Education: ವಿವೇಕ ಕೊಠಡಿ ಕಾಮಗಾರಿ ಇನ್ನಷ್ಟು ವಿಳಂಬ
ಉಡುಪಿ, ದಕ್ಷಿಣ ಕನ್ನಡದಲ್ಲಿ ಪೂರ್ಣಗೊಂಡ ಕೊಠಡಿಗಳ ಸಂಖ್ಯೆ 10 ದಾಟಿಲ್ಲ
Team Udayavani, Aug 20, 2023, 12:35 AM IST
ಉಡುಪಿ: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ 3 ತಿಂಗಳಾಗುತ್ತ ಬಂದರೂ ಹಿಂದಿನ ವರ್ಷವೇ ಕಾಮಗಾರಿಗೆ ಚಾಲನೆ ನೀಡಿದ್ದ ವಿವೇಕ ಕೊಠಡಿಗಳ ನಿರ್ಮಾಣ ಕಾರ್ಯ ಮಾತ್ರ ಪೂರ್ಣವಾಗಿಲ್ಲ.
ಉಡುಪಿ, ಕಾಪು, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ಕ್ಷೇತ್ರಕ್ಕೆ ತಲಾ 40 ಕೊಠಡಿ, ಇದರಲ್ಲಿ ಜಿ.ಪಂ. ಸಿಇಒ ವಿವೇಚನೆಗೆ ಬಿಟ್ಟಿ ರುವ 5 ಕೊಠಡಿಗಳು ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಸುಳ್ಯ, ಮೂಲ್ಕಿ- ಮೂಡುಬಿದಿರೆ ಕ್ಷೇತ್ರ ಗಳಲ್ಲಿ ತಲಾ 35 ಹಾಗೂ ಜಿ.ಪಂ. ಸಿಇಒ ವಿವೇಚನೆಗೆ 5 ಸೇರಿ 285 ಶಾಲಾ ಕೊಠಡಿ ಮಂಜೂರಾಗಿವೆ. ಆದರೆ ಇವುಗಳ ಪೈಕಿ ನಿರ್ಮಾಣ ಪೂರ್ಣಗೊಂಡು ಶಾಲೆಗಳಿಗೆ ಹಸ್ತಾಂತರವಾಗಿರುವ ಕೊಠಡಿಗಳ ಸಂಖ್ಯೆ 10 ದಾಟಿಲ್ಲ.
ಉಭಯ ಜಿಲ್ಲೆಯ ತಲಾ 30ಕ್ಕೂ ಅಧಿಕ ಕೊಠಡಿಗಳು ಪೂರ್ಣಗೊಂಡಿದ್ದರೂ ಶಾಲೆಗೆ ಹಸ್ತಾಂತರ, ಉದ್ಘಾಟನೆ ಆಗದೆ ಇರುವುದರಿಂದ ಅವುಗಳಲ್ಲಿ ಪಾಠ ಪ್ರವಚನ ನಡೆಯುತ್ತಿಲ್ಲ. ಅಲ್ಲದೆ ಹೊಸ ಸರಕಾರ ಆಡಳಿತಕ್ಕೆ ಬಂದಿರುವುದರಿಂದ ವಿವೇಕ ಕೊಠಡಿಯ ಹೆಸರು ಬದ ಲಾಗಬಹುದು ಮತ್ತು ಈ ಹಿಂದೆ ಕೇಸರಿ ಬಣ್ಣ ಬಳಿ
ಯಲು ಸೂಚನೆ ನೀಡಲಾಗಿದ್ದು, ಅದು ಕೂಡ ಬದ ಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಗತ್ಯವಿರುವ ಕೊಠಡಿಗಳು
ಬೆಳ್ತಂಗಡಿಗೆ 23, ಮೂಡುಬಿದಿರೆಗೆ 19, ಮಂಗಳೂರು ದಕ್ಷಿಣಕ್ಕೆ 13, ಮಂ. ಉತ್ತರಕ್ಕೆ 16, ಬಂಟ್ವಾಳಕ್ಕೆ 216, ಪುತ್ತೂರಿಗೆ 201 ಹಾಗೂ ಸುಳ್ಯಕ್ಕೆ 18 ಸೇರಿ ಜಿಲ್ಲೆಗೆ 508 ಕೊಠಡಿಯ ಆವಶ್ಯಕತೆಯಿದೆ. ಹಾಗೆಯೇ ಬೈಂದೂರಿಗೆ 13, ಕುಂದಾಪುರಕ್ಕೆ 32, ಬ್ರಹ್ಮಾವರಕ್ಕೆ 43, ಉಡುಪಿಗೆ 31, ಕಾರ್ಕಳಕ್ಕೆ 30 ಸೇರಿ 149 ಕೊಠಡಿ ಉಡುಪಿ ಜಿಲ್ಲೆಗೆ ಆವಶ್ಯಕತೆಯಿದೆ. ಉಭಯ ಜಿಲ್ಲೆಗೆ 657 ಕೊಠಡಿ ಆವಶ್ಯಕತೆಯಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಉಭಯ ಜಿಲ್ಲೆಗೆ 490 ಕೊಠಡಿ ಮಂಜೂರಾಗಿದ್ದು, ತಾಂತ್ರಿಕ ಕಾರಣದಿಂದ ಕೆಲವು ಕೊಠಡಿ ಕಾಮಗಾರಿ ಆರಂಭವಾಗಿಲ್ಲ ಮತ್ತು ಹೊಸದಾಗಿ ಕೊಠಡಿ ಹಂಚಿಕೆ ಆಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನಿಷ್ಠ ಎರಡು ತಿಂಗಳು
ಅಕ್ಟೋಬರ್ ಅಂತ್ಯದ ವರೆಗೂ ವಿವೇಕ ಕೊಠಡಿಗಳು ಶಾಲೆಗೆ ಲಭ್ಯವಾಗುವುದಿಲ್ಲ. ಕೊಠಡಿಗಳ ಕಾಮಗಾರಿ ಅಂತಿಮ ಹಂತದಲ್ಲಿದ್ದು, ತಾಂತ್ರಿಕ ಕಾರಣದಿಂದ ಕೆಲವು ತಿಂಗಳು ಕಾಮಗಾರಿ ನಡೆದಿಲ್ಲ. ಆದಷ್ಟು ಬೇಗ ಕೊಠಡಿ ನಿರ್ಮಿಸಿಕೊಡಿ ಎಂಬ ಬೇಡಿಕೆ ಶಾಲೆಗಳಿಂದ ಬರುತ್ತಿದ್ದರೂ ಅನುದಾನದ ಕೊರತೆಯಿಂದ ಕಾಮಗಾರಿ ವೇಗವಾಗಿ ಸಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮ*ಹತ್ಯೆ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.