Karachi To Noida: ನಮಾಜ್‌ನಿಂದ ಮಂದಿರದವರೆಗೆ.. ಹಾಡಾಗಿ ಬಂತು ಸಚಿನ್ – ಸೀಮಾ ಪ್ರೇಮಕಥೆ
Team Udayavani, Aug 21, 2023, 11:05 AM IST
ಮುಂಬಯಿ: ಪಬ್ ಜೀ ಮೂಲಕ ಪರಿಚಯವಾಗಿ ತನ್ನ ಪ್ರಿಯಕರ ಸಚಿನ್ ಗಾಗಿ ಅಕ್ರಮವಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ನ ಸೀಮಾ ಹೈದರ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸೀಮಾ ಹೈದರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಕ್ಕಾಗಿ ಅಡಿಷನ್ ನೀಡಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು.
ಸೀಮಾ ಹೈದರ್ – ಸಚಿನ್ ಪ್ರೇಮ ಕಥೆ ಆಧಾರಿತ ಸಿನಿಮಾಕ್ಕೆ ʼ ಕರಾಚಿ ಟು ನೋಯ್ಡಾʼ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಸಿನಿಮಾದ ಮೊದಲ ಹಾಡಿನ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ʼ ಚಲ್ ಪಡೆ ಹೇ ಹಮ್ʼ (Chal Pade Hain Hum) ವಿಡಿಯೋ ಹಾಡು ರಿಲೀಸ್ ಆಗಿದೆ.
ಹಾಡಿನಲ್ಲಿ ಸೀಮಾ ಹೈದರ್ ಅವರ ಪಾತ್ರವನ್ನು ಫರ್ಹೀನ್ ಫಲಕ್ ಅವರು ನಿಭಾಯಿಸಿದ್ದಾರೆ. ಪಾಕ್ ನ ತನ್ನ ಗಂಡನ ಮನೆಯಲ್ಲಿ ಪಬ್ ಜೀ ಆಡುತ್ತಾ ಭಾರತದ ನೋಯ್ಡಾದ ಸಚಿನ್ ಗಾಗಿ ಅಕ್ರಮವಾಗಿ ಗಡಿದಾಡಿ ಬರುವ ಕಥೆಯನ್ನು ದೃಶ್ಯವಾಗಿ ತೋರಿಸಲಾಗಿದೆ.
ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬರುವ ಮುನ್ನ ಆಕೆಯ ಮನಸ್ಸಿನಲ್ಲಾದ ತಳಮಳ, ಭೀತಿ ಹಾಗೂ ಗೊಂದಲವನ್ನು ಅಮಿತ್ ಜಾನಿ ಅವರ ಸಾಹಿತ್ಯ ಹಾಗೂ ಪ್ರೀತಿ ಸರೋಜ್ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಕಟ್ಟಿಕೊಡುತ್ತದೆ. ನಮಾಜ್ ಮಾಡುತ್ತಾ ಬೆಳೆದ ಸೀಮಾ ಹೈದರ್, ಹಿಂದೂವಾಗಿ ಗಂಗೆಯ ತಟದಲ್ಲಿ ಕೂರುವ, ದೇವರಿಗೆ ಕೈಮುಗಿಯುವ ದೃಶ್ಯ ಹಾಗೂ ಭಾರತದ ಧ್ವಜವನ್ನು ಹಿಡಿದು ರಾರಾಜಿಸುವ ದೃಶ್ಯವನ್ನು ತೋರಿಸಲಾಗಿದೆ.
ಈ ಸಿನಿಮಾವನ್ನು ಜಯಂತ್ ಸಿನ್ಹಾ, ಭರತ್ ಸಿಂಗ್ ನಿರ್ದೇಶನ ಮಾಡುತ್ತಿದ್ದು, ಅಮಿತ್ ಜಾನಿ ನಿರ್ಮಾಣ ಮಾಡುತ್ತಿದ್ದಾರೆ.
ದೇಶದ್ಯಂತ ನೂರಾರು ರಂಗಭೂಮಿ ಕಲಾವಿದರನ್ನು ಚಿತ್ರಕ್ಕಾಗಿ ಆಡಿಷನ್ ನಡೆಸಲಾಗಿತ್ತು. ಸಚಿನ್ ಮೀನಾ ಪಾತ್ರಕ್ಕಾಗಿ ಗುಲಾಮ್ ಹೈದರ್ ಆಡಿಷನ್ ನೀಡಿದ್ದರು. ಸೀಮಾ ಹೈದರ್ ಹಾಗೂ ಸಚಿನ್ ಅವರ ಆರ್ಥಿಕ ಸಂಕಷ್ಟದ ಕಾರಣದಿಂದ ಅವರನ್ನು ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಿರ್ಮಾಪಕ ಅಮಿತ್ ಜಾನಿ ಹೇಳಿದ್ದರು. ಆದರೆ ಸೀಮಾ ಹೈದರ್ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ಇದುವರೆಗೆ ಬಹಿರಂಗವಾಗಿಲ್ಲ.
ಈ ಮಧ್ಯ ವಿರೋಧದ ನಡುವೆಯೂ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಲು ಅಮಿತ್ ಜಾನಿ ಆಗಸ್ಟ್ 27 ರಂದು ಮುಂಬೈಗೆ ಹೋಗಲಿದ್ದಾರೆ. ಸದ್ಯ ಈ ಹಾಡು 500 ಕ್ಕೂ ಹೆಚ್ಚಿನ ಮ್ಯೂಸಿಕ್ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.