Kalaburagi; ಪೂಜೆ ಹೊತ್ತಲ್ಲಿ ಲಿಂಗದ ಮೇಲೆ ನಾಗರ ಹಾವು!
Team Udayavani, Aug 21, 2023, 11:46 PM IST
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ವಡ್ಡಳ್ಳಿ ಗ್ರಾಮದ ಪರಮಾನಂದ ದೇವಸ್ಥಾನದಲ್ಲಿ ನಾಗರಪಂಚಮಿ ನಿಮಿತ್ತ ನಡೆಯುತ್ತಿದ್ದ ವಿಶೇಷ ಪೂಜೆ ಸಮಯದಲ್ಲಿ ಲಿಂಗದ ಮೇಲೆ ನಾಗರಹಾವು ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿತು.
ಪರಮಾನಂದ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಲಿಂಗ ನೀರಿನಿಂದ ತೊಳೆದು ವಿಭೂತಿ, ಕುಂಕುಮ, ಪತ್ರೆ ಹಾಕಿ ಪೂಜೆ ಮಾಡುವ ಸಮಯದಲ್ಲಿ ಸಣ್ಣದಾದ ಹಾವು ಪೂಜೆ ಮಂತ್ರದ ನಡುವೆ ಆಗಮಿಸಿ ಲಿಂಗದ ಮೇಲೆ ಹಾದು ಹೋಯಿತು. ದೇವಸ್ಥಾನದಲ್ಲಿ ಅರ್ಚಕರು, ಕೆಲವು ಭಕ್ತರ ನಡುವೆ ಹಾವು ಆಗಮಿಸಿ ಲಿಂಗದ ಮೇಲೆ ಹಾದು ಹೋಗಿರುವುದು ನಾಗರಪಂಚಮಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿತು.
ಚೇಳು ಹಿಡಿದು ಪಂಚಮಿ ಆಚರಣೆ!
ಗುರುಮಿಠಕಲ್: ನಾಗರಪಂಚಮಿ ನಿಮಿತ್ತ ಸೋಮವಾರ ಬೆಟ್ಟಹತ್ತಿ ಕೊಂಡಮ್ಮ ದೇವಿ ದರ್ಶನ ಪಡೆದ ಸಾವಿರಾರು ಭಕ್ತರು, ಚೇಳುಗಳನ್ನೂ ಹಿಡಿದು ಸಂಭ್ರಮಿಸಿದರು.
ಯಾದಗಿರಿ ಜಿಲ್ಲೆ ಗುರುಮಿಠ ಕಲ್ ತಾಲೂಕಿನ ಕಂದಕೂರು ಗ್ರಾಮದ ಕೊಂಡಮ್ಮ ದೇವಿಯ ಬೆಟ್ಟದ ಮೇಲೆ ಈ “ಚೇಳು ಜಾತ್ರೆ’ ನಡೆಯುತ್ತದೆ. ನಾಗರ ಪಂಚಮಿ ದಿನ ಮಾತ್ರ ಇಲ್ಲಿ ಚೇಳುಗಳು ಕಚ್ಚವುದಿಲ್ಲ. ಈ ಹಿನ್ನೆಲೆಯಲ್ಲಿ ಜನರು ಅದನ್ನು ಹಿಡಿದು ಮೈಮೇಲೆ ಹಾಕಿಕೊಂಡು ಸಂಭ್ರಮಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.