Panaji ಗೋವಾಕ್ಕೆ ಆಗಮಿಸಿದ ರಾಷ್ಟ್ರಪತಿ  ದ್ರೌಪದಿ ಮುರ್ಮು

Team Udayavani, Aug 22, 2023, 5:40 PM IST

GOAPanaji ಗೋವಾಕ್ಕೆ ಆಗಮಿಸಿದ ರಾಷ್ಟ್ರಪತಿ  ದ್ರೌಪದಿ ಮುರ್ಮು

ಪಣಜಿ: ಭಾರತದ ರಾಷ್ಟ್ರಪತಿ  ದ್ರೌಪದಿ ಮುರ್ಮು ರವರು ಮೂರು ದಿನಗಳ ಭೇಟಿಗಾಗಿ ಗೋವಾಕ್ಕೆ ಆಗಮಿಸಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವಾಸ್ಕೊ ಡಾಬೋಲಿಮ್ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ರಾಜ್ಯಸಭಾ ಸದಸ್ಯ ಸದಾನಂದ ಶೇಟ್ ತಾನಾವಡೆ, ಸಾರಿಗೆ ಸಚಿವ ಮಾವಿನ್ ಗೂಡಿನ್ಹೊ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು ಇಂದಿನಿಂದ ಮೊದಲ ಮೂರು ದಿನಗಳ ಭೇಟಿಗಾಗಿ ಗೋವಾಕ್ಕೆ ಆಗಮಿಸಿದ್ದಾರೆ. ಸ್ಮಾರಕಗಳ ಭೇಟಿ, ಪದವಿ ಪ್ರದಾನ ಸಮಾರಂಭಗಳು, ವಿಧಾನಸಭೆಯ ಸದಸ್ಯರಿಗೆ ಮಾರ್ಗದರ್ಶನ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿರುತ್ತದೆ. ರಾಷ್ಟ್ರಪತಿಗಳು ಮಂಗಳವಾರ ಪಣಜಿಯ  ಆಜಾದ್ ಮೈದಾನಕ್ಕೆ ಭೇಟಿ ನೀಡಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ನಂತರ ಪಣಜಿ ಸಮೀಪದ ದೋನಾಪಾವುಲ್‍ನಲ್ಲಿರುವ ರಾಜಭವನಕ್ಕೆ ತೆರಳಿದ್ದು, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಮಂಗಳವಾರ ರಾಷ್ಟ್ರಪತಿಗಳು ಗೋವಾದ ರಾಜಭವನದಲ್ಲಿ ಅವರ ಗೌರವಾರ್ಥವಾಗಿ ಗೋವಾ ಸರ್ಕಾರ ಆಯೋಜಿಸಿರುವ ನಾಗರಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದರು. ಈ ವೇಳೆ ಆಯ್ದ ಫಲಾನುಭವಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸನದ್ ವಿತರಣೆ ಮಾಡಿದರು.

ಬುಧವಾರ ಬೆಳಗ್ಗೆ ಗೋವಾ ವಿಶ್ವವಿದ್ಯಾಲಯದ 34ನೇ ಪದವಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಗೋವಾ ವಿಧಾನಸಭೆಯ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ವಿಧಾನಸಭೆಯ ಸದಸ್ಯರಿಗೂ ಮಾರ್ಗದರ್ಶನ ನೀಡಲಿದ್ದಾರೆ. ರಾಷ್ಟ್ರಪತಿಗಳು ಸಂಜೆ ರಾಜ್ಯದ ಕೆಲ ಗಣ್ಯರನ್ನು ಭೇಟಿ ಮಾಡಲಿದ್ದಾರೆ.

ಬಿಗಿ ಪೋಲಿಸ್ ಬಂದೋಬಸ್ತ್
ಗೋವಾಕ್ಕೆ ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪಣಜಿಯಲ್ಲಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ರಾಷ್ಟ್ರಪತಿಗಳು ಮೂರು ದಿನಗಳ ಕಾಲ ರಾಜಭವನ ಆವರಣದಲ್ಲಿ ತಂಗಲಿದ್ದಾರೆ. ಹಾಗಾಗಿ ಮಾಂಡವಿ ನದಿ, ಅರಬ್ಬೀ ಸಮುದ್ರ , ಅರಮನೆ ಸಂಕೀರ್ಣ ಹಾಗೂ ಜುವಾರಿ ನದಿಯಲ್ಲಿ ನೀರಿನಲ್ಲಿ ಬೋಟಿಂಗ್  ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಗೋವಾ ರಾಜಧಾನಿ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಬಳಕೆಯನ್ನು ನಿಷೇಧಿಸಲಾಗಿದೆ.ಡೊನಾ ಪೌಲಾದಲ್ಲಿರುವ ಪ್ರವಾಸಿ ತಾಣಕ್ಕೆ ಪ್ರವಾಸಿಗರು ಭೇಟಿ ನೀಡಲು ಹಲವಾರು ನಿರ್ಬಂಧ ಹೇರಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

SBI

Chhattisgarh: ಎಸ್‌ಬಿಐ ನಕಲಿ ಶಾಖೆ, ವಂಚನೆ!

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tggg

CJI; ಈಗಲೂ ನಾನೇ ಮುಖ್ಯಸ್ಥ: ವಕೀಲರಿಗೆ ಚಂದ್ರಚೂಡ್‌ ಕ್ಲಾಸ್‌

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

1-jaya

Dubey ಸಮಿತಿ ಬಿಟ್ಟು ಬೊಮ್ಮಾಯಿ ಸ್ಥಾಯಿ ಸಮಿತಿಗೆ ಜಯಾ ಬಚ್ಚನ್‌

Maldives Muizzu

Maldives ಅಧ್ಯಕ್ಷ ಮುಯಿಜ್ಜು ಭಾರತ ಪ್ರವಾಸ ಅ.6ರಿಂದ

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tggg

CJI; ಈಗಲೂ ನಾನೇ ಮುಖ್ಯಸ್ಥ: ವಕೀಲರಿಗೆ ಚಂದ್ರಚೂಡ್‌ ಕ್ಲಾಸ್‌

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

1-jaya

Dubey ಸಮಿತಿ ಬಿಟ್ಟು ಬೊಮ್ಮಾಯಿ ಸ್ಥಾಯಿ ಸಮಿತಿಗೆ ಜಯಾ ಬಚ್ಚನ್‌

Maldives Muizzu

Maldives ಅಧ್ಯಕ್ಷ ಮುಯಿಜ್ಜು ಭಾರತ ಪ್ರವಾಸ ಅ.6ರಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.