Prakash Raj: ಚಂದ್ರನ ಮೇಲಿನ ʼಚಾಯಿವಾಲಾʼನ ಫೋಟೋ ಹಂಚಿಕೊಂಡ ಪ್ರಕಾಶ್‌ ರಾಜ್!

ಚಂದ್ರಯಾನ-3 ಬಗ್ಗೆ ಪ್ರಕಾಶ್‌ ರಾಜ್‌ ವ್ಯಂಗ್ಯ ಟ್ವೀಟ್

Team Udayavani, Aug 21, 2023, 9:59 AM IST

TDY-2

ಬೆಂಗಳೂರು: ತನ್ನ ನಟನೆಯಿಂದ ಬಹುಭಾಷೆಯಲ್ಲಿ ಮಿಂಚಿರುವ ನಟ ಪ್ರಕಾಶ್‌ ರಾಜ್‌ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ನಟನೆ ಬಗ್ಗೆ ಎರಡು ಮಾತಿಲ್ಲ. ಆದರೆ ಅವರ ವಿಚಾರಧಾರೆ ಬಗ್ಗೆ ಅನೇಕರು ವಿರೋಧವಾಗಿದ್ದಾರೆ.

ರಾಜಕೀಯವಾಗಿ ಅವರ ಅಭಿಪ್ರಾಯಗಳನ್ನು ಟೀಕೆ ಮಾಡುವವರು ಅನೇಕರಿದ್ದಾರೆ. ಯಾವ ವಿವಾದ ಬಂದರೂ ನಟ ಪ್ರಕಾಶ್‌ ರಾಜ್‌ ಎಲ್ಲದಕ್ಕೂ ಉತ್ತರವನ್ನು ತನ್ನ ಖಾರವಾದ ಟ್ವೀಟ್‌ ಗಳಿಂದಲೇ ಪ್ರತಿಕ್ರಿಯೆ ನೀಡುತ್ತಾರೆ.

ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ʼಚಾಯಿವಾಲಾʼ ಎಂದು ಹೇಳುವ ಮೂಲಕ ಅವರು ದೇಶವನ್ನು ಮಾರುತ್ತಿದ್ದಾರೆ ಎಂದು ಪ್ರಧಾನಿ ಅವರನ್ನು ಟ್ವೀಟ್‌ ವೊಂದರ ಮೂಲಕ ಟೀಕಿಸಿದ್ದರು.

ಇಡೀ ದೇಶವೇ ಭಾರತದ ಕನಸು  ʼ ಚಂದ್ರಯಾನ-3ʼಯ ಯಶಸ್ಸಿಗೆ ಕಾಯುತ್ತಿದೆ. ಇನ್ನೇನು ಎರಡು ದಿನಗಳಲ್ಲಿ ಆ ಕನಸು ಪೂರ್ಣಗೊಳ್ಳಲಿದೆ. ಆ.23 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಚಂದ್ರಯಾನ-3 ಯಶಸ್ವಿಗೊಳ್ಳಲಿದೆ.

ವಿಜ್ಞಾನಿಗಳು ಹಾಗೂ ಇಸ್ರೋವಿನ ಈ ಕನಸಿನ ʼಚಂದ್ರಯಾನ-3ʼ ಬಗ್ಗೆ ನಟ ಪ್ರಕಾಶ್‌ ರಾಜ್‌ ಮಾಡಿರುವ ಟ್ವೀಟ್‌ ವೊಂದು ವಿವಾದಕ್ಕೀಡಾಗಿದೆ. ಚಂದ್ರಯಾನ-3 ಯನ್ನು ʼಚಾಯಿ ವಾಲಾʼ ನಿಗೆ ಹೋಲಿಸಿದಂತೆ ಟ್ವೀಟ್‌ ವೊಂದನ್ನು ಪ್ರಕಾಶ್‌ ರಾಜ್‌ ಮಾಡಿದ್ದಾರೆ.

ಕಾರ್ಟೂನ್‌ ರಚಿತ ಒಬ್ಬ ವ್ಯಕ್ತಿ ಚಹಾವನ್ನು ಮಗಚುವ ಫೋಟೋವೊಂದನ್ನು ಹಾಕಿ “ತಾಜಾ ಸುದ್ದಿ ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ”ವೆಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್‌ ನ್ನು ಅನೇಕರು ಟೀಕಿಸಿದ್ದಾರೆ. ಭಾರತದ ಹೆಮ್ಮೆಯಾಗಿರುವ ʼಚಂದ್ರಯಾನ-3ʼ ಬಗೆಗಿನ ಇಂತಹ ಟ್ವೀಟ್‌ ಗೆ ನೆಟ್ಟಿಗರು ಗರಂ ಆಗಿದ್ದಾರೆ.

ಇದು “ಕುರುಡು ದ್ವೇಷ’ʼ ವೆಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ಪ್ರಕಾಶ್ ಜೀ, ಈ ಚಂದ್ರಯಾನ್ ಮಿಷನ್ ಇಸ್ರೋದಿಂದ ಬಂದದ್ದು ಬಿಜೆಪಿಯಿಂದಲ್ಲ. ಅದು ಯಶಸ್ವಿಯಾದರೆ ಅದು ಯಾವುದೇ ಪಕ್ಷಕ್ಕೆ ಅಲ್ಲ ಭಾರತಕ್ಕೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಇದು ಐತಿಹಾಸಿಕ ಕ್ಷಣವಾಗಿದೆ. ಇಂತಹ ಸಾಧನೆ ಮಾಡುತ್ತಿರುವವರಲ್ಲಿ ನಾವು ನಾಲ್ಕನೇಯವರು. ಇದರಲ್ಲಿರುವುದು ನಮ್ಮದೇ ಜನ ಹಾಗೂ ತಂತ್ರಜ್ಞಾನ. ಮೋದಿಜಿಯ ಮೇಲಿನ ಕುರುಡು ದ್ವೇಷದಲ್ಲಿ #ಚಂದ್ರಯಾನ3 ಅನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು. ಇದನ್ನು ಯಶಸ್ವಿಗೊಳಿಸಲು ತಮ್ಮ ಜೀವಮಾನದ ವರ್ಷಗಳನ್ನು ಹಾಕಿರುವ ನಮ್ಮ ವಿಜ್ಞಾನಿಗಳನ್ನು ನೀವು ಅಪಹಾಸ್ಯ ಮಾಡುತ್ತಿದ್ದೀರಿ ಎಂದು ಮತ್ತೊಬ್ಬರು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್‌ ನಾಯಕ ಸತ್ಯೇಂದ್ರ ಜೈನ್‌ ವಿರುದ್ಧ ತನಿಖೆ

Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್‌ ನಾಯಕ ಸತ್ಯೇಂದ್ರ ಜೈನ್‌ ವಿರುದ್ಧ ತನಿಖೆ

Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…

Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…

Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್‌

Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್‌

army

Kulgam; ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರ ಹತ್ಯೆ: ಯೋಧ ಹುತಾತ್ಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.