ಎಂದು ಹೇಳಿದ್ದರೆ ಈ ಗೌರವ ಸಿಗುತ್ತಿರಲಿಲ್ಲ.
ಈ ಪ್ರಶಸ್ತಿ ಬಂದಿದ್ದು ತಡವಾಯಿತು ಅನ್ನಿಸುತ್ತಿದೆಯೇ?
ಇಲ್ಲ. ಇವೆಲ್ಲ ಬಹಳ ಚಿಂತಿಸಿ ಕೊಡುವ ಪ್ರಶಸ್ತಿಗಳು. ಸರಕಾರಕ್ಕೆ, ಪ್ರಶಸ್ತಿಗೆ ಸೂಕ್ತವಾದ ಮಾನದಂಡಗಳಿರುತ್ತವೆ. ಸಾಕಷ್ಟು ವಿಚಾರ ವಿನಿಮಯ ಮಾಡಿ ಕೊಡುವ ಪ್ರಶಸ್ತಿ. ಆ ದಾರಿಯಲ್ಲಿ ಹಲವರಿಗೆ ಈ ಪ್ರಶಸ್ತಿ ಸಂದಿದೆ.
ಸಿಎಂ ಗಾದಿ ಸಿಗಬೇಕು ಅನ್ನಿಸಿಲ್ಲವೇ?
ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಅನಿಸಿಕೆ ಇತ್ತು. ಹಲವರಲ್ಲಿ ಅಂತಹ ಭಾವನೆ ಇದೆ. ಆದರೆ ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ. ಅರಸು ಪ್ರಶಸ್ತಿ ಕೂಡ ನನಗೆ ಆಶ್ವರ್ಯವೇ. ಅದು ಬಂದಂತೆ ಸ್ವೀಕರಿಸಿದ್ದಷ್ಟೇ. ಹಾಗಾಗಿ ಮುಖ್ಯಮಂತ್ರಿ ಆಗಿಲ್ಲ ಎಂದು ಏನನ್ನೋ ಕಳೆದುಕೊಂಡೆ ಅಂತ ನನಗೆ ಅನಿಸಿಲ್ಲ.
ಈಗಿನ ರಾಜಕಾರಣದ ಬಗ್ಗೆ ಏನಂತೀರಿ?
ಈಗಿನವರೂ ರಾಜಕಾರಣಿಗಳೇ. ಅವತ್ತಿನವರೂ ರಾಜಕಾರಣಿಗಳೇ. ಆದರೆ ಜನಸೇವೆಗೆ ಇಳಿದವರಿಗೆ ಇಚ್ಛಾಶಕ್ತಿ ಇರಬೇಕು. ತತ್ವ-ನೀತಿಗಳ ಬಗ್ಗೆ ಬದ್ಧತೆ ಇರಬೇಕು. ಇದು ವ್ಯಾಪಾರವಲ್ಲ. ಜನರ ಸಮಸ್ಯೆ, ಕಾನೂನುಗಳ ಬಗ್ಗೆ ಸಂಕಷ್ಟ ಪರಿಹರಿಸುವ ಕೆಲಸ ಮಾಡಬೇಕು. ನನಗಂತೂ ತೀರಾ ವ್ಯತ್ಯಾಸ ಕಾಣುತ್ತಿಲ್ಲ.
ಕಾಗೋಡು ಚಳವಳಿಗೆ ಪ್ರೇರಣೆ ಯಾರು?
1952ರಲ್ಲಿ ಕಾಗೋಡಿನಲ್ಲಿ ಭೂ ಹೋರಾಟ ಆರಂಭವಾಯಿತು. ಗೋಪಾಲ ಗೌಡರು ಇದಕ್ಕೆ ಪ್ರೇರಣೆ ನೀಡಿದರು. ನಾನು ಆಗ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದೆ. ಗೋಪಾಲಗೌಡರು ನಮ್ಮ ಮನೆಗೇ ಬಂದು ಉಳಿಯುತ್ತಿದ್ದರು. ಅವರ ಆಚಾರ-ವಿಚಾರಗಳು ನನ್ನ ಮೇಲೆ ಪ್ರಭಾವ ಬೀರಿದವು. ಸಮಾಜವಾದಿ ಸಿದ್ಧಾಂತಕ್ಕೆ ಆಕರ್ಷಿತನಾಗಿ ಅದನ್ನು ಮೈಗೂಡಿಸಿಕೊಂಡೆ. ಮುಂದೆ ನಾನು ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿಗೆ ಹೋಗಲು ಅವರೇ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್ಕೌಂಟರ್; ತನಿಖೆ ಚುರುಕು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.