Chandrayaan-3 ಶೋಧವಷ್ಟೇ ಅಲ್ಲ, ಆಯಾಮಗಳು ಅಗಾಧ
Team Udayavani, Aug 22, 2023, 7:05 AM IST
ಮಣಿಪಾಲ: ಚಂದ್ರಯಾನ -3 ಚಂದಿರನ ದಕ್ಷಿಣಧ್ರುವದಲ್ಲಿ ಇಳಿಯುವ ದಿನ ಹತ್ತಿರವಾಗುತ್ತಿರುವಂತೆ ಇದೊಂದು ರೀತಿಯಲ್ಲಿ ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟದಂತೆ ದೇಶಾದ್ಯಂತ ಕಾತರ, ರೋಮಾಂಚನ ಮೂಡಿಸಲಾರಂಭಿಸಿದೆ.
ಚಂದ್ರಯಾನ -2 ವಿಫಲವಾದ ಬಳಿಕ ಮತ್ತೆ ಇನ್ನೊಂದು ಯಾನ ಕೈಗೊಂಡಿರುವುದು ಇಸ್ರೋದ ದೃಢ ಸಂಕಲ್ಪ ಮತ್ತು ಛಲಕ್ಕೆ ನಿದರ್ಶನ. ಒಟ್ಟು 600 ಕೋಟಿ ರೂ.ಗಳಿಗೂ ಅಧಿಕ ಹಣ ಹೂಡಿಕೆ ಮಾಡಿ ಇಸ್ರೋ ಮತ್ತು ಅದರ ಹಿಂದಿರುವ ಕೇಂದ್ರ ಸರಕಾರ ಚಂದ್ರಯಾನ -3 ಕೈಗೊಂಡಿರುವುದರ ಹಿಂದಿನ ಉದ್ದೇಶ ಕೇವಲ ಚಂದ್ರ ಶೋಧ-ಸಂಶೋಧನೆ ಮಾತ್ರವೇ? ಚಂದ್ರಯಾನಕ್ಕೆ ಏಕಿಷ್ಟು ಮಹತ್ವ? ಇದು ಬರೀ ಪ್ರತಿಷ್ಠೆಯ ಸಂಕೇತವೇ? ಹಾಗಾದರೆ ಚಂದ್ರ ಶೋಧ ಏಕೆ ಇಷ್ಟು ಮಹತ್ತರವಾದುದು?
ಬಾಹ್ಯಾಕಾಶ ಅತ್ಯುಚ್ಚ ತಂತ್ರಜ್ಞಾನ ವೇದಿಕೆ
ಬಾಹ್ಯಾಕಾಶ ಸಂಶೋಧನೆಗಳು ನಮ್ಮ ದೈನಿಕ ಬದುಕಿಗೂ ಹಲವು ಮಹತ್ತರ ಬದಲಾವಣೆ, ಸೌಲಭ್ಯಗಳನ್ನು ನಮಗೆ ತಿಳಿಯದಂತೆಯೇ ಕೊಟ್ಟಿವೆ. ಇವು ಬಹಳ ಉಪಯೋಗಿ. ಇಸ್ರೊ ಸಾಧಿಸಿದ ತಾಂತ್ರಿಕ ಮುನ್ನಡೆಗಳು ಶಸ್ತ್ರಚಿಕಿತ್ಸೆ, ಕೃತಕ ಅವಯವಗಳು, ಆಹಾರ ಸುರಕ್ಷೆ, ಹವಾ ಮಾನ ಮುನ್ಸೂಚನೆ, ಸಂವಹನ, ರೊಬೊಟಿಕ್ಸ್, ಭೂಗರ್ಭಶಾಸ್ತ್ರ, ಶಾಖ ಮತ್ತು ಬೆಂಕಿ ನಿರೋಧಕ ತಂತ್ರಜ್ಞಾನ, ವಿಮಾನ ಯಾನ, ರಕ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಅನ್ವಯವಾಗಿವೆ. ಇದರ ಜತೆಗೆ ಕಾಲಕಾಲಕ್ಕೆ ಇಸ್ರೊ, ತಂತ್ರಜ್ಞಾನಗಳನ್ನು ಖಾಸಗಿ ಕ್ಷೇತ್ರಕ್ಕೆ, ಶಿಕ್ಷಣ ಸಂಸ್ಥೆಗಳಿಗೆ, ಸಂಶೋಧನ ಸಂಸ್ಥೆಗಳಿಗೆ ಹಸ್ತಾಂತರಿಸುತ್ತದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ನನ್ನು ಯಶಸ್ವಿಯಾಗಿ ಇಳಿಸಲು ಸಾಧ್ಯವಾದರೆ ಅದು ಇನ್ನೊಂದು ಮೈಲಿಗಲ್ಲು. ಊಹೆಗೆ ನಿಲುಕದ ಅವಕಾಶಗಳು ದಕ್ಕಬಹುದು. ಭವಿಷ್ಯದಲ್ಲಿ ಅವುಗಳೂ ಜನಸಾಮಾನ್ಯರ ಪ್ರಯೋಜನಕ್ಕೆ ಒದಗಬಲ್ಲವು.
ಮುಂದಿನ ನಿಲ್ದಾಣ ಚಂದ್ರ
ಜಗತ್ತಿನಾದ್ಯಂತ ರೇಡಿಯೋ ಖಗೋಳಶಾಸ್ತ್ರಜ್ಞರು ಒಂದಲ್ಲ ಒಂದು ದಿನ ಚಂದ್ರನ ಮೇಲೆ ರೇಡಿಯೋ ದೂರದರ್ಶಕ ಸ್ಥಾಪಿಸುವ ಕನಸು ಹೊಂದಿದ್ದಾರೆ. ಶಕ್ತಿಯುತ ರೇಡಿಯೋ ದೂರದರ್ಶಕಗಳು ಇತರ ಎಲೆಕ್ಟ್ರಾನಿಕ್ ಸಂಕೇತಗಳಂತಹ ಬಾಹ್ಯ ಅಡಚಣೆಗಳಿಂದ ಮುಕ್ತ ವಾದ ಕಡೆಯಿಂದ ವಿಶ್ವದ ಆಳ-ಅಗಲದತ್ತ ಇಣುಕಬಲ್ಲವು. ಸದ್ಯ ಭೂಮಿಯಲ್ಲಿ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಂದ್ರನ ಮೇಲೆ ರೇಡಿಯೋ ದೂರದರ್ಶಕ ಸ್ಥಾಪಿಸುವ ಆಲೋಚನೆ ಹಲವು ದೇಶಗಳದ್ದು. ಚಂದ್ರಯಾನ ಯಶಸ್ವಿಯಾದರೆ ಈ ನಿಟ್ಟಿನಲ್ಲಿ ಮಹತ್ವದ ಮುನ್ನಡೆ ಸಿಗಲಿದೆ. ಅಲ್ಲದೆ ಈ ಯಶಸ್ಸು ಮಂಗಳನ ಸಹಿತ ಇತರ ಬಾಹ್ಯಾಕಾಶ ಸಂಶೋಧನೆ, ಯಾನದಂತಹ ಸಾಹಸಕ್ಕೂ ಮಹತ್ತರ ನಾಯಕತ್ವ, ಜ್ಞಾನವನ್ನು ಒದಗಿಸಲಿದೆ.
ಚಂದ್ರನಲ್ಲಿದೆ ಉತ್ತರ
ಸುಮಾರು 440 ಕೋಟಿ ವರ್ಷಗಳ ಹಿಂದೆ ಭೂಮಿ ಮತ್ತು ಚಂದ್ರಕುದಿಯುವ ಉಂಡೆಯಾಗಿದ್ದ ಒಂದೇ ಆಕಾಶಕಾಯದಿಂದ ಹೋಳಾಗಿ ಪ್ರತ್ಯೇಕಗೊಂಡವು. ಹೀಗಾಗಿಯೇ ಭೂಮಿ ಮತ್ತು ಚಂದ್ರನ ಮಧ್ಯೆ ಅಪಾರ ಹೋಲಿಕೆ ಇದೆ. ಆ ಬಳಿಕ ಭೂಮಿಯಲ್ಲಿ ಜೀವ ವಿಕಾಸವಾದರೆ ಚಂದ್ರ ಹಾಗೆಯೇ ಉಳಿಯಿತು. ಹೀಗಾಗಿ ಚಂದ್ರನ ಅಧ್ಯಯನ ಎಂದರೆ ಕೋಟ್ಯಂತರ ವರ್ಷಗಳ ಹಿಂದೆ ಇದ್ದ ಭೂಮಿಯನ್ನು ಅಧ್ಯಯನ ಮಾಡಿದಂತೆಯೇ. ಭೂಮಿಯ ಒಳಗಿನ ರಹಸ್ಯ, ಜೀವ ವಿಕಾಸ ಇತ್ಯಾದಿ ಬಗ್ಗೆ ಚಂದ್ರ ಅಪಾರ ಮಾಹಿತಿಗಳನ್ನು ಮೊಗೆದು ಕೊಡಬಲ್ಲುದು.
ಚಂದ್ರನಿಂದ
ಆರ್ಥಿಕತೆ
ಚಂದ್ರನ ಮೇಲೆ ಮನುಷ್ಯ ತನ್ನ ವಸಾಹತು ಸ್ಥಾಪಿಸು ವುದು, ಅದರ ರಾಜಕೀಯ ಮಹತ್ವ ಇತ್ಯಾದಿ ಇನ್ನೂ ಬೀಜದ ಹಂತದಲ್ಲಿವೆ. ಮುಂದೊಂದು ದಿನ ಅದು ಸಾಧ್ಯ ವಾಗಬಹುದು. ಆಗ ಚಂದ್ರನ ಬಗ್ಗೆ ಹೆಚ್ಚು ಮಾಹಿತಿ, ಜ್ಞಾನ ಉಳ್ಳ ರಾಷ್ಟ್ರಗಳು ಮುಚೂಣಿಯಲ್ಲಿರುತ್ತವೆ.
ಚಂದ್ರ ಆರ್ಥಿಕತೆ ಮೂರು ಆಯಾಮಗಳದ್ದು – ಒಂದನೆಯದು, ಸಾರಿಗೆ ಅಂದರೆ ರಾಕೆಟ್ ಉಡಾವಣೆ, ಮಾನವ ಸಹಿತ ಯಾನಗಳು, ಚಂದ್ರ ಪ್ರವಾಸೋದ್ಯಮ ಇತ್ಯಾದಿ. ಎರಡನೆಯದು, ಚಂದ್ರನ ಬಗೆಗಿನ ಜ್ಞಾನ, ಮಾಹಿತಿಯ ವಾಣಿಜ್ಯಿಕ ಬಳಕೆ. ಮೂರನೆಯದು ಚಂದ್ರನ ಸಂಪನ್ಮೂಲಗಳ ಬಳಕೆ. ಭವಿಷ್ಯದಲ್ಲಿ ಇವು ಕೈಗೂಡಲಿದ್ದು, ಆಗ ಭಾರತಕ್ಕೇ ನಾಯಕ ಸ್ಥಾನ! ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಇಳಿದರೆ ಈ ಸಾಧನೆ ಮಾಡಿದ ಮೊದಲ ದೇಶ ನಮ್ಮದಾಗಲಿದೆ. ಇದು ಹಲವು ದಶಕಗಳ ಕಾಲ ಭಾರತಕ್ಕೆ ಚಂದ್ರ ಶೋಧದಲ್ಲಿ ನಾಯಕತ್ವವನ್ನು ಒದಗಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.