Heart attack: ನಡುರಸ್ತೆಯಲ್ಲೇ ಹೃದಯಾಘಾತ: ಆಟೋ ರಿಕ್ಷಾ ಚಾಲಕ ದುರ್ಮರಣ
Team Udayavani, Aug 23, 2023, 10:45 AM IST
ಬೆಂಗಳೂರು: ರಸ್ತೆ ಬದಿ ಆಟೋ ನಿಲ್ಲಿಸಿ ಟೀ ಕುಡಿಯಲು ತೆರಳುತ್ತಿದ್ದ ಆಟೋ ಚಾಲಕ ಹೃದಯಾಘಾತವಾಗಿ ನಡುರಸ್ತೆಯಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಸಂಪಂಗಿರಾಮನಗರ ನಿವಾಸಿ ತಿಮ್ಮೇಶ್(53) ಮೃತ ಆಟೋ ಚಾಲಕ. ಮಂಡ್ಯ ಮೂಲದ ತಿಮ್ಮೇಶ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಹಲವು ವರ್ಷಗಳಿಂದ ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದರು.
ಸಂಪಂಗಿರಾಮನಗರ 4ನೇ ಕ್ರಾಸ್ ಬಳಿ ಬೆಳಗ್ಗೆ 9.30ರ ಸುಮಾರಿಗೆ ಟೀ ಕುಡಿಯುವ ಸಲುವಾಗಿ ಆಟೋ ನಿಲುಗಡೆ ಮಾಡಿ ಕೆಳಗೆ ಇಳಿದ್ದಾರೆ. ಈ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಎದೆ ಉಜ್ಜಿಕೊಂಡು ರಸ್ತೆ ದಾಟಲು
ನಾಲ್ಕೈದು ಹೆಜ್ಜೆ ಹಾಕುತ್ತಿದ್ದಂತೆ, ನಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ತಿಮ್ಮೇಶ್ ನೆರವಿಗೆ ಧಾವಿಸಿದ್ದು, ಎದೆ ಉಜ್ಜಿ ನೀರು ಕುಡಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತಿಮ್ಮೇಶ್ ಹೃದಯಾ ಘಾತಕ್ಕೊಳಗಾಗಿ ಮೃತಪಟ್ಟಿ ದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ತಿಮ್ಮೇಶ್ ಕುಟುಂಬದವರು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂಪಂಗಿರಾಮನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್: ಸಭೆಯಲ್ಲಿ ಏನಾಯ್ತು?
Mudhol: ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ ಸೆರೆ
UV Fusion: ನಂಬಿಕೆಯೊಂದಿಗೆ ವರ್ಷದ ಆಗಮನ
Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.