![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 21, 2023, 11:34 AM IST
ಕೊಚ್ಚಿ: ಅಪ್ರಾಪ್ತೆ ಮೇಲೆ ದೈಹಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಾಲಿವುಡ್ ನಿರ್ದೇಶಕನೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಿನಿಮಾದಲ್ಲಿ ನಟನೆಯ ಅವಕಾಶ ನೀಡುವುದಾಗಿ ಅಪ್ರಾಪ್ತೆಯನ್ನು ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಬಂದ ದೂರಿನ ಹಿನ್ನೆಲೆಯಲ್ಲಿ ಮಲಯಾಳಂ ನಿರ್ದೇಶಕ ಜಾಸಿಕ್ ಅಲಿ (36) ಯನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತೆಗೆ ನಟನೆಯಲ್ಲಿ ಅವಕಾಶ ನೀಡುತ್ತೇನೆ ಎಂದು ವಿವಿಧ ಸ್ಥಳಕ್ಕೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Karachi To Noida: ನಮಾಜ್‌ನಿಂದ ಮಂದಿರದವರೆಗೆ.. ಹಾಡಾಗಿ ಬಂತು ಸಚಿನ್ – ಸೀಮಾ ಪ್ರೇಮಕಥೆ
ದೂರಿನ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ಕುರುವಂಗಡ್ ಮೂಲದ ಜಾಸಿಕ್ ಅಲಿಯನ್ನು ನಡಕ್ಕಾವುವಿನ ಮನೆಯೊಂದರಿಂದ ಬಂಧಿಸಲಾಗಿದೆ. ದೂರು ದಾಖಲಾದ ದಿನದಿಂದ ನಿರ್ದೇಶಕ ಜಾಸಿಕ್ ಪೊಲೀಸರಿಂದ ಪರಾರಿ ಆಗಲು ಯತ್ನಿಸಿದ್ದು, ನಾನಾ ಸ್ಥಳದಲ್ಲಿ ಅಡಗಿ ಕೂತಿದ್ದಾರೆ. ಪೊಲೀಸರು ವಿವಿಧ ಸ್ಥಳದಲ್ಲಿ ಹುಡುಕಾಟ ನಡೆಸಿ ಕೊನೆಗೂ ನಡಕ್ಕಾವುವಿನ ಮನೆಯೊಂದರಲ್ಲಿ ಬಂಧಿಸಿದ್ದಾರೆ.
ಪೋಕ್ಸೋ ಆರೋಪದಡಿ ಆತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ವರ್ಷ ತೆರೆಕಂಡ ಮಲಯಾಳಂ ಸಿನಿಮಾ ‘ಬೈನರಿ’ಯನ್ನು ಜಾಸಿಕ್ ಅಲಿ ನಿರ್ದೇಶಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.