UV Fusion: ಸಮಯದ ಪಾಲನೆ ಮಾಡಿ


Team Udayavani, Aug 21, 2023, 3:55 PM IST

12–uv-fusion

ಬೆಳಗಿನ ವೇಳೆ ಸಮಯ ವೇಗವಾಗಿ ಓಡ್ತಾ ಇರುತ್ತೆ. ಒಂದು ನಿಮಿಷ ಕೂಡ ಆಕಡೆ ಈಕಡೆ ನೋಡೋಕೆ ಪುರುಸೊತ್ತಿರಲ್ಲ ಅಂತಾಳೆ ಅಮ್ಮ.

ಹೊತ್ತೇ ಹೋಗಲ್ಲ ಏನ್‌ ಮಾಡಬೇಕು ಏನು? ಅಂತಾರೆ ಮುದುಕರು.

ಯಾಕ್ರೀ ಇಷ್ಟು ಲೇಟು? ನಿಮಗೆ ಸಮಯ ಪ್ರಜ್ಞೆ ಇಲ್ವಾ ? ಅಂತಾರೆ ಅಧಿಕಾರಿ. ಅಮ್ಮನಿಗೂ ಟೈಮ್‌ ಓಡುತ್ತೆ, ಮುದುಕರಿಗೆ ಟೈಮ್‌ ತೆವಳುತ್ತೆ, ಅಧಿಕಾರಿಗೆ ಟೈಮ್‌ ಬಹಳ ಮುಖ್ಯ, ಈ ಮೂವರಿಗೂ ಇರುವುದು ಒಂದೇ ಟೈಮ್‌ ಆದರೂ ಅವರವರ ಕೆಲಸಕ್ಕೆ ಅನುಗುಣವಾಗಿ ಕಾಲ ಚಲಿಸುತ್ತದೆ. ನಿರಂತರ ಚಲನೆ ಸಮಯದ ಲಕ್ಷಣ ಅದು ಯಾರಿಗೂ ಕಾಯುವುದಿಲ್ಲ ನಿಲ್ಲುವುದಿಲ್ಲ. ಆದ್ದರಿಂದ ನಾವೆಲ್ಲರೂ ಸಮಯವನ್ನು ಬಹಳ ಜಾಗರೂಕತೆಯಿಂದ ಗಮನಿಸಬೇಕು. ಇದನ್ನೇ ಸಮಯ ಪ್ರಜ್ಞೆ ಎನ್ನುವುದು.

ಹಲವು ವರ್ಷಗಳ ಹಿಂದೆ ಹಾಲೆಂಡ್ನಲ್ಲಿ ಹಾನ್ಸ್‌ ಎಂಬ ಹುಡುಗನಿದ್ದ. ಒಂದು ದಿನ ಸಂಜೆ ಅವನು ಎಂದಿನಂತೆ ಮನೆಗೆ ಬರಲಿಲ್ಲ ಮಾರನೆಯ ದಿನ ಅವನು ಇಡೀ ಊರಿನ ಕಣ್ಮಣಿಯಾದ. ಕಾರಣ ಇಷ್ಟೇ , ಅವನು ಊರಿನ ಅಂಚಿನಲ್ಲಿದ್ದ ಕೆರೆಯ ಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು ಅದು ದೊಡ್ಡ ಆಗುವ ಸೂಚನೆಯನ್ನು ಕಂಡುಕೊಂಡ ಹಾನ್ಸ್‌ ಬಿರುಕಿಗೆ ಅಡ್ಡಲಾಗಿ ತನ್ನ ಕೈಯನ್ನು ಅನಂತರ ತನ್ನನ್ನೇ ಅಡ್ಡಲಾಗಿಟ್ಟುಕೊಂಡ. ರಾತ್ರಿ ಕಳೆದು ಬೆಳಗಾದಾಗ ಈ ವಿಷಯ ಎಲ್ಲರಿಗೂ ತಿಳಿಯಿತು ಸಮಯಪ್ರಜ್ಞೆಯನ್ನು ಎಲ್ಲರೂ ಹೊಗಳಿದರು.

ಉಳಿಸಿದ ಸಮಯವೇ ಗಳಿಸಿದ ಸಮಯ. ನಿಲ್ಲದೆ ನಡೆಯುವ ಸಮಯದ ಮೌಲ್ಯ ಬಲು ದುಬಾರಿ ಅದನ್ನು ನಿಯಂತ್ರಿಸಲು ತಿಳಿಯದಿ¨ªಾಗ, ಸಮಯದ ನಿರ್ವಹಣೆ ಕಲಿತರೆ ಮಾತ್ರ ಬದುಕು ಆಗುವುದು ಸರಳ ಸುಂದರ.

ನಾವು ಎಲ್ಲೇ ಇದ್ದರೂ ನಮ್ಮ ಒಂದು ದಿನದಲ್ಲಿ 24 ಗಂಟೆ, ಒಂದು ಗಂಟೆಯಲ್ಲಿ 60 ನಿಮಿಷ, ಒಂದು ನಿಮಿಷದಲ್ಲಿ 60 ಸೆಕೆಂಡ್‌ ಇಷ್ಟೇ. ಈ ಒಂದು ದಿನವನ್ನು ನಾವು ಹೇಗೆ ಕಳೆಯುತ್ತೇವೆ, ಏನು ಮಾಡುತ್ತೇವೆ ಎನ್ನುವುದು ನಮ್ಮ ಬದುಕಿನ ಬೆಲೆಯನ್ನು ನಿರ್ಧರಿಸುತ್ತದೆ.

ಸಮಯ ಪ್ರಜ್ಞೆ ಮತ್ತು ಸಮಯ ಪಾಲನೆಗೆ ಮಹತ್ವ ಕೊಡದವರು ಸಾಮಾನ್ಯರಲ್ಲಿ ಅತಿ ಸಾಮಾನ್ಯರು ಎನಿಸಿಕೊಳ್ಳುತ್ತಾರೆ. ಶಿಸ್ತಿನ ಒಂದು ಅಂಗ ಎನಿಸಿಕೊಂಡಿರುವ ಸಮಯ ಪಾಲನೆ. ವಿದ್ಯಾರ್ಥಿ ದೆಸೆಯಲಂತು ಬೇಕೇ ಬೇಕು. ಯಾರು ಇದನ್ನು ಯಶಸ್ವಿಯಾಗಿ ಪಾಲಿಸಿಕೊಂಡು ಹೋಗುತ್ತಾರೋ ಅಂತವರು ಜೀವನದಲ್ಲಿ ಯಶಸ್ಸು ಪಡೆಯುತ್ತಾ ಹೋಗುತ್ತಾರೆ.

ಎಂದು ನಮ್ಮ ಸರ್‌ ಯಾವಾಗ್ಲೂ ಹೇಳ್ತಿದ್ರು. ಸಾಧ್ಯವಾದಷ್ಟು ಜೀವನದಲ್ಲಿ ಸಮಯದ ಅತ್ಯುತ್ತಮವಾದ ಸದುಪಯೋಗವನ್ನು ನಾವು ಮಾಡಿಕೊಳ್ಳಬೇಕು. ಕಳೆದುಕೊಂಡ ಸಂಪತ್ತನ್ನು ಮತ್ತೆ ಗಳಿಸಬಹುದು ಆದರೆ ಕಳೆದುಹೋದ ಸಮಯವನ್ನು ಮತ್ತೆ ಗಳಿಸುವುದು ಸಾಧ್ಯವಾಗದು. ಆದ್ದರಿಂದ ಉತ್ತಮವಾಗಿ ಸಮಯ ಪಾಲನೆಯನ್ನು ಮಾಡಿಕೊಂಡು, ಉತ್ತಮ ಜೀವನವನ್ನು ಕಟ್ಟಿಕೊಳ್ಳೋಣ.

ಎನ್ನುವ ಆಶಯದೊಂದಿಗೆ ನಿಮ್ಮೊಳಗೊಬ್ಬ…

-ಕಾರ್ತಿಕ್‌ ಹಲಿಜೋಳ, ಎಂ.ಎಂ. ಕಾಲೇಜು, ಶಿರಸಿ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

complaint

Kundapura: ಹಲ್ಲೆ, ಗಾಯ; ದೂರು ದಾಖಲು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.