![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 22, 2023, 11:18 PM IST
ಮಂಗಳೂರು: ಮಂಗಳೂರು-ವಿಜಯಪುರ- ಮಂಗಳೂರು ವಿಶೇಷ ರೈಲು ಹಾಗೂ ಯಶವಂತಪುರ-ಮುರುಡೇಶ್ವರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ನೈಋತ್ಯ ರೈಲ್ವೇ ವಿಸ್ತರಣೆ ಮಾಡಿದೆ.
ನಂ. 07377 ವಿಜಯಪುರ- ಮಂಗಳೂರು ಜಂಕ್ಷನ್ ವಿಶೇಷ ರೈಲು ಈ ಮೊದಲು ಆ. 31ರ ವರೆಗೆ ಪ್ರತೀ ದಿನ ಸಂಚರಿಸಬೇಕಿದ್ದುದನ್ನು ಸೆಪ್ಟಂಬರ್ 1ರಿಂದ 30ರ ವರೆಗೆ ವಿಸ್ತರಣೆ ಮಾಡಲಾಗಿದೆ. ನಂ. 07378 ಮಂಗಳೂರು ಜಂಕ್ಷನ್ ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಈ ಹಿಂದೆ ಸೆಪ್ಟಂಬರ್ 1ರ ವರೆಗೆ ಇದ್ದುದನ್ನು ಸೆ. 2ರಿಂದ ಅಕ್ಟೋಬರ್ 1ರ ವರೆಗೆ ವಿಸ್ತರಣೆ ಮಾಡಲಾಗಿದೆ.
ನಂ. 06563 ಯಶವಂತಪುರ- ಮುರುಡೇಶ್ವರ ರೈಲು ಪ್ರತೀ ಶನಿವಾರ ಯಶವಂತಪುರದಿಂದ ಹೊರಡುತ್ತಿದ್ದು ಈ ಹಿಂದೆ ಆ. 26ರ ವರೆಗೆ ಸಂಚರಿಸುವುದಾಗಿ ಸೂಚಿಸಲಾಗಿತ್ತು. ಈಗ ಸೇವೆಯನ್ನು ಸೆ. 2ರಿಂದ 30ರ ವರೆಗೆ ವಿಸ್ತರಿಸಲಾಗಿದೆ.
ನಂ. 06564 ಮುರುಡೇಶ್ವರ ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಪ್ರತೀ ರವಿವಾರ ಮುರುಡೇಶ್ವರದಿಂದ ಸಂಚರಿಸುತ್ತಿದ್ದು ಆ. 27ರ ವರೆಗೆ ಸೂಚಿಸಲಾಗಿತ್ತು. ಹೊಸ ಆದೇಶದಂತೆ ಸೆ. 3ರಿಂದ ಅಕ್ಟೋಬರ್ 1ರ ವರೆಗೆ ವಿಸ್ತರಣೆ ಗೊಂಡಿರುವುದಾಗಿ ಪ್ರಕಟನೆ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.