![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 20, 2023, 3:09 PM IST
ಕುಷ್ಟಗಿ: ಭೂ ಒಡೆತನ ಯೋಜನೆಯಲ್ಲಿ ಭೂ ರಹಿತ 15 ಜನ ಅರ್ಹ ಫಲಾನುಭವಿಗಳಿಗೆ 30 ಎಕರೆ ಕೃಷಿಗೆ ಯೋಗ್ಯವಲ್ಲದ ಜವಳು ಜಮೀನು ಹಂಚಿಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಈ ಯೋಜನೆಯಡಿ ಪರಿಶಿಷ್ಟ ಜಾತಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಘಟಕ ವೆಚ್ಚ ಮಿತಿಯೊಳಗೆ ಕನಿಷ್ಠ 2 ಎಕರೆ ಖುಷ್ಕಿ 1 ಎಕರೆ ನೀರಾವರಿ ಎಂದು ಖರೀಧಿಸಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರ ಹೆಸರಿನಲ್ಲಿ ನೊಂದಾಯಿಸಲಾಗಿದೆ. ಈ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ ಅರ್ಹರಿಗೆ ಭೂಮಿಯ ಮಂಜೂರಾತಿಯ ಅಧಿಕಾರ ಜಿಲ್ಲಾಧಿಕಾರಿಗೆ ವಹಿಸಲಾಗಿತ್ತು.
ಈ ಪ್ರಕರಣದಲ್ಲಿ ಕ್ಯಾದಿಗುಪ್ಪ ಸೀಮಾದಲ್ಲಿ ಸ.ನಂ. 148 ಹಾಗೂ 149 ರಲ್ಲಿ 15 ಜನ ಅರ್ಹ ಫಲಾನುಭವಿಗಳಿಗೆ ನೀರಾವರಿ 1 ಎಕರೆ ಕ್ಷೇತ್ರ, ಖುಷ್ಕಿ 2 ಎಕರೆ ಕ್ಷೇತ್ರ, ಕೆಲವರಿಗೆ ಒಂದೂವರೆ ಎಕರೆ 30 ಎಕರೆ ಮಂಜೂರಾತಿ ಮಾಡಲಾಗಿದೆ. ಸದರಿ ಜಮೀನು ಮುಳ್ಳು ಕಂಟಿ ಬೆಳೆಯದ ಜವಳು ಭೂಮಿ ಇದಾಗಿದ್ದು ಕೃಷಿ ಮಾಡಲು ಯೋಗ್ಯವಾಗಿಲ್ಲ.
ನೀರಾವರಿ ಗೋಲಮಾಲ್:
ಇದರಲ್ಲಿ 5 ಜನ ಫಲಾನುಭವಿಗಳಿಗೆ ಭೂಮಿಯ ಮೌಲ್ಯ ಹೆಚ್ಚಿಸಿ, ಹೆಚ್ಚಿನ ಅನುದಾನ ದುರುಪಯೋಗಿಸಿಕೊಳ್ಳಲು, ಈ ಜಮೀನಿಲ್ಲಿ ಕೊಳವೆ ಬಾವಿ, ಪಂಪ್ ಸೆಟ್ ಸಹ ಮೋಟಾರ್ ತೋರಿಕೆಗಾಗಿ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದೇ ಫಲಾನುಭವಿಯೊಂದಿಗೆ ಫೊಟೋ ಶೂಟ್ ಮುಗಿಯುತ್ತಿದ್ದಂತೆ ಕೊಳವೆ ಬಾವಿಯಲ್ಲಿ ಇಳಿಸಿದ ಮೋಟಾರ್ ತೆಗೆದುಕೊಂಡು ಹೋಗಿದ್ದಾರೆ.
ಈ ಪ್ರಕರಣದಲ್ಲಿ ಗೋಲಮಾಲ್ ನಡೆದಿದ್ದಾರೆ ಎಂಬುದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್ ಅವರ ಆರೋಪ.
ಸಾಲದ ಹೊರೆ:
ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗೆ ನೀರಾವರಿ ಆಗಿದ್ದಲ್ಲಿ ಘಟಕ ವೆಚ್ಚ15 ಲಕ್ಷ ಇದ್ದು ಇದರಲ್ಲಿ ತಲಾ ಶೇ.50 ರಾಜ್ಯ ಸರ್ಕಾರ ಹಾಗೂ ಫಲಾನುಭವಿ ಪಾವತಿಸಬೇಕಿದೆ. ಅರ್ಹ ಫಲಾನುಭವಿಗೆ ಶೇ.50 ರಷ್ಟು ಪಾವತಿಸಲು 10 ವರ್ಷ ಶೇ.6 ಆಧಾರದಲ್ಲಿ ಮರಳಿ ಪಾವತಿಸಬೇಕು. ಈ ಪ್ರಕರಣದಲ್ಲಿ ಈ ಭೂಮಿಯಲ್ಲಿ ಏನು ಬೆಳೆಯಲು ಸಾದ್ಯ? ಫಲಾನುಭವಿಗೆ ಜಮೀನು ಸಿಕ್ಕ ಖುಷಿ ಈಗಿಲ್ಲ ಶೇ.6 ಮೊತ್ತ ವಾಪಸ್ಸು ಕಟ್ಟ ಬೇಕಿದೆ. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಇದರ ಬಗ್ಗೆ ವ್ಯಾಪಕ ತನಿಖೆಯಿಂದ ಈ ರೈತರಿಗೆ ನ್ಯಾಯ ಕಲ್ಪಿಸಬೇಕೆಂದು ನಜೀರಸಾಬ್ ಮೂಲಿಮನಿ ಒತ್ತಾಯಿಸಿದ್ದಾರೆ.
-ಮಂಜುನಾಥ ಮಹಾಲಿಂಗಪುರ
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.