ಯಕ್ಷಗಾನದಲ್ಲಿ ಭೂತಾರಾಧನೆ: ಇದು ಸೂಕ್ತವೋ? ಸೂಕ್ತವಲ್ಲವೋ?


Team Udayavani, Aug 20, 2023, 6:46 AM IST

1-sdsd

ಯಕ್ಷಗಾನವೆನ್ನುವುದು ನಿರಂತರ ಹರಿಯುವ ಕಲೆ. ಸಾಧಾರಣ ತನ್ನ ಇತಿಹಾಸದುದ್ದಕ್ಕೂ ಹತ್ತಿರದ ವಿವಿಧ ಕಲೆಗಳ ಜತೆ ಕೊಡು ಕೊಳ್ಳುವಿಕೆಯನ್ನು ಮಾಡಿ ಕೆಲವು ಅಂಶ ಗಳನ್ನು ಸ್ವೀಕರಿಸಿ ಯಕ್ಷಗಾನೀಯ ರೂಪದಲ್ಲಿ ಬಳಸುತ್ತಿದೆ. ಯಕ್ಷಗಾನದಲ್ಲಿ ಭೂತಾರಾಧನೆ ಪ್ರಸಂಗಗಳು ಆಡಿ ತೋರಿಸಲ್ಪಡುತ್ತವೆ. ಈ ಯಕ್ಷಗಾನ ಪ್ರಸಂಗಗಳು ಜಾನಪದ ಶೈಲಿಯ ಕಥಾವಸ್ತುಗಳನ್ನು ಅಥವಾ ಕಾಲ್ಪನಿಕ ವಸ್ತುಗಳನ್ನು ಹೊಂದಿರುತ್ತವೆ. ಕಲಾಸ್ವಾದದ ದೃಷ್ಟಿಯಿಂದ ಇವು ಮನರಂಜನೀಯವೂ, ಜನಪ್ರಿಯವೂ ಹೌದು.

ಟೆಂಟ್‌ ಮೇಳಗಳ ಸಮಯದಲ್ಲೂ ಭೂತಾರಾಧನೆ ಹಿನ್ನೆಲೆಯ ಹಲವು ಪ್ರಸಂಗ ಗಳು ಜನಪ್ರಿಯವಾಗಿದ್ದವು. ಪ್ರಸಂಗಕರ್ತರ ಜ್ಞಾನ, ಕಲಾವಿದರ ಜಾಣ್ಮೆ, ಜನರ ಅಕ್ಕರೆ ಇವನ್ನು ಮೆರೆಸಿದವು. ಈಚೆಗೆ ಇಂತಹ ಪ್ರಸಂಗಗಳು ತುಳು ಮತ್ತು ಕನ್ನಡ ಭಾಷೆಯ ಪ್ರಸಂಗಗಳನ್ನು ಆಡುವ ಯಕ್ಷಗಾನ ಮೇಳಗಳಲ್ಲಿ ಜನಪ್ರಿಯವಾಗಿದೆ. ಹೊಸ ಪ್ರೇಕ್ಷಕ ವರ್ಗ ಸೃಷ್ಟಿಯಾಗಿದೆ. ತೆಂಕಿನಲ್ಲಿ ಇಂತಹ ಪ್ರಸಂಗಗಳನ್ನು ಆಡುವ ಸಾಕಷ್ಟು ಮೇಳಗಳು ಇದ್ದವು. ಬಡಗು ಮೇಳಗಳು ಇಂತಹ ಪ್ರದರ್ಶನ ಇತ್ತೀಚೆಗೆ ದಂಡಿಯಾಗಿ ಆಡುತ್ತಿವೆ. ಕನ್ನಡ ಮಾತನಾಡುವ ಪ್ರದೇಶ ಗಳಲ್ಲಿ ಕಾಂತಾರ ಸಿನೆಮಾ ಅನಂತರ ಇಂತಹ ಪ್ರಸಂಗಗಳ ಬಯಲಾಟಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ತೆಂಕು-ಬಡಗಿನ ಮೂಲಗಳು ತಿಳಿಸುತ್ತವೆ.

ಈ ವಿದ್ಯಮಾನಗಳು ಸಹಜವೇ ಹೌದಾದರೂ ಈ ರೀತಿಯ ಪ್ರಸಂಗಗಳಲ್ಲಿ ಬರುವ ದೈವದ ಪಾತ್ರಗಳಿಗೆ ಕಲಾವಿದರಿಂದ ದೈವಾರಾಧನೆಯ ನರ್ತಕರಷ್ಟು ನ್ಯಾಯ ಕೊಡಲು ಸಾಧ್ಯವೇ ಎನ್ನುವುದು ಚರ್ಚಾಸ್ಪದ. ಕಾರಣವೇನೆಂದರೆ ಭೂತಾರಾಧನೆಯ ಪ್ರಧಾನ ದೈವಗಳನ್ನು ಅಭಿನಯಿಸಿ ತೋರಿಸು ವಾಗ ಹೆಜ್ಜೆ ತಪ್ಪದಂತೆ, ದೈವಗಳ ಗೌರವ ಎಳ್ಳಷ್ಟು ಕಡಿಮೆಯಾಗದಂತೆ ನಿಭಾಯಿಸ ಬೇಕಾದ ಅನಿವಾರ್ಯತೆ.

ಇನ್ನೊಂದು ಇಂತಹ ವೇಷಗಳಿಗೆ ಇಲ್ಲಿಯವರೆಗೆ ಯಕ್ಷ ಗಾನೀಯ ಅನ್ನಬಹುದಾದ ವೇಷಭೂಷಣ ಗಳನ್ನು ಸರಿ ಹೊಂದಿಸುವುದು ಹೇಗೆ ಅನ್ನುವ ಪ್ರಶ್ನೆ. ಕೆಲವು ಮೇಳಗಳಲ್ಲಿ ಯಕ್ಷಗಾನದ ಮೆರುಗಿನ ಬಟ್ಟೆಯನ್ನೇ ಬಳಸಿ, ಕೃತಕ ಕಿರೀಟ ತಯಾರಿಸಿದರೆ ಇನ್ನೂ ಕೆಲವು ಮೇಳಗಳಲ್ಲಿ ಸಿರಿ, ಹಿಂಗಾರ, ಅಣಿ ಕಟ್ಟಿ ದೈವದಂತೆ ತೋರಿಸುವುದು. ಇದು ಸೂಕ್ತವೋ? ಸೂಕ್ತವಲ್ಲವೋ? ಎಂಬುದು ತಿಳಿಯುತ್ತಿಲ್ಲ.

ಮತ್ತೂಂದು ವಿಷಯವೆಂದರೆ ದೈವಾ ರಾಧನೆಯಲ್ಲಿ ಹಿಡಿಯುವ ಕೈದೊಂದಿಗಳನ್ನು ಯಕ್ಷಗಾನದಲ್ಲೂ ಬಳಕೆ ಮಾಡಬೇಕಾದ ಅನಿವಾರ್ಯತೆ. ಗುಳಿಗ ಮುಂತಾದ ದೈವಗಳ ರೌದ್ರ ಭಾವವನ್ನು ಚೆನ್ನಾಗಿ ತೋರಿಸಲು ಕೈಯಲ್ಲಿ ದೊಂದಿ, ಸೂಟೆ ಹಿಡಿದು ಅಬ್ಬರಿಸುವ ಕಲಾವಿದನಿಗೆ ಒಳಗಾಗುವ ಸಂಕಟ ಅವರಿಗಷ್ಟೇ ಗೊತ್ತು. ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ಭೂತಾರಾಧನೆ ಯದಕ್ಕಿಂತಲೂ ಭಾರ ಇರುವುದರಿಂದ ಮತ್ತು ಈ ವೇಷ-ಭೂಷಣಗಳಿಗೆ ಬೆಂಕಿ ಹತ್ತಿ ಕಲಾವಿದನ ಪ್ರಾಣಕ್ಕೆ ಅಪಾಯ ಉಂಟು ಮಾಡಬಲ್ಲ ಕಾರಣದಿಂದಲೂ ಅದರ ಬಳಕೆ ಸಾಧುವೇ ಎನ್ನುವ ಪ್ರಶ್ನೆ ಇದೆ.

ಇತ್ತೀಚೆಗೆ ಬಡಗಿನ ಮೇಳದ ದೈವ ಪಾತ್ರಧಾರಿ ಒಬ್ಬರು ಅಣಿಕಟ್ಟಿ ಸುತ್ತ ಹತ್ತಾರು ದೊಂದಿ ಕಟ್ಟಿ ಯಕ್ಷಗಾನೀಯ ವಲ್ಲದ ರೀತಿಯಲ್ಲಿ, ಜಾನಪದ ಶೈಲಿಯ ಹಾಡಿಗೆ ಕುಣಿದು ಕುಪ್ಪಳಿಸಿ ಬರುವಾಗಲೇ ಸ್ಮತಿ ತಪ್ಪಿ ಬಿದ್ದಿದ್ದರು. ವೇಷಭೂಷಣದ ಭಾರ, ಬೆವರು, ಬೆಂಕಿಯ ಬಿಸಿ, ಕುಣಿಯುವಾಗಿನ ಆಯಾಸ ಇಷ್ಟನ್ನೆಲ್ಲ ನಿಭಾಯಿಸುವ ಶಕ್ತಿ ಈಚಿನ ಕಲಾವಿದರಿಗೆ ನಿಜವಾಗಿಯೂ ಇದೆಯೇ ಎನ್ನುವ ಬಗ್ಗೆ ಕಳವಳ ಉಂಟಾಗುತ್ತಿದೆ. ಸಾಮಾನ್ಯವಾಗಿ ಮಹಿಷಾಸುರ ಮುಂತಾದ ವೇಷಧಾರಿಗಳು ತಮ್ಮ ಅನುಭವದಿಂದ ಹೇಳುವುದಾದರೆ ಭೂತಾರಾಧನೆಯಂತೆ ಅಣಿಕಟ್ಟಿ, ದೊಂದಿಗಳನ್ನು ಸುತ್ತ ಇಟ್ಟರೆ, ಒಂದು ವೇಳೆ ಕಲಾವಿದನ ಮೈಮೇಲೆ ಬೆಂಕಿ ಹತ್ತಿದರೆ ಸುಲಭಕ್ಕೆ ನಂದಿಸುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಮಹಿಷ ಪಾತ್ರಧಾರಿಗಳು ಉದ್ದದ ದೊಂದಿಯನ್ನು ದೂರ ಹಿಡಿದು ರಾಳ ಎಸೆಯುವ ಪರಿಪಾಠ. ಅಂತಹ ಬೆಂಕಿ ಉಂಡೆಯನ್ನೇ ಅಣಿಯ ಮೇಲೆ ಕಟ್ಟಿ ಬೆಂಕಿ ಬಿದ್ದರೆ ಹತ್ತಿಪತ್ತು ಕಟ್ಟು ಬಿಚ್ಚಿ ಕಲಾವಿದನ ಮೈ ಮೇಲಿನ ಬಟ್ಟೆ ತೆಗೆದು ರಕ್ಷಿಸಲು ಸಾಧ್ಯವೇ?. ಜನಪದೀಯ ಶೈಲಿಯಲ್ಲಿ ಯಕ್ಷಗಾನ ಸ್ಥಿತ್ಯಂತರ ಬಗ್ಗೆ ವಾದ ಬೇರೆಯೇ ಇದ್ದರೂ ಕಲಾವಿದನ ಜೀವದ ಹಿನ್ನೆಲೆಯಲ್ಲಿ ಚರ್ಚೆಗಳಾಗಬೇಕಿದೆ.

ನವೀನ್ ಕೆ. ವಿದ್ಯಾನಗರ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.